ಬಗೆಹರಿದ ವಿದ್ಯುತ್ ಸಮಸ್ಯೆ ಇಚ್ಲಂಪಾಡಿ

ಶೇರ್ ಮಾಡಿ

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ) ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗ

ಶ್ರೀ ರಾಮಚಂದ್ರ ,ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ) ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗ

ಇಚ್ಲಂಪಾಡಿ ಭಾಗದಲ್ಲಿ ಅನೇಕ ಸಮಯದಿಂದ ಇದ್ದ ವಿದ್ಯುತ್ ಸಮಸ್ಯೆ ಗೆ ಸ್ಪಂದಿಸಿ ಇದೀಗ ನಿರಂತರ ವಿದ್ಯುತ್ ಪೂರೈಸಲು ಕಾರಣೀಕರ್ತರಾದ ಪುತ್ತೂರಿನ ಮೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ರಾಮಚಂದ್ರ ಅವರಿಗೆ ಅನಂತಾನಂತ ಧನ್ಯವಾದಗಳು

ಅನೇಕ ಸಮಯಗಳಿಂದ ವಿದ್ಯುತ್ ಸಮಸ್ಯೆ ಯಿಂದ ಕಂಗೆಟ್ಟು ಕೃಷಿ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿ ಸಮಸ್ಯೆ ಯಾಗುತ್ತಿದ್ದ ಇಚ್ಲಂಪಾಡಿ ಪರಿಸರದಲ್ಲಿ ಈಗ ನಿರಂತರ ವಿದ್ಯುತ್ ದೊರಕುತ್ತಿದ್ದು ಜನ ಸಾಮಾನ್ಯರಲ್ಲಿ ಮಂದಹಾಸ ಮೂಡಿದೆ. ನಿರಂತರ ಪವರ್ ಕಟ್ ಹಾಗೂ ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದ ಕೃಷಿಕರಲ್ಲಿ ಅಸಹನೆ ಮನೆ ಮಾಡಿತ್ತು..ಈ ಎಲ್ಲ ಸಮಸ್ಯೆಗಳನ್ನು ಮನಗಂಡ ಪುತ್ತೂರು ಮೆಸ್ಕಾಂ ನ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಶ್ರೀ ರಾಮಚಂದ್ರ ಇವರ ಪರಿಶ್ರಮದ ಫಲವಾಗಿ ಈ ಭಾಗದಲ್ಲಿ ನಿರಂತರ ವಿದ್ಯುತ್ ಜನರಿಗೆ ದೊರಕುವಂತಾಗಿದೆ. ಜನಾನುರಾಗಿ ಅಧಿಕಾರಿಗಳಿದ್ದಾಗ ಜನಸಾಮಾನ್ಯರ ಸಮಸ್ಯೆ ಗಳಿಗೆ ಪರಿಹಾರ ಸಾಧ್ಯ ಎನ್ನುವುದಕ್ಕೆ ಇದೊಂದು ಉದಾಹರಣೆ. ಯಾರೋ ಮಾಡಿದ ಕೆಲಸವನ್ನು  ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುವ ಈ ಕಾಲದಲ್ಲಿ  ತಾನು ಮಾಡಿದ ಕೆಲಸವನ್ನು ಯಾವುದೇ ಹೆಸರನ್ನೂ ಬಯಸದೆ ಸರಕಾರದ ಕೆಲಸ ದೇವರ ಕೆಲಸ ಎಂದು ತಿಳಿದಿರುವ ಇಂಥ ಅಧಿಕಾರಿಗಳಿಗೆ ಶುಭವಾಗಲಿ ಎಂದು ಈ ಭಾಗದ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ                 

ಉದಯ ಕುಮಾರ್, ಗೋಕುಲ,ಇಚ್ಲಂಪಾಡಿ

See also  ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?