ತೆಂಗು ಕೃಷಿ – ಮಾಹಿತಿ
ತೆಂಗು ಕೃಷಿಯಲ್ಲಿ ಅನುಸರಿಸಬೇಕಾದ ಕೆಲವೊಂದು ಮಾಹಿತಿ – ಕರಾವಳಿ ಸೀಮೆಗೆ ಸೀಮಿತ
೧. ತೆಂಗು ನಾಟಿಗೆ ೩ ೪ ೫ ಅಡಿ ಉದ್ದ ಅಗಲ ಆಳದ ಹೊಂಡ ಮಾಡಿ ನಟಿ ಮಾಡುವ ಪದ್ಧತಿ ಚಾಲನೆಯಲ್ಲಿರುವುದನ್ನು ಸ್ವಲ್ಪ ಬದಲಿಸಿ ಮಾಡಿದ ಹೊಂಡವನ್ನು ಪೂರ್ತಿ ಮುಚ್ಚಿ ಭೂಮಿಯ ಮಟ್ಟದಲ್ಲಿ ಗಿಡ ನಾಟಿ ಮಾಡುವುದು ಅತ್ಯಂತ ಸೂಕ್ತ.
೨. ಅಂತರ ತೆಂಗಿನ ತೋಟ ಮಾಡುವುದರದರೆ 25X25 – ಗದ್ದೆ ಹುಣಿಯಲ್ಲಿ, ಹೊಳೆ ಬದಿ , ಮಾರ್ಗದ ಬದಿ , ಅಂಗಳದ ಬದಿ – ಹೀಗೆ ಒಂದು ಬದಿಯಲ್ಲಿ ಗಿಡದ ಬೆಳವಣಿಗೆಗೆ ಪೂರ್ಣ ಅವಕಾಶ ಇದ್ದರೆ ೧೫ ರಿಂದ ೨೦ ಅಡಿ ದೂರದಲ್ಲಿ ನಾಟಿ ಮಾಡಬಹುದು ಕಾರಣ ತೆಂಗು ಇತರ ಮರಗಳಿಗೆ ಹೆದರುತದೆ.
೩. ನಾಟಿ ಮಾಡಿದ ಮೊದಲ ಮೂರೂ ವರ್ಷ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿದ ಕುರಿ ಮತ್ತು ಕೋಳಿ ಹಿಕ್ಕೆ ಒಂದು ಚೀಲ ಬಳಕೆ – ತದನಂತರ ಒಂದು ಚೀಲ
೪. ತೆಂಗಿನ ಬುಡದಿಂದ ೬ ಅಡಿ ದೂರದಲ್ಲಿ ಬದು ನಿರ್ಮಿಸಿ – ಬಿದ್ದ ನೀರು ಬದುವಿನ ಒಳಗೆ ಇಂಗಿಸುವಂತೆ ಮಾಡುವುದು
೫. ತೆಂಗಿನ ಏಲ್ಲಾ ತ್ಯಾಜ್ಜಗಳನ್ನು ತೆಂಗಿನ ಬುಡಕ್ಕೆ ಮರುಬಳಕೆ
೬. ನಿರಂತರ ಕಲೆ ಬರದಂತೆ ಎಚ್ಚರವಹಿಸುವುದು
೭. ಗರಿಷ್ಠ ಫಸಲಿಗೆ ಹೆಚ್ಚಿನ ನೀರಾವರಿ ಬೇಕಾಗುತದೆ.
೮. ಕರಿಮೆಣಸು ಕೃಷಿಗೆ ತೆಂಗನ್ನು ಪೂರಕವಾಗಿ ಬಳಸುವವರು ಹೆಚ್ಚಿನ ಗೊಬ್ಬರ ಬಳಕೆ ಅನಿವಾರ್ಯ
೯ ರಾಸಾಯನಿಕ ಗೊಬ್ಬರದ ಬಳಕೆ ಮಾಡದೆ ತೆಂಗು ಕೃಷಿಯಲ್ಲಿ ಉತ್ತಮ ಇಳುವರಿ ಸಾಧ್ಯ
೧೦, ಸುಮಾರು ೫೦ ವರ್ಷ ಮರಗಳಿದ್ದರೆ ಕಡಿದು ತೆಗುದು ಮರು ನಾಟಿ ಮಾಡಿದಲ್ಲಿ ಮಾತ್ರ ಉತ್ತಮ ಫಸಲು ತೆಗಯಲು ಸಾಧ್ಯ
೧೧. ಹೊಂಡ ಮಾಡಿ ನಾಟಿ ಮಾಡಿದ ಗಿಡದಲ್ಲಿ ಫಲ ಕೊಡಲು ೬ ರಿಂದ ೭ ವಷಗಳ ಕಾಲ ಮತ್ತು ಕನಿಷ್ಠ ಫಸಲು – ಹೊಂಡ ಮಾಡದೆ ನಾಟಿ ಮಾಡಿದ ಗಿಡಲ್ಲಿ ೩ ರಿಂದ ೪ ವಷಗಳಲ್ಲಿ ಫಸಲು ಮತ್ತು ಗರಿಷ್ಠ ಇಳುವರಿ ಕೊಡುತದೆ.
ಮೇಲಿನ ಭಾವಚಿತ್ರ ಹೊಂಡ ಮಾಡಿ ನಾಟಿ ಮಾಡಿದ ಗಿಡ ಮತ್ತು ಹೊಂಡ ಮಾಡದೆ ನಾಟಿ ಮಾಡಿದ ಗಿಡಗಳ ವೆತ್ಯಾಸ ಕಾಣಬಹುದು