ಸ್ವಾವಲಂಬಿ ಮತ್ತು ಸಂತುಷ್ಟ ದೈವ ದೇವಾಲಯಕ್ಕೆ – ಸರ್ವ ಸೇವಾ ನಿಧಿ

ಶೇರ್ ಮಾಡಿ

ದೈವ ದೇವಾಲಯಗಳ ಗತ ವೈಭವ ಮರುಕಳಿಸಬೇಕಾದರೆ – ಅಜ್ಜ ನಟ್ಟ ಆಲದ ಮರದ ಕೆಳಗೆ ನಿಟ್ಟುಸಿರು ಬಿಡುತಿರುವ ದೈವ ದೇವಾಲಯಗಳು – ಅತಿ ಶೀಘ್ರ ಸಂಪನ್ಮೂಲ ಕ್ರೂಡೀಕರಿಸುವ ಕ್ರಾಂತಿಕಾರಿ ಹೆಜ್ಜೆಗಳನ್ನು – ನಾಳೆ ಎಂಬ ಪದಕ್ಕೆ ಶಾಶ್ವತ ಇತಿಶ್ರೀ ಹಾಡಿ – ಈ ಕ್ಷಣ ಮಾತ್ರದಿಂದಲೇ ರಣಕಹಳೆ ಮೊಳಗಿಸಬೇಕಾಗಿದೆ. ದೈವ ದೇವರ ಅಭಿರುದ್ಧಿಗಾಗಿ ಭಿಕ್ಷಾಟನೆ ಬೇಡವೇ ಬೇಡ – ದುಡಿದು ಕಟ್ಟುವುದೇ ದೇವಾಲಯ – ಬೇಡಿ ಕಟ್ಟುವುದು ದೇವ ಲಯ – ಎಂಬ ಸ್ವಾಮೀಜಿಯೊಬ್ಬರ ಮಾತನ್ನು ಅರ್ಥೈಸಿ – ಅತ್ತ ಚಿಂತನ ಮಂಥನ ಅನುಷ್ಠಾನ ನಮ್ಮದಾಗಲಿ. ದೇವರಲ್ಲಿ ಬೇಡುವ ನಾವು ಅದೇ ದೇವರಿಗಾಗಿ ಬೇಡುವುದು ಎಂತಹ ವಿಪರ್ಯಾಸ.ಮನೆ ಕಟ್ಟಲಿಕೆ, ಮದುವೆಗೆ. ತನ್ನ ಬೇಕು ಬೇಕುಗಳಿಗೆ. ಮನೆಯಲ್ಲಿರುವ ಪ್ರತಿಯೊಬ್ಬರಿಗೆ ಮೊಬೈಲಿಗೆ. ಪ್ರತಿಯೊಬ್ಬನಿಗೆ ವಾಹನಕ್ಕೆ .ದಿನಕೊಂದು ಹಾಕುವಷ್ಟು ಬಟ್ಟೆ ಚಪ್ಪಲಿಗೆ ನಮ್ಮಲ್ಲಿ ಹಣ ಇದೆ – ಇಲ್ಲದಿದ್ದರೆ ಸಂಪಾದಿಸುತೇವೆ. ಆದರೆ ದೇವರಿಗೆ ದೇವಾಲಯಕ್ಕೆ ಗೋಗರೆಯುವ ಮಾನವರಿಗೆ ಪ್ರಕೃತಿಯೇ ಮುನಿದು ಪಾಠ ಕಲಿಸುವ ದಿನ ಸಮಿಪುಸುತಿದೆ. ಸ್ವಾರ್ಥ ಅಮಲಿನಿಂದ ಎಚ್ಚೆತ್ತು ತ್ಯಾಗದ ನಶೆ ನಮ್ಮನ್ನು ಆವರಿಸಿದಾಗ ಬಾಳು ಬಂಗಾರ. ರಾಜಾಶ್ರಯ ದೈವ ದೇವರ ಸೃಷ್ಟಿ – ಪ್ರಸ್ತುತ ರಾಜರು ಕಡೆಗಣಿಸಿದ್ದಾರೆ – ವಿದೇಶದ ವಿದ್ಯೆ ಆಡಳಿತ ಬದುಕು ನಮ್ಮ ಮೇಲೆ ಹೇರಿ ಬೆಳಕಿನೆಡೆಗೆ ದಾರಿ ತೋರಿಸುವ ಬದಲು ಕಗ್ಗತ್ತಲ ದಾರಿ ನಮ್ಮ ಮುಂದೆ ಇದೆ – ನಮ್ಮ ಅಮೃತ ನಮಗೆ ಬೇಕು ವಿದೇಶದ ವಿಷ ನಮಗೆ ಬೇಡ – ದೈವ ದೇವಾಲಯ ಪೋಷಣೆ ನಮ್ಮ ಕರ್ತವ್ಯ – ನಾವು ಈ ಪರಂಪರೆಯನ್ನು ಸೃಷ್ಟಿಸಿದವರ ಪೀಳಿಗೆ – ಅರಿತರೆ ಸ್ವರ್ಗ – ಮರೆತರೆ ನರಕ
