ದೈವ ದೇವಾಲಯಕ್ಕೊಂದು ನ್ಯಾಯವಾದಿ

ಶೇರ್ ಮಾಡಿ

ದೈವಾಲಯ ಮತ್ತು ದೇವಾಲಯಗಳು ತಮ್ಮ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಂದಿಗ್ದ ಪರಿಸ್ಥಿತಿಯಲ್ಲಿ ಮೂಲ ಉದ್ದೇಶದ ಅರಿವಿಲ್ಲದೆ ಆಚಾರ ಮರೆತು ಅನಾಚಾರ ಕಾಟಾಚಾರದ ಕೊಚ್ಚೆಯಲ್ಲಿ ಬಿದ್ದಿರುವುದನ್ನು ಮನಗಂಡು ಪ್ರತಿ ಕ್ಷೇತ್ರಕ್ಕೊಂದು ನ್ಯಾಯವಾದಿ ಹುದ್ದೆಯನ್ನು ತೆರೆದು ಪಾಪದ ಭಯ ಮರೆತವರಿಗೆ ಶಿಕ್ಷೆಯ ಭಯ ಹುಟ್ಟಿಸಿ ಹಂತ ಹಂತವಾಗಿ ವಿದ್ಯಾವಂತರು ಮತ್ತು ಬುದ್ದಿಜೀವಿಗಳು ಪುನಃ ಬರುವಂತೆ ಮಾಡುವ ಕೆಲಸ ನಮ್ಮಿಂದ ಆಗಬೇಕಾಗಿದೆ.ಅರಸರು ಮೊಕ್ತೇಸರರು ಧರ್ಮದರ್ಶಿಗಳು ಅರ್ಚಕರು ತಂತ್ರಿಗಳು, ಜ್ಯೋತಿಸ್ಯರು ಆಡಳಿತ ವರ್ಗದವರು ,ಜೀರ್ಣೋದ್ದಾರ ………….ಇತ್ಯಾದಿ ಸಕಲ ಜನಸಾಮಾನ್ಯರ ಕಿಂಚಿತ್ತೂ ಕೊಡುಗೆ ಈ ಕ್ಷೇತ್ರದ ಅಂತ್ಯಕ್ಕೆ ನಾಂದಿಯಾಗುತಿದೆ. ಬಾಹ್ಯ ಪ್ರಪಂಚದಿಂದ ಮಿಗಿಲಾದ ಭ್ರಷ್ಟಾಚಾರ ಸ್ವಾರ್ಥ ಜಾತಿ ಮತ ಭೇದ, ಜೀತಪದ್ಧತಿ ಹುಟ್ಟು ಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಮುಂದೆ ಮುಂದೆ ಸಾಗುತಿದೆ.
ಪ್ರಜ್ಞಾವಂತ ಪ್ರಜೆಗಳ ಮನದಾಳದ ನೋವಿನ ನುಡಿಗಳ ಉಲ್ಲೇಖ – ನಿಮಗಾಗಿ ಮತ್ತು ನಮಗಾಗಿ
ಜ್ಯೋತಿಸ್ಯ ಪವಿತ್ರ ವೃತ್ತಿಯನ್ನು ತಪ್ಪು ಮಾಹಿತಿ ಕೊಟ್ಟು ಮನೆ ಸಂಸಾರ ದೈವಾಲಯ ದೇವಾಲಯವನ್ನು ಅವನತಿಯತ್ತ ತಳ್ಳಿದ ಅಪಾದನೆಯಡಿಯಲ್ಲಿ ಶಿಕ್ಷೆ ವಿಧಿಸಿ – ಅದು ಜ್ಯೋತಿಸ್ಯ ವಲಯಕ್ಕೆ ಪಾಠವಾಗಲಿ
ಅಧಿಕಾರಕ್ಕಾಗಿ ಕ್ಷೇತ್ರವನ್ನು ಅಧಪತನಕ್ಕೆ ತಳ್ಳುವ ಆಕಾಂಕ್ಷಿಗಳಿಗೆ ಸೂಕ್ತ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಮಾಡಿ
