ಪ್ರಜಾಪ್ರಭುತ್ವದ ರಾಜರು - ಸಂಸತ್ ಸದಸ್ಯರು - ಹತ್ತು ಲಕ್ಸ್ಯಕ್ಕೂ ಮಿಗಿಲಾಗಿ ಪ್ರಜೆಗಳು ತಮ್ಮ ಅದಿಕಾರಪತ್ರವನ್ನು ಮತದಾನದ ಮೂಲಕ ನಿಮಗೆ ಕೊಟ್ಟು - ನಾವು ಬಯಸಿದ - ಸುಖ ಶಾಂತಿ ನೆಮ್ಮದಿಯ ಬಾಳಿನ ಕನಸು ಈಡೇರಲು - ಜನರ ಆಡು ಮಾತಿನಲ್ಲಿ ವ್ಯಕ್ತವಾಗುವ ಮಾತುಗಳನ್ನು ಸಂಗ್ರಹಿಸಿ - ನನ್ನ ಅನಿಸಿಕೆಗಳನ್ನು ಕ್ರೂಡೀಕರಿಸಿ - ನಿಮ್ಮ ಗಮನಕ್ಕೆ ಕಳುಹಿಸುತಿದ್ದೇನೆ. ನಿಮ್ಮ ಅಮೂಲ್ಯ ಸಮಯ ಪೋಲು ಮಾಡಿದುದಕ್ಕೆ ಕ್ಷಮೆಯಿರಲಿ.
ನಿಮಗೆ ನಮ್ಮ ಅಧಿಕಾರ ಪತ್ರ ನೀಡಿದವರಲ್ಲಿ - ಸ್ವಾಮಿಗಳು , ತ್ಯಾಗಿಗಳು, ಅರಸು ಮನೆತನದವರು , ಕೆಳಮಟ್ಟದಿಂದ ಹಿಡಿದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರು, ಡಾಕ್ಟರ್ಸ್ , ಅಡ್ವೊಕೆಟ್ಸ್ ,ಇಂಜಿನೀರ್ಸ್ , ಆಡಿಟರ್ಸ್ , ಕೃಷಿಕರು , ....................................... ಎಲ್ಲರು ಸೇರಿದ್ದಾರೆ.
ಕೆಲವು ಅನಿಸಿಕೆಗಳು ಅನುಷ್ಠಾನಕ್ಕಾಗಿ
೧. ಕನಿಷ್ಠ ವಿದ್ಯೆ - ಸಾಮಾನ್ಯ ಡಿಗ್ರಿ ಮತ್ತು ಒಂದು ವರ್ಷದ ತರಬೇತಿ , ಪ್ರಜಾಪ್ರಭುತ್ವದ ಶಾಸಕಾಂಗ ಕಾರ್ಯಂಗ ನ್ಯಾಯಾಂಗ - ಕೊನಯ ಎರಡಕ್ಕೆ ಕನಿಷ್ಠ ವಿದ್ಯೆ ಅರ್ಹತೆ ಇದ್ದು - ಆಡಳಿತ ನಡೆಸುವ ಬಹು ಮುಖ್ಯ ಅಂಗಕ್ಕೆ ಶೂನ್ಯ ಅರ್ಹತೆ - ಅತಿ ಕೆಟ್ಟ ಸಂಪ್ರದಾಯ - ಶೀಘ್ರ ಗಮನ ಅನಿವಾರ್ಯ
೨.ಬಹು ಪಕ್ಷ ಪದ್ಧತಿ ಅಳವಡಿಕೆ - ಅಭಿವೃದ್ಧಿ ಚಿಂತನೆಗಳಿಗೆ ಕೊಟ್ಟ ಅವಕಾಶ - ದೇಶ ಇಂದು ಸ್ವಾರ್ಥ ಮತ್ತು ಪಕ್ಷ ಚಿಂತನೆಗೆ ಬಲಿಯಾಗತಿದೆ - ದೇಶಕ್ಕೆ ಎರಡೇ ಪಕ್ಷ ಅನಿವಾರ್ಯ. ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡುವವರು - ದೇಶಕ್ಕಾಗಿ ಹೊಂದಾಣಿಕೆ ಮಾಡೋಣ
೩.ಸ್ತ್ರೀಯರಿಗೆ ಮೀಸಲಾತಿ - ಕೆಳಗಿನೆ ಗ್ರಾಮ, ತಾಲೂಕು ಜಿಲ್ಲಾಪಂಚಾಯ್ತಿಗಲ್ಲಲ್ಲಿದ್ದಂತೆ ಮುಂದುವರಿಕೆ - ಪ್ರತಿ ಐದು ವರ್ಷಕೊಮ್ಮೆ ಕ್ಷೇತ್ರ ಬದಲಾವಣೆ
೪. ನೂರಕ್ಕೆ ನೂರರಷ್ಟು ದೇಶದ ಕಾನೂನು ಪಾಲನೆ - ಅಸಾಧ್ಯವಾದ ಕಾನೂನನ್ನು ರದ್ದು ಮಾಡುವುದು
೫. ಪ್ರಜಾಪ್ರಭುತ್ವ ದೇಶದಲ್ಲಿ ಸತ್ಯಾಗ್ರಹ ,ಬಂದ್ ಇತ್ಯಾದಿ ಚಳವಳಿಗೆ ಅವಕಾಶವೇ ಇಲ್ಲ - ಇದರ ಅರಿವು ಮೂಡಿಸುವುದು - ವ್ಯಕ್ತಿ ತಪ್ಪು ಹಲವಾರು ವ್ಯಕ್ತಿಗಳ ತಪ್ಪು ಆದಾಗ ಮಾತ್ರ ಇದಕ್ಕೆ ಅವಕಾಶ - ಆದು ಕ್ಲಪ್ತ ಸಮಯದಲ್ಲಿ ನ್ಯಾಯ ದೊರೆತಾಗ ಸರಿಹೋಗುತದೆ.