ಉದ್ದೇಶ – ಆರ್ಥಿಕ ಬಿಕ್ಕಟ್ಟಿನಿಂದ ದೇವಾಲಯದ ರಕ್ಷಣೆ – ಭಕ್ತರ ಆಕರ್ಶಣೆಗೆ ವಿನೂತನ ಯೋಜನೆ – ದೇವಾಲಯಗಳಲ್ಲಿ ಆಗುವ ಮೋಸ ದರೋಡೆಗೆ ಮುಕ್ತಿ
ನಿಧಿ ಸಂಗ್ರಹ – ಕನಿಷ್ಠ ಒಂದು ಲಕ್ಷ ರೂಪಾಯಿ – ೧೦ ತಿಂಗಳಲ್ಲಿ ಚುಕ್ತ – ಗರಿಷ್ಠ ೩% ಬಡ್ಡಿ (೩೦೦೦) ಪ್ರತಿ ತಿಂಗಳಿಗೆ –
ನಿಧಿ ಬಳಕೆ – ಹತ್ತು ಸಾವಿರ ರೂಪಾಯಿಗಳ ವಿಂಗಡಣೆ – ನಿಧಿ ಬಯಸುವವರು ಕ್ಷೇತ್ರದ ಎರಡು ಸರ್ವ ಸೇವೆಗಳ ವೆಚ್ಚ ಒಂದು ಸಾವಿರ ರೂಪಾಯಿ ಪ್ರತಿ ತಿಂಗಳು ಬರಿಸತಕ್ಕದ್ದು – ಪ್ರತಿ ತಿಂಗಳು ಒಂದನೇ ತಾರೀಕಿನಂದು ೧೧೦೦೦ ತೆತ್ತು ಬೇಕಾದಲ್ಲಿ ಬೇಡಿಕೆ ಸಲ್ಲಿಕೆ – ಪ್ರತಿ ತಿಂಗಳ ಒಂದನೇ ತಾರೀಕಿನಂದು ೧೨ ಗಂಟೆಯ ಒಳಗೆ ಪಾವತಿ ಕಡ್ಡಾಯ – ಸಮಯಕ್ಕೆ ಸರಿಯಾಗಿ ವ್ಯವಹಾರದಲ್ಲಿ ಧಕ್ಕೆಯಾದಲ್ಲಿ ಮುಂದೆ ಅವಕಾಶವಂಚಿತರಾಗುತಾರೆ- ನಿಧಿ ಬಯಸುವವರು ಹೆಚ್ಚಾದಲ್ಲಿ ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುವುದು – ಕ್ಷೇತ್ರದಲ್ಲಿ ಈಜುಕೊಳದ ಬಗ್ಗೆ ಚುರ್ಚಿಸಿ ಅಂತಿಮ ತೀರ್ಮಾನ – ಮುಂದೆ ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಬ್ರಹ್ಮಕಲಶೋತ್ಸವ ……..ಇತ್ಯಾದಿ ಈ ನಿದಿಯಿಂದಲೇ ಬರಿಸತಕ್ಕದ್ದು – ಬೇಡಿ ಮಾಡುವ ಪದ್ದತಿಗೆ ಇತಿಶ್ರೀ, ದುಡಿದು ಮಾಡುವ ಪ್ರತಿಜ್ಞೆ ಮಾಡೋಣ
ಕ್ಷೇತ್ರದ ಜವಾಬ್ದಾರಿ – ಒಣ ಹಣ್ಣುಗಳಿಂದ ಮಾಡಿದ ಪ್ಯಾಕೇಟು ಪ್ರಸಾದ ರೂಪದಲ್ಲಿ ನಿಧಿ ನೀಡಿದವರಿಗೆ ಮತ್ತು ನಿಧಿ ಬಯಸಿದವರಿಗೆ ಆಡಳಿತ ಮುಕ್ಥೇಶ್ವರರಿಂದ ವಿತರಣೆ – ದೈವ ದೇವಸ್ಥಾನ ಉಪಯೋಗಕ್ಕೆ ಇಲ್ಲದ ಉಪಿನಕಾಯಿ ಆಗುವುದನ್ನು ತಪ್ಪಿಸಿ – ೬೦ ಮೇಲಿನ ವಯಸ್ಸಿನವರ ಹಳ್ಳಿಯವರ ಮುಗ್ದರ ವೇದಿಕೆ ಅಲ್ಲ ಎಂಬುದನ್ನು ನಿರೂಪಿಸೋಣ – ದೈವದ ದೇವರ ಮೂಲ ಉದ್ದೇಶದ ಅರಿವು ಜನಸಾಮಾನ್ಯರಿಗೆ ತಲುಪಿಸೋಣ – ದೈವ ದೇವಾಲಯಗಳು ದರೋಡೆಕೋರರ ಕೇಂದ್ರವೆಂಬ ಮನೋಭಾವನೆ ಬೇರುಸಹಿತ ಕಿತ್ತು ಹಾಕುವ ಕೆಲಸದತ್ತ ಗಮನವಿರಲಿ.