ಜಾತಿ ಆಧಾರದಲ್ಲಿ ದೇವರ ಪೂಜೆ ಮಾಡುವ ಬದಲು ವ್ಯಕ್ತಿ ಪೂಜೆ ಮಾಡುವ ಮುಜುಗರದ ವೇದಿಕೆಗೆ ಶಾಶ್ವತ ಪರಿಹಾರ ಕಾನೂನು ಅಡಿಯಲ್ಲಿ ಸಿಗಲಿ
ದೇವಾಲಯದ ಅರ್ಚಕನಾಗಿದ್ದು ಸಮಯಕ್ಕೆ ಸರಿಯಾಗಿ ಪೂಜೆ ಮಾಡದೆ ದೇವರಿಗೆ ಮತ್ತು ಜನರಿಗೆ ದ್ರೋಹ ಮಾಡುವ ವ್ಯಕ್ತಿಯನ್ನು ಶಿಕ್ಷೆಗೆ ಗುರಿಯಾಗಿಸಿ
ಪ್ರತಿಷ್ಠ ತಂತ್ರಿಗಳಾಗಿ – ಯಜಮಾನ ಮಾಹಿತಿ ಮತ್ತು ಮಾತುಗಳನ್ನು ದಿಕ್ಕರಿಸಿ ವ್ಯತಿರಿಕ್ತ ಪ್ರತಿಷ್ಠೆ ಮಾಡಿ – ಕಷ್ಟ ನಷ್ಟ ಸಮಾಜಕ್ಕೆ ಮಾಡಿದ ದ್ರೋಹದ ನೆಲೆಯಲ್ಲಿ ಶಿಕ್ಷೆ ವಿಧಿಸಿ – ಮುಂದಕ್ಕೆ ಯಾರು ಕೂಡ ಈ ರೀತಿಯ ಕೆಟ್ಟ ಕೆಲಸಕ್ಕೆ ತೊಡಗದಂತೆ ಎಚ್ಚರಿಕೆ ಫಲಕ ಸದಾ ನೋಡುವಂತಿರಲಿ
ಅರ್ಚಕರಿಗೆ ಸಂಬಳ ನಿಗದಿಯಾಗಿದ್ದರೆ – ಅವರಿಗೆ ತಟ್ಟೆಯಲ್ಲಿ ಸಿಗುವ ಹಣ ಗಿಂಬಳ (ದೇವರ ಹುಂಡಿಗೆ ಸಲ್ಲತಕ್ಕದ್ದು) -ನೆನೆಪಿರಲಿ
ದೈವ ದೇವರು ಜೈಲಿನಲ್ಲಿ ಇದ್ದಾರೆ – ಅವರಿಗೆ ನ್ಯಾಯವಾದಿಗಳಿಂದ ಮುಕ್ತಿ ಸಿಗಲಿ
ಸಾವಿರಾರು ನ್ಯಾಯವಾದಿಗಳಿಗೆ ವಿಪುಲ ಅವಕಾಶ – ಮನೆಯಲ್ಲಿ ಕುಳಿತು ದೈವ ದೇವರ ಸೇವೆ
ಗಂಡು ಹೆಣ್ಣು ಮಾತ್ರ ದೇವರ ಸೃಷ್ಟಿ – ಜಾತಿ ಮಾನವ ಸೃಷ್ಟಿ – ಮೂಲ ಅರಿತವನಿಗೆ ಮಾತ್ರ ಬದುಕು – ತಪ್ಪಿದವನಿಗೆ ಜೈಲು
ನ್ಯಾಯವಾದಿಗಳಿಗೆ ಸಾಕ್ಷಿ ಹುಡುಕುವ ಸಂದರ್ಭ ಬರುವುದೇ ಇಲ್ಲ – ಎಲ್ಲವು ಆಮಂತ್ರಣ ರೂಪದಲ್ಲಿ ಲಭ್ಯ
ಮುಂದುವರಿಯುವುದು

See also  ಸ್ವಾವಲಂಬಿ ದೇವಾಲಯಕ್ಕೊಂದು ದಾರಿ - Way to self sufficient temple

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?