Agriculture labour directory – ಕೃಷಿ ಕಾರ್ಮಿಕರ ಡೈರೆಕ್ಟರಿ

ಶೇರ್ ಮಾಡಿ

ಕೃಷಿ ಕಾರ್ಮಿಕರ ಕೊರತೆ ಕೃಷಿಕರನ್ನು ನಿರಂತರ ಕಾಡುತಿದ್ದು – ಇದಕ್ಕೊಂದು ಪರಿಹಾರದ ಅವಶ್ಯಕತೆಯಿದೆ. ಈ ವಲಯದ ಕಾರ್ಮಿಕರನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿ ನಮ್ಮ ವಿದ್ಯಾಲಯಗಳು ದಾಪುಗಾಲಿಡುವುದನ್ನು ಬದಲಾಯಿಸಿ ಗರಿಷ್ಠ ಉದ್ಯೋಗ ಉದ್ಯಮ ಒದಗಿಸಿಕೊಡಬಲ್ಲ – ನೆಮ್ಮದಿ ಜೀವನ ನೀಡಬಲ್ಲ – ಕನಿಷ್ಠ ಒಂದು ಎಕ್ರೆ ಜಮೀನಿನಲ್ಲಿ ಸಾಫ್ಟವೆರ್ ಉದ್ಯೋಗಿಗಿಂತ ಮಿಗಿಲಾದ ಬದುಕು ಇಲ್ಲಿದೆ ಎಂಬ ನಗ್ನ ಸತ್ಯವನ್ನು ಸಾರಿ ಸಾರಿ ಹೇಳುವ ಅನಿವಾರ್ಯತೆಯನ್ನು ಕಡೆಗಣಿಸಿದರೆ ಪ್ರಕೃತಿ ಮುನಿದು – ನಮ್ಮ ಬದುಕಿಗೆ ಸೂರ್ಯೋದಯವೇ ಸಿಗದ ದಿನ ದೂರವಿಲ್ಲ. ಕೃಷಿ ಕಾರ್ಮಿಕರ ಮಾಹಿತಿ ಪ್ರತಿಯೊಬ್ಬ ಕೃಷಿಕನಿಗೂ ಬೆರಳ ತುದಿಯಲ್ಲಿ ಸಿಗುವ ವ್ಯವಸ್ಥೆ ಇದ್ದಲ್ಲಿ ಪ್ರಸ್ತುತ ಸಮಸ್ಯೆ ಬಹುಪಾಲು ಪರಿಹಾರಕ್ಕೆ ನಾಂದಿ ಈ ಡೈರೆಕ್ಟರಿ ಉದ್ದೇಶ.
ಕಾರ್ಮಿಕರ ಹೆಸರು ಊರು ಮೊಬೈಲ್ ನಂಬರಿನ ಜೊತೆಗೆ ಆತ ಮಾಡುವ ಕಸುಬಿನ ವಿವರ ಇದ್ದಲ್ಲಿ ಕೃಷಿಕ ತನಗೆ ಬೇಕಾದ ಪರಿಣತ ಕೆಲಸಗಾರರನ್ನು ಬಳಸುವ ಸಾಧ್ಯತೆ ಇದೆ.
ಇನ್ನೊಂದು ಬಹು ಮುಖ್ಯ ಸಮಸ್ಯೆ ವೇತನ – ಹೆಚ್ಚು ವೇತನ ಕೊಡುವುದಾದರೆ ಮತ್ತು ತುಂಡು ಗುತ್ತಿಗೆ ನೀಡುವುದಾದರೆ ಎಷ್ಟು ಜನರು ಬೇಕಾದರೂ ಸಿಗುತಾರೆ – ಆದರೆ ಕೃಷಿಕನ ಅನುಭವದ ಕೊರತೆ ,ನಿಗದಿತ ಆದಾಯದ ಕೊರತೆ, ಕೃಷಿಗೆ
ಸಮರ್ಥ ಮಾಹಿತಿ ಕೊರತೆ ನಿತ್ಯ ನಿರಂತರ ಅವನನ್ನು ಕಾಡುತದೆ.
ಕೃಷಿಕನಿಲ್ಲದೆ ಬದುಕೇ ಇಲ್ಲವೆಂದು ಅರಿತಿದ್ದರು ಇಂದಿನವರೆಗೆ – ಕೃಷಿಕನನ್ನು ತಯಾರು ಮಾಡುವ ಶಿಕ್ಷಣ ಮತ್ತು ಜನಪ್ರತಿನಿಧಿಯನ್ನು ತಯಾರು ಮಾಡುವ ಶಿಕ್ಷಣದ ಕೊರತೆ – ಇವೆರಡು ಮಾರಕವಾಗುವುದನ್ನು ತಪ್ಪಿಸಿ ಪೂರಕವನ್ನಾಗಿಸುವತ್ತ ಧುಮುಕುವ ನಿರೀಕ್ಷೆ ಜನಸಾಮಾನ್ಯರಲ್ಲಿದೆ.
ಅಡಿಕೆ ತೆಗೆಯುವವರ , ತೆಂಗು ತೆಗೆಯುವವರ , ಅಡಿಕೆ ತೆಂಗು ಸುಳಿಯುವವರ, ಮರ ಕಡಿಯುವವರ ತೋಟದ ಕೆಲಸಮಾಡುವವರ …………ಇತ್ಯಾದಿ ಇತ್ಯಾದಿ ಹೆಸರಿನ ಜೊತೆಗೆ ನಿಮ್ಮ ಪರಿಣತಿ ಮತ್ತು ಗುಂಪುಗಳಿದ್ದರೆ ಅದರ ವಿವರಗಳಿಗೆ ಅವಕಾಶವಿದೆ
ಈ ಡೈರೆಕ್ಟರಿಗೆ ಪೂರಕ ಮಾಹಿತಿ ಒದಗಿಸುವ ಇಚ್ಛೆ ಇರುವವರು ದಯಮಾಡಿ ಸಂಪರ್ಕಿಸಿ. ಅತ್ಯಾಕರ್ಶಕ ಪಾಲು ಕೊಡಲಾಗುವುದು

See also  ಕೃಷಿ ಕಾರ್ಮಿಕರ ಡೈರೆಕ್ಟರಿ - Directory of Agricultural Labourers

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?