೬. ಭಿನ್ನ ಮತ - ಸಂಸತ್ ಕಲಾಪ ಬಹಿಸ್ಕಾರಕ್ಕೆ ಶಾಶ್ವತ ವಿದಾಯ. ನಾವು ಅಧಿಕಾರ ಪತ್ರದಲ್ಲಿ ಆಡಳಿತಕ್ಕೆ ಮಾತ್ರ ಅಧಿಕಾರ ಕೊಟ್ಟಿದ್ದು ಬಹಿಸ್ಕಾರಕ್ಕೆ ಕೊಟ್ಟಿಲ್ಲ
೭. ಸಂಸತ್ ಸದಸ್ಯರಿಗೆ , ಶಾಸಕರಿಗೆ - ಪಿಂಚಿಣಿಗೆ ವಿದಾಯ - ಇಲ್ಲವಾದಲ್ಲಿ ಇತರ ಜಿಲ್ಲಾ ತಾಲೂಕು ಗ್ರಾಮ ............................. ಪಟ್ಟಿ ಬೆಳೆಯಬಹುದು
೮, ಮಾಜಿ ಪ್ರಧಾನಿ ,ಸಂಸದರು ಶಾಸಕರು ದುಡಿದು ತಿನ್ನುವ ಪಾಠ ನಾವು ದೊಡ್ಡಣ್ಣ ಅಮೇರಿಕ ಅಧ್ಯಕ್ಸರಿಂದ ಕಲಿಯಬೇಕು
೯. ಪ್ರತಿಯೊಬ್ಬ ಪ್ರಜೆಯು ತಾನು ಮಾಡಿದ ತಪನ್ನು ಒಪ್ಪಿ ಶಿಕ್ಷೆಗೆ ಬದ್ಧನಾಗುವುದನ್ನು ಪ್ರಜಾಪ್ರಭುತ್ವ ಅನ್ಯ ದೇಶಗಳಿಂದ ನಾವು ಅನುಸ್ಥಾನಮಾಡಬೇಕು
೧೦. ದೇಶದ ಕಾನೂನುಗಳನ್ನು ಮೊದಲು ನೀವು ಪಾಲಿಸಿ ನಮಗೆ ದಾರಿದೀಪವಾಗಿ
೧೧. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವವರಿಗೆ ಮಾತ್ರ ಅವಕಾಶ - ಸ್ವಾರ್ಥ ಮತ್ತು ಪಕ್ಷ ಕಟ್ಟುವವರು ಬೇಡವೇ ಬೇಡ
೧೨. ನಮ್ಮ ಪ್ರಸಾರ ಮಾಧ್ಯಮಗಳು - ಪ್ರಜಾಪ್ರಭುತ್ವದ ಅನುಷ್ಠಾನದಲ್ಲಿ ಆಗಿರುವ ಹುಳುಕುಗಳನ್ನು ಹೆಕ್ಕಿ ಹೆಕ್ಕಿ ತೆಗಯಲಿ - ಆಗ ವ್ಯಕ್ತಿ ಪಕ್ಷ ಹುಳುಕು ಮಾಯಾ
೧೩. ನಮ್ಮಲ್ಲಿ ದೇಶಕ್ಕಾಗಿ ತ್ಯಾಗ ಮಾಡುವವರು ಬಹುಸಂಖ್ಯಾಕರು ಇದ್ದಾರೆ - ಅವರಿಗೆ ಸ್ಥಾನ ಮಾನ ವ್ಯಾಪಕ ಪ್ರಚಾರ ಸಿಗಲಿ - ಸ್ವಾರ್ಥಿಗಳಿಗೆ ಸಿಗದಿರಲಿ
೧೪. ಹಳೆಯ(ಓಲ್ಡ್) ಪ್ರಜಾಪ್ರಭುತ್ವವನ್ನು ಹೊಸ ಪ್ರಜಾಭುತ್ವವನ್ನಾಗಿ ಪರಿವರ್ತಿಸಿ ಚಾಲನೆ ನೀಡಿ. ಹಳೆಯ ವಾಹನ ಚಲಿಸುವ ಸುಸ್ಥಿತಿಯಲ್ಲಿಲ್ಲ
೧೫. ಮುಖ್ಯಮಂತ್ರಿ ,ಮಂತ್ರಿ ಇತ್ಯಾದಿಗಳ ಪೈಪೋಟಿಗೆ ಶಾಶ್ವತ ಪರಿಹಾರ ಅದೃಷ್ಟದ ಆಯ್ಕೆ ಮತ್ತು ಅದಿಕಾರವನ್ನು ಹಂಚಿಕೊಳ್ಳುವ ಪರಿಹಾರ ಸೂತ್ರ
೧೬. ಅಧಿಕಾರ ಪಟ್ಟಕ್ಕಾಗಿ ಪೈಪೋಟಿ ನಡೆಸುವವರ ಸದ್ಸ್ಯತ್ವ ರದ್ದತಿಗೆ ವಿಶೇಷ ಅಧಿಕಾರ ಪ್ರಜೆಗಳಿಗೆ ಯಾ ನ್ಯಾಯಾಲಕ್ಕೆ ಕೊಡಿ
ಸ್ವಾರ್ಥದ ರಾಜ್ಜ ತ್ಯಾಗದ ಸಾಮ್ರಾಜ್ಜಾದಲ್ಲಿ ಲೀನವಾಗಲಿ - ದೇಶ ಮನೋವೇಗದಲ್ಲಿ ಮುನ್ನಡೆಯಲಿ ಎಂಬುದು ನಮ್ಮ ಹಾರೈಕೆ
Related