ಸ್ತ್ರೀ ಪುರುಷ ಒಂದೇ ನಾಣ್ಯದ ಎರಡು ಮುಖಗಳು ಆದರೂ ಕೂಡ ನಾಣ್ಯದ ಒಂದು ಮುಖ ಮಾನವ ಕುಲಕೋಟಿಯ ಆದಿಯಿಂದ ಹಿಡಿದು ಇಂದಿನವರೆಗೆ ಗುರುತಿಸಲಾಗದಷ್ಟು ಮಂಕಾಗಿ ಕಾಣುತಿದೆಯೇ? ಇದು ಖಟು ಸತ್ಯ ಅದು ಯಾವುದು ಎಂದು ಬಿಡಿಸಿ ಹೇಳುವ ಅವಶ್ಯಕತೆ ಖಂಡಿತಾ ಇಲ್ಲವೇ ಇಲ್ಲ. ಇದಕ್ಕೆ ಪುರುಷ ಪ್ರದಾನ ಸಮಾಜದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಟ್ಟು ಸಾಧಕ ಬದುಕು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು ಎಂಬುದ ಮನಗಂಡು ಮುನ್ನಡೆಯಲು ಈ ನಮ್ಮ ವೇದಿಕೆ ವಿಭಿನ್ನ ದೃಷ್ಟಿಕೋನದಲ್ಲಿ ಮುಂದೆ ಮುಂದೆ ಸಾಗಲಿದೆ. ಇಲ್ಲಿ ನಮ್ಮ ಸ್ಪಷ್ಟ ನಿಲುವು ನೋವು ನಿವಾರಕ ಮದ್ದು ಹೊರತು ಯಾವುದೇ ವರ್ಗಕ್ಕೆ ನೋವು ಮಾಡುವುದಾಗಲಿ – ಭಿನ್ನತೆ ಹುಟ್ಟಿಸುವುದಾಗಲಿ – ಯಾವುದೇ ಕೀಳು ಮಟ್ಟದ ಇಚ್ಛೆ ಹೊಂದಿರದೆ – ಮಾನವಕುಲ ಏಕ ಚಿತ್ತದಿಂದ ಒಂದು ತಾಯಿಯ ಮಕ್ಕಳಂತೆ ಬಾಳುವ ಸುಖ ಶಾಂತಿ ನೆಮ್ಮದಿಯ ಜೀವನಕ್ಕೆ ಅಡಿಪಾಯದ ಕೆಲಸದ ಶುಭಾರಂಭ.
ಸ್ತ್ರೀ ಸಮಾಜ ಹಿಂದೆ ಬಿದ್ದಿರುವುದನ್ನು ಸೂಚಿಸುವ ಕೆಲವು ಸನ್ನಿವೇಶಗಳು
ಬೆರಳೆಣಿಕೆಯಲ್ಲಿರುವ ಶಾಸಕರು ಸಂಸದರು ಮುಖ್ಯಮಂತ್ರಿಗಳು ಪ್ರಧಾನಿಗಳು ರಾಷ್ಟ್ರಪತಿಗಳು ಇತ್ಯಾದಿ
ಅತ್ಯುನ್ನತ ಹುದ್ದೆ ಅಲಂಕರಿಸದವರು ಕನಿಷ್ಠ ಮಂದಿ
ಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ದೇಶದ ಪ್ರಧಾನಿ ಯಾ ಅಧ್ಯಕ್ಷರು ನಗಣ್ಯ
ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ನೂರು ಜನರ ಪೈಕಿ ಎರಡಂಕಿ ದಾಟಲು ಸಾಧ್ಯವಾಗದಿರುವುದು
ಹಿಂದಿನ ರಾಜರು ಬಹುತೇಕರು ಪುರುಷರು
ಸ್ಥಾನ ಮನ ಘನತೆ ಕೊಡುವಲ್ಲಿ ತಾರತಮ್ಯ
ವೈವಾಹಿಕ ದೃಷ್ಟಿಕೋನದಲ್ಲಿರುವ ಗುರುತರ ಹೊಣೆಗಾರಿಕೆ
ಆರ್ಥಿಕ ಸ್ವಂತಂತ್ರ್ಯ ಬಹುಪಾಲು ಶೂನ್ಯದತ್ತ
ಗಣನೆಗೆ ಬಾರದ ಅವಿಸೃತ ಮನೆಯಲ್ಲಿ ಮಾಡುವ ಅಡುಗೆ ಕೆಲಸ
ವಿದುರ ಮದುವೆಗೆ ಗರಿಷ್ಠ ಅವಕಾಶ ವಿಧವೆ ಮದುವೆಗೆ ಕನಿಷ್ಠ ಅವಕಾಶ
ಬಹುತೇಕ ಗುಲಾಮಗಿರಿ ಬದುಕು
ಅತ್ಯಾಚಾರ ಅಸ್ತ್ರ ಸ್ತ್ರೀ ಮೇಲೆ ಮಾತ್ರ ಪ್ರಯೋಗ
ಜಾತಿ ಮತ್ತು ಸಾಮಾಜಿಕ ಕಟ್ಟುಪಾಡುಗಳ ಬ್ರಹ್ಮಾಸ್ತ್ರ ಸ್ತ್ರೀ ಸಮಾಜದ ಮೇಲೆ ಮಾತ್ರ ಪ್ರಯೋಗ
ಇತ್ಯಾದಿ ಇತ್ಯಾದಿ ………………………………………………………………………………
ಇಲ್ಲಿ ಸ್ತ್ರೀ ಸಮಾಜದ ವ್ಯಕ್ತಿ ವ್ಯಕ್ತಿತ್ವ ಘನತೆ ಗೌರವ ಸ್ಥಾನ ಮಾನ ಕೊಡುಗೆ ಇತ್ಯಾದಿಗಳನ್ನು ಜಾಗತಿಕ ಮಟ್ಟಕೆ ಉಚಿತವಾಗಿ ಮತ್ತು ಕನಿಷ್ಠ ಶುಲ್ಕದೊಂದಿಗೆ ಪರಿಚಯಿಸುವ ವೇದಿಕೆ ಸದಾ ನಿಮ್ಮ ಜೊತೆ ಇದೆ.
ಬನ್ನಿ ನಾವೆಲ್ಲರೂ ನಮ್ಮ ನಮ್ಮ ಅಭಿವೃದ್ಧಿ ಮಾಡುವತ್ತ ಮಾತ್ರ ಕಾರ್ಯೋನ್ಮ್ಕರಾಗೋಣ – ಅದುವೇ ನಮ್ಮ ಮನೆ ಊರು ಸಮಾಜ ದೇಶ ಮಾನವಕುಲಕೋಟಿಯೊಂದಿಗೆ ಜಾಗತಿಕ ಮಟ್ಟದ ಅಭಿವೃದ್ಧಿಯಾಗಿ – ನಮ್ಮ nadu ಸ್ವರ್ಗವಾಗಲಿ