ಕೃಷಿ ಕಾರ್ಮಿಕರು ಉದ್ಯೋಗ ಸಿಗದೇ ಬದುಕಿನ ನಿರ್ವಹಣೆಗೆ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತಿದ್ದರೆ – ಇನ್ನೊಂದು ಬದಿಯಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಜಮೀನುದಾರರು ಬೇರೆ ಬೇರೆ ರೀತಿಯ ಉಪಾಯಗಳನ್ನು ಅಳವಡಿಸಿ ಕೈಸುಟ್ಟುಕೊಂಡು – ಕೃಷಿ ಮಾಹಿತಿ ಎಂಬ ನಾಲ್ಕು ಗೋಡೆಯ ಮದ್ಯೆ ಸ್ವದೇಶೀ ವಿದೇಶಿ ವಿಷಯ ವಿಚಾರಗಳನ್ನು ಮನದಟ್ಟು ಮಾಡಿ ಕೃಷಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವ ಘನ ಕಾರ್ಯ ನಿರ್ಭಯದಿಂದ ಮುಂದೆ ಮುಂದೆ ಸಾಗುತಿದೆ.
ನಾವು ಆದ್ಯತಾ ವಲಯದಲ್ಲಿ ಕೃಷಿ ಕಾರ್ಮಿಕರ ಮಾಹಿತಿ ಬೆರಳ ತುದಿಯಲ್ಲಿ ಸಿಗುವ ವ್ಯವಸ್ಥೆಗೆ ಕಾಯಕಲ್ಪ ನೀಡಿ ತದನಂತರ ಕೃಷಿ ಮಾಹಿತಿ ಪ್ರತಿ ಕೃಷಿಕನಿಗೂ ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತು ಪಡೆಯಬಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟಾಗ ಅನಿವಾರ್ಯ ಕಾರಣಗಳಿಂದಾಗಿ ಈ ಕ್ಷೇತ್ರದಲ್ಲಿ ಉಳಿದವರಿಗೆ ನೆಮ್ಮದಿ ಉಸಿರು ಬಿಡುವ ಕಾಲ ಒದಗಿಬರಲಿ – ಇದಕ್ಕಾಗಿ ನಮ್ಮ ಪುಟ್ಟ ಪ್ರಯತ್ನ
ಕೃಷಿ ಕಾರ್ಮಿಕರಲ್ಲಿ ನೂರಾರು ವಿಭಾಗಗಳಿದ್ದು – ನಾವು ಒಂದು ಪ್ರದೇಶವನ್ನು ಸೀಮಿತವಾಗಿಟ್ಟುಕೊಂಡು ಅಲ್ಲಿಯ ಕಾರ್ಮಿಕರ ಮಾಹಿತಿ ನೀಡಿ ಬಳಿಕ ಅಗತ್ಯಕಾನುಸಾರವಾಗಿ ವಿಭಿನ್ನ ವೇದಿಕೆ ಮೂಲಕ ಮಾಹಿತಿ ಒದಗಿಸುವತ್ತ ದೃಷ್ಟಿ ಹಾಯಿಸೋಣ.
ಅಡಿಕೆ ಸುಳಿಯುವವರ ಕೈಪಿಡಿ (ಡೈರೆಕ್ಟರಿ)
ಅಡಿಕೆ ತೆಂಗು ತೆಗೆಯುವವರ ಕೈಪಿಡಿ
ಹುಲ್ಲು ಕತ್ತರಿಸುವವರ ಕೈಪಿಡಿ
ರಬ್ಬರ್ ಟ್ಯಾಪಿಂಗ್ ಮಾಡುವವರ ಕೈಪಿಡಿ
ತೋಟಗಾರಿಕೆ ಕಾರ್ಮಿಕರ ಕೈಪಿಡಿ
ಜೆಸಿಬಿ ಮತ್ತು ಇಟಾಚಿಗಳ ಕೈಪಿಡಿ
ಕೃಷಿ ಕಾರ್ಮಿಕ ಗುತಿಗೆದಾರರ ಕೈಪಿಡಿ
ನಾಟಿ ಮಾಡುವವರ ಕೈಪಿಡಿ
ಅಡಿಕೆ ಒಣಗಿಸುವ ಡ್ರೈಯರ್ ಮಾಡುವವರ ಕೈಪಿಡಿ
ಇನ್ನಿತರ ಜನಸಾಮಾನ್ಯರ ಅಗತ್ಯಕ್ಕೆ ಅನುಸಾರವಾಗಿ ಕೈಪಿಡಿಗಳು