ಹುಟ್ಟಿದ ಪ್ರತಿ ವ್ಯಕ್ತಿ ಒಂದಲ್ಲ ಒಂದು ದಿನ ಸಾಯಲೇಬೇಕು. ಅಂತಹ ವ್ಯಕ್ತಿಗಳ ಬದುಕನ್ನು ಜೀವಂತಗೊಳಿಸುವ ವೇದಿಕೆ ಇದಾಗಿದ್ದು – ನಮ್ಮ ಮುಂದೆ ಈಗ ಇರುವ ಬೇರೆ ಬೇರೆ ಮಾಧ್ಯಮಗಳಿಂದ ಭಿನ್ನವಾಗಿದ್ದು – ಜನಸಾಮಾನ್ಯರಿಗೆ ಎಟಕುವಂತಿದ್ದು, ಶಾಶ್ವತವಾಗಿ , ಸಂಸಾರವನ್ನು ಪರಿಚಯಿಸುವ, ವ್ಯಕ್ತಿತ್ವವನ್ನು ಪ್ರದರ್ಶಿಸುವ, ಕೋಟಿಗಟ್ಟಲೆ ವೆಚ್ಚ ಮಾಡುವ ಇತರ ಪದ್ಧತಿಗಳಿಂದ ಬೆಟ್ಟದಷ್ಟು ಹಿರಿದಾಗಿದ್ದು, ವಿಪುಲ ಉದ್ಯೋಗಾವಕಾಶ ಒದಗಿಸಬಲ್ಲ ನಿಮ್ಮ ನಮ್ಮ ಕೋರಿಕೆಗೆ ದೇವರ ಅನುಗ್ರವೆಂದು ಭಾವಿಸಿ ಮುಂದೆ ಸಾಗೋಣ,
ನಮ್ಮನ್ನು ಅಗಲಿದ ನಮ್ಮವರ ಭಾವಚಿತ್ರ ನಮ್ಮ ವ್ಯಾಪಾರದ ಅಂಗಡಿಗಳಲ್ಲಿ, ಉದ್ದಿಮೆಗಳಲ್ಲಿ, ಸಾಮಾಜಿಕ ಧಾರ್ಮಿಕ ವಲಯಗಳಲ್ಲಿ ಇತ್ಯಾದಿ ಸ್ತಳಗಳಲ್ಲಿತ್ತು ಅವರ ಅರಿವು ಮುಂದಿನ ಜನಾಂಗಕ್ಕೂ ಸಿಗುವ ಉದ್ದೇಶ ಸೀಮಿತವಾಗಿದ್ದು , ಕೆಲವು ಗರಿಷ್ಠ ವೆಚ್ಚದಾಯಕವಾಗಿರುವುದನ್ನು ಮನಗಂಡು ಈ ವೇದಿಕೆಯನ್ನು ಬಳಸುವುದರಿಂದ ಗಮನಾರ್ಹ ಪ್ರಯೋಜನವಾಗುವ ಸಂಕಲ್ಪ ನಮ್ಮದಾಗಿದೆ.
ವ್ಯಕ್ತಿಯೊಬ್ಬ ತನ್ನ ಸಂಪಾದನೆಯನ್ನು ದೇವರಿಗೊಂದು,ಹಿರಿಯರಿಗೊಂದು ಮತ್ತು ಸಂಸಾರಕೊಂದು ಎಂದು ಮೂರು ವಿಭಾಗ ಮಾಡಿ ಬಳಕೆ ಮಾಡಿದರೆ ಮಾತ್ರ ನೆಮ್ಮದಿ ಬಾಳೆಂಬ ಬಲ್ಲವರ ಮಾತಿಗೆ ಬೆಲೆ ತೆತ್ತು ಸುಮದುರ ಬಾಳುವೆ ನಡೆಸುವತ್ತ ಸಾಗೋಣ.
ಉದ್ಯೋಗ ಉದ್ದಿಮೆದಾರರರಿಗೆ ಪೂರ್ಣಗುