ಎಲ್ಲ ಜಾತಿ ಮತ ಧರ್ಮದವರ ದೇವಾಲಯಗಳನ್ನು ಒಟ್ಟಾಗಿ ತೆಗೆದು ಕೊಂಡಾಗ ಬೆರಳೆಣಿಕೆ ದೇವಾಲಯಗಳು ಮಾತ್ರ ಸ್ವಾಲಂಬಿ ಮತ್ತು ಸಂತುಷ್ಟ ದೇವಾಲಯಲು ಗೋಚರಿಸುತವೆ. ಮಿಕ್ಕಿದೆಲ್ಲವು ಪರಾವಲಂಬಿ ಮತ್ತು ಸಂತುಷ್ಟ ರಹಿತ. ಅರಸರ ಕಾಲದಲ್ಲಿ ದೇವಾಲಯಗಳ ಎಲ್ಲ ಖರ್ಚು ವೆಚ್ಚಗಳನ್ನು ಅರಸರೇ ನೋಡಿಕೊಳ್ಳುತ್ತಿದ್ದರು. ಈ ದೃಷ್ಟಿಕೋನದಲ್ಲಿ ನೋಡಿದಾಗ ಈಗ ಪ್ರತಿ ದೇವಾಲಯಗಳ ಖರ್ಚು ವೆಚ್ಚಗಳನ್ನು ಸರಕಾರ ಭರಿಸಬೇಕು. ಆದರೆ ಸರಕಾರ ಇದರ ಬದಲಾಗಿ ಹೆಚ್ಚು ಲಾಭವಿರುವ ದೇವಾಲಯಗಳನ್ನು ಮಾತ್ರ ವಶಕ್ಕೆ ತೆಗೆದುಕೊಂಡು ಬಾಕಿ ಜನರಿಗೆ ಬಿಟ್ಟಿದ್ದಾರೆ. ದೇವರು ಇರುವ ಸ್ಥಳ ದೇವಾಲಯ , ಇದು ಮಾನವರಲ್ಲಿ ಉತ್ತಮ ಸಂಸ್ಕಾರವನು ಕೊಡುವುದರಲ್ಲಿ ಬಹು ಪ್ರಾಮುಖ್ಯ ಕೆಲಸ ಮಾಡುತಿದೆ. ಆದುದರಿಂದ ಕನಿಷ್ಠ ಒಂದು ಉಪಾಧ್ಯಾಯರ ಸಂಬಳದಷ್ಟಾದರೂ ಒಂದು ದೇವಾಲಯಕ್ಕೆ ಕೊಡಬಹುದಿತ್ತು.
ಇದರ ಹೊರತಾಗಿ ನಾವು ಸಾರ್ವಜನಿಕರು ಹೇಗೆ ಸ್ವಾಲಂಬಿ ಸಂತುಷ್ಟ ದೇವಾಲಯನ್ನು ಮಾಡಬಹುದು ಎಂಬ ಬಗ್ಗೆ ಜನ ಮನದ ಅಭಿಪ್ರಾಯಗಳ ಸಂಗ್ರಹ
೧ ನಮ ಒಳಗೆ ದೇವರಿದ್ದಾನೆ ,ಗೌರವಿಸಿ , ನಿತ್ಯ ನಿರಂತರ , ಭಾವ ಪೂಜೆ ಸಲ್ಲಿಸಿದಾಗ ದೇವರು ದೇವಾಲಯದಲ್ಲಿ ಆಶೀರ್ವದಿಸುತಾನೆ
೨. ಮಠ – ದೇವಾಲಯಕ್ಕೆ , ದೇವಾಲಯ – ಮನೆಗೆ , ದೇವರು ಮನಸ್ಸಿಗೆ , ಭೇಟಿಯ ಫಲಶ್ರುತಿ
೩. ಸದಾ ನಮ್ಮೊಳಗಿರುವ ದೇವರಿಗೆ ಮನೆ ಮಂದಿಯ ಶ್ರೇಷ್ಠ ಸ್ಥಾನ ಮಾನ
೪. ಪ್ರತಿಯೊಬ್ಬನಿಂದ ಕ್ಷೇತ್ರದಲ್ಲಿ ವಾರ್ಷಿಕ ನಿತ್ಯಪೂಜೆ
೫. ಆಂತರಿಕ ಸ್ವಚ್ಛತೆಗಾಗಿ (ಮನಸಿನ ) ದೇವರಲ್ಲಿ ವಿಮೆ (೧%), ಕ್ಷೇತ ನಾಮ ಸ್ಮರಣೆ
೬. ಬದುಕಿನ ವಿಶೇಷ ದಿನಗಳಲ್ಲಿ ಕ್ಷೇತ್ರ ಕಾಣಿಕೆ ಸಮರ್ಪಿಸಿ ಆಶೀರ್ವಾದ
೭. ವ್ಯಾಪಾರ ನೀತಿ ಅಳವಡಿಕೆ
೮. ದೇವಾಲಯದಿಂದ ತಿಂಗಳಿಗೊಮ್ಮೆ ಮನೆ ಮನೆ ಭೇಟಿ
೯. ದೇವಾಲಯದಲ್ಲಿ ವಿಶೇಷ ದಿನಗಳಲ್ಲಿ ಕಾಯಕ ಸೇವೆ . ರೋಗ ಮುಕ್ತ ಬಾಳಿಗಾಗಿ
೧೦. ಉದಿಮೆಗಳಲ್ಲಿ ದೇವರಿಗೆ ಪಾಲು (೧೦%)
೧೧. ದೇವಾಲಯದಿಂದ – ದೇವರಲ್ಲಿಗೆ
೧೨. ಜಗತ್ತಿನ ಅತಿ ದೊಡ್ಡ ಕಂಪನಿ ದೇವರು
೧೩. ವ್ಯಕ್ತಿಕ ಪೂಜೆಯಿಂದ – ಸಾಮಜಿಕ ಪೂಜೆಗೆ ಚಾಲನೆ
೧೪. ಬಾಳಿನ ಓಟಕ್ಕೆ – ಧಾರ್ಮಿಕ ಟ್ರ್ಯಾಕ್
೧೫. ಒಂದೇ ತಟ್ಟೆಯಲ್ಲಿ ಊಟ ಮಾಡುವ ನಾವು ಬಂಧುಗಳು (ಗಾಳಿ)
೧೬. ಆವಿಸ್ಕಾರಕ್ಕೆ ಚಾಲನೆ – ಪರೋಕ್ಷ ಪೂಜೆ ಇತ್ಯಾದಿ
೧೭. ಉದ್ಯೋಗ ಉದ್ಯಮಕ್ಕೆ ಒತ್ತು
೧೮. ದೇವಾಲಯಕ್ಕೆ ಕೊಡುಗೆ ಸಲ್ಲ . ಸಾಲದ ಕಿಂಚಿತ್ತು ಪಾವತಿ
? ಅತ್ಯುತ್ತಮ ಅತಿ ವೇಗದ ಶಿಕ್ಸಣ – ಬದುಕಿನ ಶಿಕ್ಸಣ – ದೇವರಿಂದ ಮತ್ತು ದೇವಾಲಯದಿಂದ ಮಾತ್ರ ಸಾದ್ಯ ?