ಕಲಬುರ್ಗಿ ಜಿಲ್ಲೆಯ ಕಾಳಿಗೆ ತಾಲೂಕಿನ ಕಲಗುರ್ತಿಯಲ್ಲಿರುವ 2 ದೇವಾಲಯ ಗಳು.
1.ಸಂಗಮ ನಾಥ, ಕಲ್ಲೇಶ್ವರ ಗುಡಿ. ಈ ದೇವಾಲಯವು 200 ವರ್ಷಗಳ ಹಳೆಯ ದೇವಸ್ಥಾನ ವಾಗಿದ್ದು ಮೂರೂ ಕಡೆ ನೀರು, ಒಂದು ಕಡೆ ಬಿಳಿ ಮೊರೆ ಬರುತ್ತಿದ್ದು ಶ್ರೀ ಕೃಷ್ಣ ಪರಮಾತ್ಮ ಬೆಣ್ಣೆ ತಿಂದು ಕೈ ತೊಳೆದು ತೊರೆಯೆಂದೇ ಪ್ರಸಿದ್ಧಿ.. ಕಲ್ಲಿನಿಂದ ಸ್ವಯಂಭೂ ಲಿಂಗ ಉಧ್ಭವಿಸಿದುದರಿಂದ ಕಲ್ಲೇಶ್ವರ ನೆಂದೂ ಕರೆಯುತ್ತಾರೆ.
2.ದತ್ತ ಪೀಠ.
ಇವೆರಡೂ 50 ಅಡಿಗಳಷ್ಟು ಅಂತರದಲ್ಲಿರುವುದರಿಂದ ಮಾಣಿಕ್ ಪ್ರಭುಗಳು ತಪಸ್ಸು ಮಾಡಿದ “ತಪೋ ಭೂಮಿ” ಎಂದೂ ಪ್ರಚಲಿತ. ಪಕ್ಕದಲ್ಲೇ “ಸುಧಾ ವರ್ಷಿಣಿ” ಎಂಬ ಗೋ ಶಾಲೆಯೂ ಇದೆ.
ಈ ದೇವರುಗಳ ಸೇವೆ ಮಾಡಿದರೆ ಮಾನಸಿಕ ಅಸ್ವಸ್ಥತೆ ಇರುವವರು ಆರೋಗ್ಯ ವಂತರಾಗಿ ದೇವರ ಕ್ರುಪೆಗೆ ಪಾತ್ರರಾಗುವರೆಂದೂ ಪ್ರಚಲಿತ..
ಪ್ರಸ್ತುತ ಈ ಕ್ಷೇತ್ರಗಳನ್ನು ನಡೆಸಿ ಕೊಂಡು ಬರುತ್ತಿರುವವರು ಶ್ರೀ ನಾಗರಾಜ ಕುಲಕರ್ಣಿ.984555741 ವಿಶಾಲಾಕ್ಷಿ. ಭಟ್.9513859470