ದೇವಾಲಯಕ್ಕೊಂದು ಈಜುಕೊಳ – ಸಂಪಾದನೆಗೆ ಮೂಲ

ಶೇರ್ ಮಾಡಿ

ಮಾನವ ಸೇವಾ ಬದುಕು ಮಾಯವಾಗಿ ವ್ಯಾಪಾರೀಕರಣಗೊಂಡು ಒಂದು ತಲೆಮಾರು ಮುಗಿದಿದ್ದು – ಪ್ರಸ್ತುತ ದರೋಡೆಕೋರರ ದಾರಿ ತುಳಿಯುತಿರಿವ ಈ ಪರ್ವ ಕಾಲದಲ್ಲಿ ದೇವಾಲಯಗಳನ್ನು ಮುನ್ನಡೆಸುವ – ಆಡಳಿತ ಸಮಿತಿಯವರು ಮೊಕ್ತೇಸರರು ಪರಿಚಾರಕರು ಭಕುತರು ಮಾನವರಾದ ನಾವೆಲ್ಲರೂ ಚಿಂತನ ಮಂಥನ ಅನುಷ್ಠಾನದತ್ತ ತುರ್ತು ಕಾರ್ಯಾಚರಣೆ ಮಾಡಬೇಕಾದ ಅವಶ್ಯಕತೆ ಬಂದು ಒದಗಿದೆ.
ಜಲಕ್ರೀಡೆ ಅತ್ಯಂತ ಶ್ರೇಷ್ಠ – ವ್ಯಾಯಾಮ ಸುಖ ನೆಮ್ಮದಿ ಕೊಡುತಿದ್ದು – ಈ ಕ್ರೀಡೆಗೆ ಸಮುದ್ರ ಹೊಳೆ ಕೆರೆ ಹೊಂಡಗಳನ್ನು ಅನಿವಾರ್ಯವಾಗಿ ಬಳಸಿ ನೂರಾರು ಜನರು ತಮ್ಮ ಅಮೂಲ್ಯ ಬದುಕಿಗೆ ತಾವೇ ಅಂತ್ಯ ಹಾಡಿದ್ದಾರೆ. ಇದು ಅವರ ತಪ್ಪು ಖಂಡಿತಾ ಅಲ್ಲ – ಪೂರಕ ಒಂದು ವ್ಯವಸ್ಥೆಯ ಕೊರತೆ ನಮಗೆ ಎಚ್ಚರಿಕೆ ಗಂಟೆ ಬಾರಿಸಿಸುತಿದೆ.
ಗ್ರಾಮೀಣ ಪ್ರದೇಶದಲ್ಲಿ ಮತ್ತು ಸ್ಥಳಾವಕಾಶ ಇದ್ದ ದೇವಾಲಯಗಳಲ್ಲಿ ಈಜುಕೊಳ ಒಂದನ್ನು ನಿರ್ಮಿಸಿ – ದಿನಾಲೂ – ವಾರಕೊಮ್ಮೆ – ತಿಂಗಳಿಗೊಮ್ಮೆ – ದಿನಕ್ಕೆ – ಗಂಟೆಗೆ – ಬಳಕೆಗೆ ಅನುಗುಣವಾಗಿ ದರ ನಿಗದಿಪಡಿಸಿ – ಊರಿನವರಿಗೆ ಮತ್ತು ದೇವಾಲಯಕ್ಕೆ ಬರುವ ಭಕುತರಿಗೆ ಜಲಕ್ರೀಡೆಗೆ ಅವಕಾಶ ಕಲ್ಪಿಸಿದಾಗ – ದೇವಾಲಯದ ಮತ್ತು ಮಾನವರ ಒಡನಾಟ ಮನೋವೇಗದಲ್ಲಿ ವೃದ್ಧಿಸಿ – ಮಾನಸಿಕ ಮತ್ತು ಶಾರೀರಿಕ ವ್ಯಾಯಾಮ ನೆಮ್ಮದಿ ಎರಡು ಸಿಕ್ಕಿ ಸುಮದುರ ಬಾಳಿಗೆ ನಾಂದಿಯಾಗುತದೆ.
ಈ ಕುರಿತು ತಜ್ಞರಿಂದ ಕಲೆಹಾಕಿದ ಮಾಹಿತಿ ಇಂತಿದೆ
೫೦ ೪೦ ೫ ಅಡಿಯ ಈಜುಕೊಳ ಒಂದು ಮೂಲೆಯಲ್ಲಿ ನಾಲ್ಕು ಅಡಿ ಆಳ ಸಾಕು
ಸುಮಾರು ಕನಿಷ್ಠ ವೆಚ್ಚ ೩ ಲಕ್ಷ ರೂಪಾಯಿಗಳಲ್ಲಿ ಮುಗಿಸಬಹುದು
ವರುಷ ಒಂದಕ್ಕೆ ೫ ರಿಂದ ೬ ಲಕ್ಷ ರೂಪಾಯಿಗಳ ಸಂಪಾದನೆ ಸಾಧ್ಯತೆ (ದೇವಾಲಯವಿರುವ ಸ್ಥಳ ಅವಲಂಬಿಸಿರುತದೆ )
ಒಂದು ವರ್ಷದ ಸಂಪಾದನೆ ಉದ್ಯಮಿಗೆ ಕೊಡುವುದಾದರೆ ಉಚಿತ ಈಜುಕೊಳ ಮಾಡಿಕೊಡಬಹುದು
ಇದು ಪ್ರಾಕೃತಿಕ ಜಿಮ್ ಎಂಬುದನ್ನು ನಾವು ಮನಗಾಣಬೇಕು
ಸದ್ರಡ ಕಾಯದ ಮಾನವ ಪಿಳ್ಗೆಗೆ ಉತ್ತಮ ವೇದಿಕೆ
ಅಂತಾರಾಷ್ಟ್ರೀಯ ಮಟ್ಟದ ಈಜುಪಟುಗಳ ತಯಾರು ಮಾಡುವ ಕೇಂದ್ರವಾಗಿ ದೇವಾಲಯಗಳ ದೊಡ್ಡ ಕೊಡುಗೆ
ಗಣನೀಯ ರೋಗ ರುಜಿನಗಳು ಮಂಗಾ ಮಾಯ
ಧಾರ್ಮಿಕ ಕ್ಷೇತ್ರ ಸಾಮಾಜಿಕ ಕ್ಷೇತ್ರವಾಗಿ ಪರಿವರ್ತನೆ
ಜಲಕ್ರೀಡೆಗಾಗಿ ಜೀವ ಕಳೆದುಕೊಳ್ಳುವ ಸನ್ನಿವೇಶ ಇಲ್ಲವೇ ಇಲ್ಲ
ದೇವಾಲಯಗಳು ಸಮಗ್ರ ಬೆಳವಣಿಗೆಗೆ ಪೂರಕ ಎಂಬ ಮೂಲ ಉದ್ದೇಶ ಮತ್ತು ಗುರಿಯತ್ತ ದಾಪುಗಾಲು

See also  ಸ್ವಾವಲಂಬಿ ಮತ್ತು ಸಂತುಷ್ಟ ದೈವಾಲಯ ದೇವಾಲಯಕ್ಕೆ ವಿಭಿನ್ನ ದಾರಿಗಳು - ಆನ್ಲೈನ್ ಪೂಜೆ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?