ನಮ್ಮೆಲ್ಲರ ಗಮನಕ್ಕೆ ಕೆಲವು ಸೂತ್ರಗಳು
೧.ನಮ್ಮ ಒಳಗೆ ದೇವರಿದ್ದಾನೆ ಗೌರವಿಸಿ , ನಿತ್ಯ ನಿರಂತರ ಭಾವ ಪೂಜೆ ಮಾಡಿದಾಗ ದೇವರು ದೇವಾಲಯದಲ್ಲಿ ಆಶೀರ್ವದಿಸುತಾನೆ
೨. ಮಠ – ದೇವಾಲಯಕ್ಕೆ , ದೇವಾಲಯ – ಮನೆಗೆ , ದೇವರು ಮನಸ್ಸಿಗೆ ದೇವಾಲಯ ಭೇಟಿಯ ಫಲಶ್ರುತಿ
೩. ಸದಾ ನಮ್ಮೊಳಗಿರುವ ದೇವರಿಗೆ ಮನೆ ಮಂದಿಯ ಶ್ರೇಷ್ಠ ಸ್ಥಾನ ಮಾನ
೪. ಪ್ರತಿಯೊಬ್ಬರೂ ಕನಿಷ್ಠ ವಾರಕ್ಕೊಮ್ಮೆ ಊರ ದೇವಾಲಯ ಸಂದರ್ಶನ
೫. ಆಂತರಿಕ ಸ್ವಚ್ಛತೆಗಾಗಿ (ಮನಸಿನ) ದೇವರಲ್ಲಿ ವಿಮೆ – ತನ್ನ ಆದಾಯದ ೧% – ಕ್ಷೇತ್ರ ನಾಮ ಸ್ಮರಣೆ ಪಠಣ – ಕನಿಷ್ಠ ಒಂದು ಬಾರಿ ೧೦೮ ಬಾರಿ
೬. ವ್ಯಾಪಾರಿ ಜಗದಿ ವ್ಯಾಪಾರಿ ನೀತಿ ಅನಿವಾರ್ಯ
೭. ದೇವಾಲಯದಿಂದ ತಿಂಗಳಿಗೊಮ್ಮೆ ಮನೆ ಮನೆ ಭೇಟಿ
೮. ದೇವಾಲಯದಲ್ಲಿ ವಿಶೇಷ ದಿನಗಳಲ್ಲಿ ಕಾಯಕ ಸೇವೆ – ರೋಗ ಮುಕ್ತ ಬಾಳಿಗಾಗಿ
೯. ಉದ್ದಿಮೆಗಳಲ್ಲಿ ದೇವರಿಗೆ /ದೇವಾಲಯಕ್ಕೆ ಪಾಲು ಕನಿಷ್ಠ ೧%
೧೦. ದೇವಾಲಯದಿಂದ – ದೇವರಲ್ಲಿಗೆ
೧೧. ವೈಯುಕ್ತಿಕ ಪೂಜೆಯಿಂದ – ಸಾಮೂಹಿಕ ಪೂಜೆಗೆ ಚಾಲನೆ
೧೨. ಬಾಳಿನ ಓಟಕ್ಕೆ – ಧಾರ್ಮಿಕ ಟ್ರ್ಯಾಕ್
೧೩. ಒಂದೇ ತಟ್ಟೆಯಲ್ಲಿ ಊಟ ಮಾಡುವ ನಾವು ಬಂದುಗಳು (ಗಾಳಿ)
೧೪. ಆವಿಸ್ಕಾರಕ್ಕೆ ಚಾಲನೆ – ಪರೋಕ್ಷ ಪೂಜೆ ಇತ್ಯಾದಿ
೧೫. ಉದ್ಯೋಗ ಉದ್ಯಮಕ್ಕೆ ಒತ್ತು
೧೬. ದೇವಾಲಯಕ್ಕೆ ಕೊಡುಗೆ ಸಲ್ಲ – ಸಾಲದ ಕಿಂಚಿತ್ತು ಪಾವತಿ
೧೭. ಬದುಕಿನ ವಿಶೇಷ ದಿನಗಳಲ್ಲಿ ಕ್ಷೇತ್ರ ದರ್ಶನ
೧೮. ಜಗತ್ತಿನ ಅತಿ ದೊಡ್ಡ ಕಂಪನಿ ದೇವರು

See also  ಸ್ವಾವಲಂಬಿ ದೇವಾಲಯಕ್ಕಾಗಿ ಸೇವಾ ಉದ್ದಿಮೆ

ಈ ಲೇಖನವನ್ನು ಕಡಿಮೆ ಎಂದರೆ ೫ ಜನರಿಗೆ ಕಳುಹಿಸಿ ಸಕಲ ದೈವ ದೇವರುಗಳ ಅನುಗ್ರಹ ಮತ್ತು ಆಶೀರ್ವಾದಕ್ಕೆ ಪಾತ್ರರಾಗಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?