ನ್ಯಾಯದ ಬಾಗಿಲು ಮುಚ್ಚಿದೆ
ಅನ್ಯಾಯದ ಬಾಗಿಲು ತೆರೆದಿದೆ
ನ್ಯಾಯದ ಬಾಗಿಲು ನ್ಯಾಯವಾದಿಗಳಿಂದ ತೆರೆಸಬಲ್ಲೆಯಾ ………………………ಅವ್ಯಕ್ತ
ದಾರಿಯಲ್ಲಿ ಬಂದವನಿಗೆ ಆಶಾದೀಪವಾಗಿ
ದಾರಿ ತಪ್ಪಿ ಬಂದವನಿಗೆ ಅಡ್ಡಗೋಡೆಯಾಗಿ
ನಿಂತ ನ್ಯಾಯವಾದಿ ಬದುಕಿರುವನೆ………………………………………ಅವ್ಯಕ್ತ
ಕಕ್ಷಿದಾರ ನ್ಯಾಯವಾದಿಯ ಅನ್ನದಾತ
ಸಮಾಜದ ಜೀವದಾತ ನ್ಯಾಯ
ನನ್ನಿಂದ ಅನ್ನದಾತನ ಶಿಕ್ಷಿಸಿ ಜೀವದಾತನ ಉಳಿಸಲು ಸಾಧ್ಯವೇ ……………………..ಅವ್ಯಕ್ತ
ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಮೊರೆಹೋಗದೆ
ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡುತಿರೆ
ನ್ಯಾಯ ನ್ಯಾಯಾಲಯದಿಂದ ಸಿಗುವುದೆಂತು ……………………….ಅವ್ಯಕ್ತ
ನ್ಯಾಯಯುತ ಬಾಳುವವರು ನ್ಯಾಯವಾದಿಗಳಿಗೆ ಮುಗಿಬೀಳೆ
ನ್ಯಾಯ ಭಕ್ಷುಕರಿಗೆ ನ್ಯಾಯವಾದಿಗಳು ಸಿಗದಿರುತಿರೆ
ದಾನವರು ಮಾನವರಾಗಿ ಜೈಲಿನಿಂದ ಹೊರಬರುತಿಹರು ……………………ಅವ್ಯಕ್ತ
ಸಾರಿಗೆ ನಿಯಮ ಉಲ್ಲಂಘಿಸಿದರೆ ಅಪಾಯ ಪಾಲಿಪರು
ಕಾನೂನು ಮುರಿದರೆ ಶಿಕ್ಷೆ , ರಕ್ಸಿಪ ನ್ಯಾಯವಾದಿಗಳಿಹರು
ಪರಲೋಕದ ನ್ಯಾಯವಾದಿ ಶಿಕ್ಷಿಸದೆ ಬಿಡುವನೇ …………………………………ಅವ್ಯಕ್ತ