ಕಟ್ಟಡ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವವರನ್ನೆಲ್ಲ – ಜನಸಾಮಾನ್ಯ ಕೆಲಸಗಾರನಿಂದ ಹಿಡಿದು ಪರಿಣತಿ ಹೊಂದಿರುವ ಕೆಲಸಗಾರರು ಗುತ್ತಿಗೆದಾರರ ದೊಡ್ಡ ದೊಡ್ಡ ಬಿಲ್ದರ್ಸ್ ಸಕಲರೂ ಸೇರಿದ್ದು – ಗ್ರಾಮೀಣ ಪ್ರದೇಶದಲ್ಲಿ ಬಿಲ್ದರ್ ಹುಡುಕುವುದು ಎಷ್ಟು ಕಷ್ಟದಾಯಕ ಎಂಬುದ ಅರಿತು – ಈ ನಿಟ್ಟಿನಲ್ಲಿ ಮಾಹಿತಿ ನೀಡುವ ಕೆಲಸ ಇಲ್ಲಿ ಮುಂದುವರಿಯುತದೆ.
ಯಾರು ಯಾರು ಮಾಹಿತಿ ಕೊಡಬಹುದು ?
ಮೇಸ್ತ್ರಿಗಳು , ಕೂಲಿ ಕೆಸಸದವರು , ಮರದ ಕೆಲಸದವರು, ಎಲೆಕ್ಟ್ರಿಕ್ ಕೆಲಸದವರು , ಟೈಲ್ಸ್ ಹಾಕುವವರು , ಸೆಂಟ್ರಿಂಗ್ ಕೆಲಸದವರು , ಪೇಯಿಂಟ್ರ್ಸ್, ಹೊಯಿಗೆ ಜಲ್ಲಿ ಕಬ್ಬಿಣ ಪೂರೈಕೆದಾರರು ಒಟ್ಟಾರೆಯಾಗಿ ಕಟ್ಟಡ ಕಾಮಗಾರಿ ಮಾಡಲು ಇಚ್ಚಿಸುವಾತನಿಗೆ ಈ ವೇದಿಕೆಯಲ್ಲಿಯೇ ಸಕಲ ಮಾಹಿತಿ ಸಿಗಬೇಕು
ಬಿಲ್ದರ್ ಮಾಹಿತಿ ಇರುವುದು ಸಾಕಾಗುವುದಿಲ್ಲವೇ?
ಎ ಕ್ಲಾಸ್ ಬಿ ಕ್ಲಾಸ್ ಮಾಹಿತಿಯ ವ್ಯವಸ್ಥೆ ಇದೆ. ಆದರೆ ಜನಸಾಮಾನ್ಯರಿಗೆ ಬೇಕಾದ ಮತ್ತು ಸಣ್ಣ ಪುಟ್ಟ ಕೆಲಸ ಮಾಡಿಸುವವರಿಗೆ ಇದರ ಅವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ನಾವು ಯಾರನ್ನು ಸಂಪರ್ಕಿಸಬೇಕು.
ನೇರ ಸಂಪರ್ಕಿಸಿ – ಉದ್ಯೋಗ ಉದ್ಯಮ ಬಯಸುವವರಿಗೂ ಅವಕಾಶವಿದೆ. ನಗಣ್ಯ ಶುಲ್ಕ ಪಾವತಿ ಇರುತದೆ. ಪ್ರಕಟಣೆ ಶಾಶ್ವತವಾಗಿರುತದೆ.
ಇದು ಬಿಲ್ದರ್ ಭಾರವಾಗುವ – ಎರಡೆರಡು ಕೆಲಸವೆಂದು ನಮ್ಮ ಅನಿಸಿಕೆ ತಪ್ಪೇ ?
ನಾವು ತಪ್ಪು ಎಂದು ಹೇಳುವುದಿಲ್ಲ. ಸ್ವತಃ ನೀವೇ ಹುಡುಕಿ ವಾಸ್ತವವನ್ನು ತಿಳಿದು ತಪ್ಪು ಯಾ ಸರಿ ಎಂಬ ತೀರ್ಮಾನಕ್ಕೆ ಬನ್ನಿ.
