ಕೋರೋಣ ಹಾವಳಿಯಿಂದಾಗಿದೆ ಇಕ್ಕಟ್ಟು
ಜನಜಾಗ್ರತಿಯಿಂದಾಗಿ ದೂರವಾಗಿದೆ ಬಿಕ್ಕಟ್ಟು
ಆತ್ಮ ನಿರ್ಭರ ಕೈಜೋಡಿಸಿದೊಡೆ ಒಗ್ಗಟ್ಟು
ಪಲಾಯನವಾದಿಯಾದೊಡೆ ಜೀವನವೇ ಕಗ್ಗಂಟು
ಸ್ವಾವಲಂಬನೆ ಕಷ್ಟವಾದರೂ ಬದುಕಿಗೆ ಪೂರಕ
ಪರಾವಲಂಬನೆ ಇಷ್ಟವಾದರೂ ಭವಿಸ್ಯಕ್ಕೆ ಮಾರಕ
ನಿತ್ಯ ನಿರಂತರ ನೆರಳಾಶ್ರಯ ಬಯಸೋದು ಬಾಧಕ
ಕಲ್ಲುಮುಳ್ಳುಗಳಿಗಂಜದೆ ಗುರಿ ಮುಟ್ಟುವವ sadaka
ಹಿಂದುಸ್ತಾನದಲಿ ತುಂಬಿತುಳುಕುತಿದೆ ದೇವಸ್ಥಾನ
ಭಕ್ತಿಗಿಂತ ಭಯ ನಮನವೇ ದೈವಸ್ಥಾನ
ಪ್ರತಿಯೊಬ್ಬರಿಗೂ ಬೇಕಿದೆ ಅಧಿಕಾರದ ಮಾನ ಸ್ಥಾನ
ಆಗಾಗ ಕಾಲು ಕೆದರುತಿದೆ ಚೀನಾ ಪಾಕಿಸ್ತಾನ
ಸರಕಾರ – ನಮ್ಮ ದೃಷ್ಟಿ ಫಲಿತಾಮಶದೆಡೆಗೆ
ಪಾಲಕ – ನಮ್ಮ ಗಮನ ಅಂಕದೆಡೆಗೆ
ಬಾಲಕ – ನಮ್ಮ ನಡೆ ಗುರುವಿನೆಡೆಗೆ
ಶಿಕ್ಷಕ – ನಮ್ಮ ನಡೆ ಬ್ಯಾಂಕಿನೆಡೆಗೆ
ವೈರಾಶಾದಿಗಳು ಹೆಚ್ಚು ಆದೊಡೆ ಲಕ್ಡೌನ್
ಬೇಡಿಕೆ ಮುಂದಿಟ್ಟು ಕಚೇರಿಗೆ ಹೋದರೆ ಸೀಲ್ಡೌನ್
ಹತಾಶರಾಗಿ ಮುಸ್ಕರ ಹೂಡಿದರೆ ಆಗ್ತಾರೆ ಕೋಲ್ಡೌನ್
ವಿದ್ಯಾರ್ಥಿ ಪ್ರಶ್ನೆ ಕೇಳಿದರೆ ಶಿಕ್ಸಕ ಅನ್ನುತಾನೆ ಸಿಟ್ಡೌನ್
ಹತ್ತಾರು ಜನರ ಮುಂದೆ ಮೆರೆಯುವವ ಪ್ರಚಾರಪ್ರಿಯ
ಜ್ಞಾನವನ್ನು ಕ್ರೂಡೀಕರಿಸಿ ಬತ್ತಿ ಇಳಿಸುವವ ವಿಚಾರಪ್ರಿಯ
ಸ್ವಾರ್ಥಕ್ಕಾಗಿ ಅವರಿವರ ಕಾಲು ಹಿಡಿಯುವವ ಚಾರಪ್ರಿಯ
ಸದ್ದುಗದ್ದಲವಿಲ್ಲದೆ ನಿಯಮ ಪಾಲಿಸುವವ ಆಚಾರಪ್ರಿಯ
ಕಾನೂನು ಪಾಲಿಸಬೇಕೆನ್ನುವುದು ಸರಳ
ನಿಜ ಜೀವನದಲ್ಲಿ ಆಚರಿಸುವುದು ವಿರಳ
ಸಮಾಜ ಕಂಟಕ ಜೀವನ ದುರುಳ
ನನ್ನಿಂದಲೇ ಬೆಳಕು ಎನ್ನುವವ ಮರುಳ
ಪ್ರಾಯ ಬಂದಾಗ ಆಗಬೇಕು ವಿವಾಹ
ಮಳೆ ರಭಸವಾದಾಗ ಆಗೋದು ಪ್ರವಾಹ
ಸಿಕ್ಸರ್ ಹೊಡೆದಾಗ ಎನ್ನುವರು ವಾರೆವಾಹ
ಬದುಕು ಜೀರೋ ಆದಾಗ ಎನ್ನುವವರು ಹ್ಹ ಹ್ಹ ಹ್ಹ
ನಾಗರಪಂಚಮಿಯಂದು ಸಂಭ್ರಮದ ನಾಗಾರಾಧನೆ
ಸಂಕಟ ಬಂದಾಗ ಅಕಟಕಟಾ ಎಂದು ಬೂತಾರಾಧನೆ
ಹುಟ್ಟುಹಬ್ಬ ಮದುವೆ ಸೀಮಂತಗಳಂದು ಸಮಾರಾಧನೆ
ಮರು ದಿನವೇ ಹೊಸ ಸಾಲ ಎಲ್ಲಿಂದ ಎಂದು ಸಂಶೋಧನೆ
ಸಮಾಜದಲ್ಲಿಂದು ದೂರವಾಗಿದೆ ವರದಕ್ಷಿಣೆ
ಅಪರೂಪವಾಗಿ ಕಾಣುತಿದೆ ವಧುದಕ್ಷಿಣೆ
ಭಕ್ತನೋರ್ವ ಮಂದಿರದಲ್ಲಿ ಹಾಕುವನು ಪ್ರದಕ್ಷಿಣೆ
ಬಾಗಿಲಲ್ಲೇ ನಿಲ್ಲುವನು ಕೊಡಿ ಸ್ವಾಮಿ ದಕ್ಷಿಣೆ
ಬೇಡಿಕೆಗಾಗಿ ಬಲಿಪಶುಗಳ ಕೂಗಾಟ
ಸಂತೈಸುವುದು ಅಧಿಕಾರಿಗಳಿಗೆ ಬಾಯಿಪಾಠ
ಗಡಿಯಲ್ಲಿ ಚೀನಾ ಪಾಕ್ ವಿರುದ್ಧ ಸೈನಿಕರ ಹೋರಾಟ
ಆಗಸದಲ್ಲಿ ಮಂತ್ರಿ ಮಗದರ ವೈಮಾನಿಕ ಹಾರಾಟ