ಸ್ವಾವಲಂಬಿ ದೇವಾಲಯಕ್ಕಾಗಿ ಸೇವಾ ಉದ್ದಿಮೆ

ಶೇರ್ ಮಾಡಿ

ಬಹುಪಾಲು ಬಸದಿ ದೇವಸ್ಥಾನಗಳಲ್ಲಿ ಕನಿಷ್ಠ ಜೀರ್ಣೋದ್ದಾರ ಮತ್ತು ಸೇವೆಗಳನ್ನು ಮುಂದುವರಿಸಲು ಆಡಳಿತ ಮಂಡಳಿ ಸಕಲ ರೀತಿಯ ವ್ಯವಸ್ಥೆಗಳನ್ನು ಅಳವಡಿಸಿ ಸೋತು ಸುಣ್ಣವಾಗಿ ಯಾರು ಕೂಡ ಜವಾಬ್ದಾರಿ ಹೊರಲು ಮುಂದೆ ಬಾರದೆ ಮುಂದೆ ಒಂದು ದಿನ ದೊಡ್ಡ ದೊಡ್ಡ ಉದ್ದಿಮೆದಾರರಿಗೆ ಗುತ್ತಿಗೆ ಕೊಡುವ ಅನಿಷ್ಟ ಪದ್ದತಿಗೆ ಹೋಗುವ ಕಾಲ ಸಮೀಪಿಸುತಿದೆ. ಮುಂದೆ ಆಗಬಹುದಾದ ವಿಷಮ ಪರಿಸ್ಥಿತಿ ಬಗ್ಗೆ ಎಚ್ಚೆತ್ತು ಸೇವಾ ಉದ್ದಿಮೆಗಳನ್ನು ನಾವೇ ಪ್ರಾರಂಭಿಸಿ ನಿರ್ದಿಷ್ಟ ಲಾಭದ ಪಾಲನ್ನು ತಮ್ಮದಾಗಿಸುವ ವಿಶೇಷ ಚಿಂತನ ಮಂಥನ ಅನುಷ್ಠಾನಕ್ಕೆ ಕಾಯುತಿದೆ.
ರಾಜರ ಕೃಪೆಯಿಂದ ಅತಿ ಉನ್ನತ ಮಟ್ಟದ ಬಸದಿ ದೇವಾಲಯಗಳು – ಪ್ರಸ್ತುತ ಆಡಳಿತ ನಡೆಸುವ ಪ್ರಜಾ ವ್ಯವಸ್ಥೆ ಸಂಪೂರ್ಣ ಕಡೆಗಣಿಸಿದ್ದು – ತಮ್ಮ ತಲೆಗೆ ತಮ್ಮ ಕೈ ಎನ್ನುವ ಅಂತಿಮ ತೀರ್ಮಾನಕ್ಕೆ ಬಂದು ವಿಭಿನ್ನ ರೀತಿಯ ಪ್ರಯೋಗಗಳನ್ನು ಅಳವಡಿಸಿ ಮುಂದೆ ಮುಂದೆ ಸಾಗುತಿರುವ ನಮಗೆ ಸೇವಾ ಉದ್ದಿಮೆ ದೇವರು ಕೊಟ್ಟ ವರ ಎಂದು ಭಾವಿಸಿ ಮುನ್ನಗೋಣ
ಜನಾಭಿಪ್ರಾಯದ ಪಕ್ಷಿನೋಟ
ಸೇವಾ ಮನೋಭಾವನೆ ಹೊಂದಿರುವ ವ್ಯಕ್ತಿಗಳ ಸೇವಾ ಒಕ್ಕೂಟ ರಚನೆ
ಸೇವಾ ಒಕ್ಕೂಟದ ಸದಸ್ಯರಿಂದ 2 ರಿಂದ 3% ಬಡ್ಡಿಯಲ್ಲಿ ಸೇವಾನಿದಿ ಸಂಗ್ರಹಣೆ
ಸೇವಾ ಉದ್ದಿಮೆ ಮಾಡುವವರಿಗೆ 8 ರಿಂದ ೧೦% ಪಾಲುದಾರಿಕೆಗೆ ಬದ್ಧತೆ ಇದ್ದವರಿಗೆ ಸೇವಾ ನಿಧಿ ಸದ್ಬಳಕೆ
ಸೇವಾ ನಿಧಿ ಸಂಗ್ರಹ ಮತ್ತು ಸೇವಾ ನಿಧಿ ಸದ್ಬಳಕೆ ಅಂತರದಲ್ಲಿ ಬಸದಿ ದೇವಾಲಯಗಳ ಅಭಿವೃದ್ಧಿ
ನಾವು ಅಳವಡಿಸುವ ಸಂಪ್ರದಾಯ ಪದ್ಧತಿ ಚಲಾವಣೆಯಲ್ಲಿ ಇಲ್ಲದ ನಾಣ್ಯ – ಅರಿತು ಸಾಗೋಣ
ವಿಭಿನ್ನ ಸೇವೆಗಳ ನಿರಂತರ ಅಳವಡಿಕೆ ಮತ್ತು ಅದರಲ್ಲಿ ಸಿಗುವ ಮೊತ್ತ – ಅಭಿವೃದ್ಧಿಗೆ ಪೂರಕ ಬದಲು ಮಾರಕವಾಗುತಿದೆ
ಹಣದ ವ್ಯವಹಾರ ಮಾತ್ರ ಸಹಕಾರಿ – ನೆನಪಿರಲಿ
ದುಡಿದು ಕಟ್ಟುವುದು ದೇವಾಲಯ – ಬೇಡಿ ಕಟ್ಟುವುದು ದೇವ ಲಯ – ಅನುಕರಣೆ ನಮ್ಮದಾಗಲಿ
ಬಸದಿ ಮತ್ತು ದೇವಾಲಯ ಶಿಕ್ಷಣ ಮತ್ತು ಬದುಕಿನ ಪಾಠ ಬೋಧಿಸುವ ನಮ್ಮ ಭಾರತೀಯ ಸಂಸ್ಕೃತಿ
ಸತ್ಯ ನ್ಯಾಯ ಧರ್ಮಕ್ಕೆ ಅಂಜಿ ಬದುಕುವ ಕಾಲ ಅಂದು
ಅಸತ್ಯ ಅನ್ಯಾಯ ಅಧರ್ಮಕ್ಕೆ ಅಂಜಿ ಬದುಕುವ ಕಾಲ ಇಂದು
ತಪ್ಪು ಮಾಡಿದವನಿಗೆ ಶಿಕ್ಷೆ ೨೪ ಗಂಟೆಯ ಒಳಗೆ ಆಗುತಿತ್ತು
ತಪ್ಪು ಮಾಡಿದವರಿಗೆ ಶಿಕ್ಷೆ ೨೪ ವರುಷವಾದರೂ ಕನಸಿನ ಮಾತು
ಶಿಕ್ಷೆ ಶಿಕ್ಸಣ ಪಾಲಿಸಿದರೆ ಸ್ವರ್ಗ ಪಾಲಿಸದಿದ್ದರೆ ನರಕ.
ನಮ್ಮ ಅಭಿವೃದ್ಧಿಯತ್ತ ಗಮನ ಹರಿಸೋಣ

See also  Sangamanath kalleshwara gudi - Kalagurthi -Kalburgi

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?