ಮಹಿಳಾ ಬುಲೆಟಿನ್ ಇಂದು ಪ್ರತಿಯೊಂದು ಮಹಿಳೆಯರ ಮನೆ ಬಾಗಿಲಿಗೆ ಬಂದು ನೀವು ಕನಿಷ್ಠ ಐದು ಮಹಿಳೆಯಾದರು ಸೇರಿ ಒಂದು ಮಹಿಳಾ ಸೇವಾ ಒಕ್ಕೂಟ ರಚಿಸಿ – ಆ ಒಕ್ಕೂಟದ ಮೂಲಕ ಪ್ರಕೃತಿಯ ಮೂಲಗುಣವನ್ನು ಮೈಗೂಡಿಸಿಕೊಂಡಿರುವ ನಿಮ್ಮ ಬದುಕನ್ನು ಕಾರ್ಯಕ್ಷೇತ್ರಗಳನ್ನು ಸಮಾಜದೊಂದಿಗೆ ಜಗತ್ತಿಗೆ ಪರಿಚಯಿಸಲು – ವಿಶೇಷವಾದ ವಿಬ್ಭಿನ್ನವಾದ ನೂತನವಾಗಿ ಆವಿಸ್ಕಾರಗೊಂಡಿರುವ ವೇದಿಕೆ ಸ್ವಾಗತ ಕೋರುತಿದೆ.
ಮಹಿಳಾ ಬುಲೆಟಿನ್ ಬಗ್ಗೆ ಹೇಳುವುದಾದರೆ – ಸೇವಾ ಉದ್ದೇಶದಿಂದ ಹುಟ್ಟಿದ ಅವ್ಯಕ್ತ ಬುಲ್ಲೆಟಿನಿನ ಒಂದು ವಿಭಾಗ – ವ್ಯಾಪಾರ ದರೋಡೆ ಸಂಸ್ಕಾರದಿಂದ ನಮ್ಮ ಮೂಲ ಸೇವಾ ಸಂಸ್ಕಾರ ಬೀಜ ಬಿತ್ತಿ ಹೆಮ್ಮರವಾಗಿಸಲು ಪಣತೊಟ್ಟಿದೆ – ಸಮಾಜದ ವಸ್ತು ಸ್ಥಿತಿಯನ್ನು ಮಾತ್ರ ಪ್ರಕಟಿಸುವ ದ್ರಡ ಸಂಕಲ್ಪ ಹೊಂದಿದ್ದು – ಕನಿಷ್ಠ ಶುಲ್ಕದಲ್ಲಿ ಪ್ರತಿಯೊಬ್ಬರಿಗೂ – ಸ್ಥಾನ ಮಾನ ಘನತೆ ಗೌರವ ಉನ್ನತಿಗೆ ಮತ್ತು ಸಂಪಾದನೆ ಇತ್ಯಾದಿಗಳಿಗೆ ವಿಪುಲ ಅವಕಾಶ ಒದಗಿಸಲಿದೆ.
ಮಹಿಳಾ ಸೇವಾ ಒಕ್ಕೂಟ ಯಾಕೆ – ವ್ಯಾಪಾರ ದೃಷ್ಟಿಯಲ್ಲಿ ಒಂದು ಉದ್ಯಮ ನಡೆಸಿದಾಗ ಹೆಚ್ಚಿನ ವೆಚ್ಚ ಪ್ರಚಾರಕ್ಕೆ ಹೋಗುತದೆ , ಆದರೆ ಒಕ್ಕೂಟ ಪದ್ದತಿಯಿಂದ ಸಕಲ ಪ್ರಯೋಜನಗಳು ಜನ ಸಾಮಾನ್ಯರಿಗೆ ಸಿಗುವಂತೆ ಮಾಡುವ ಉದ್ದೇಶ ಅಡಗಿದೆ.
ನಮ್ಮ ಒಕ್ಕೂಟದ ಮತ್ತು ನಮ್ಮ ಕೆಲಸ ಯಾವುದು
ಪ್ರತಿ ಮಹಿಳೆಯರನ್ನು ಸಮಾಜಕ್ಕೆ ಪರಿಚಯಿಸುವುದು – ಭಾವಚಿತ್ರ ಸಹಿತ ಯಾ ರಹಿತ , ವೃತ್ತಿ , ಜಾತಿ ,ಬೇಕಾದವರಿಗೆ ಮಾತ್ರ ಮೊಬೈಲ್ ನಂಬರು , ತಂದೆ ತಾಯಿ ಹೆಸರು , ಒಡಹುಟ್ಟಿದವರ ಹೆಸರು , ಮನೆಯವರ ಹೆಸರು , ಪತಿ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳ ಹೆಸರು ಮತ್ತು ವಿಳಾಸ.
ಬೇರೆ ಬೇರೆ ಸಂಘ ಸಂಸ್ಥೆಗಳ ಸಂಕ್ಷಿಪ್ತ ಸಮಗ್ರ ಶಾಶ್ವತ ಪರಿಚಯಕ್ಕೆ ಅವಕಾಶ.
ಇದು ನಮಗೆ ಮತ್ತು ನಿಮಗಾಗಿ ಹುಟ್ಟಿ ಬೆಳೆಯುವ ಸಂಸ್ಥೆ ಉಪಯೋಗಿಸಿ ಬದುಕು ಹಸನಾಗಿಸೋಣ
ಅಭಿಪ್ರಾಯಗಳಿಗೆ ಸದಾ ಸ್ವಾಗತ – ಸಮಯ ಸಂದರ್ಭ ಅನುಸಾರವಾಗಿ ಅಳವಡಿಸಲಾಗುವುದು