ಅತಿ ಶೀಘ್ರದಲ್ಲಿ ಸಂಪಾದನೆ ಮಾಡುವ ಈ ಪ್ರಪಂಚದಲ್ಲಿ ನಿಮ್ಮ ಈ ವೇದಿಕೆ ಕೂಡ ಸೇರ್ಪಡೆ ಎನ್ನಬಹುದೇ?
ಕಿತ್ತು ತಿನ್ನುವ – ಹಂಚಿ ತಿನ್ನುವ – ಕೊಟ್ಟು ತಿನ್ನುವ ಈ ಜಗದಿ – ಹಂಚಿ ತಿನ್ನುವ ಸ್ಥಳದಿಂದ ಕೊಟ್ಟು ತಿನ್ನುವ ಸ್ಥಳಕ್ಕೆ ಪಯಣ ಬೆಳೆಸುತ್ತಿದ್ದೇವೆ.
ಬಿಲ್ದರ್ ಇವರಿಂದ ಮೋಸ ಹೋಗುವ ಸಾಧ್ಯತೆ ಇದೆಯಾ
ಎಲ್ಲ ಕ್ಷೇತ್ರದಲ್ಲಿರುವಂತೆ ಇಲ್ಲಿಯೂ ಒಳ್ಳೆಯವರು ಕೆಟ್ಟವರು ಇರುವುದು ಸಹಜ. ಪ್ರಸ್ತುತ ಲೋಕವರಿತು ಬಾಳುವುದು ಸೂಕ್ತ.
ಬಿಲ್ದರ್ ಒಂದು ಕಾಮಗಾರಿಯನ್ನು ಉಚಿತವಾಗಿ ಪ್ರಚಾರಕ್ಕೆಂದು ಮಾಡಿಕೊಡುವ ಸಾಧ್ಯತೆ ಇರಬಹುದೇ?
ಗರಿಷ್ಠ ಮಟ್ಟದ ವೆಚ್ಚವನ್ನು ಪ್ರಚಾರಕ್ಕೆ ಬಳಸುವ ಬದಲು ಗ್ರಾಹಕರಿಗೆ ತಲುಪಿಸಿ – ಸಂತುಷ್ಟ ಗ್ರಾಹಕರೇ ತಮ್ಮ ಪ್ರಚಾರಕರೆಂದು ಸಂತುಷ್ಟರಾಗಿ ಗುರುತರ ಉದ್ದಿಮೆಗಳು ವೃತ್ತಿದಾರರು ಈ ದಾರಿಯನ್ನು ಆಯ್ಕೆ ಮಾಡುವತ್ತ ದಾಪುಗಾಲು ಹಾಕುತಿದ್ದಾರೆ.
ಒಬ್ಬ ಗ್ರಾಹಕನಿಗೆ ನಿಮ್ಮ ಸಲಹೆ ಏನು ?
ಗ್ರಾಹಕನು – ತನ್ನ ನಿಗದಿತ ಬದಲಾಗದ ನಕ್ಷೆ ಮತ್ತು ಬಜೆಟ್ – ವಾಸ್ತು ಇತರ ವಿಷಯಗಳ ಬದಲಾವಣೆ ಕಾಮಗಾರಿ ಪ್ರಾರಂಭಕ್ಕೆ ಮೊದಲು ಮಾತ್ರ – ತನ್ನ ನಿಗದಿತ ಹಣ ವೆಚ್ಚವಾದಾಗ ಕಾಮಗಾರಿಗೆ ನಿಲುಗಡೆ – ಅನ್ನದ ಹಣ ಮನೆ ಕಟ್ಟಡಕ್ಕೆ ಬೇಡವೇ ಬೇಡ – ಬಟ್ಟೆಯ ಫ್ಯಾಶನ್ ವರುಷದಿಂದ ತಿಂಗಳಿಗೆ ಇಳಿದಂತೆ ಮನೆ ಕಟ್ಟಡಗಳ ಫ್ಯಾಶನ್ ವರುಷಗಳಿಗೆ ಇಳಿದಿರುವುದನ್ನು ಮನಗಂಡು ಕಾಲಕ್ಕೆ ತಕ್ಕಂತೆ ಬದಲಾವಣೆಯ ಅವಾಕಾಶ ಕಲ್ಪಿಸುವುದು ಸೂಕ್ತ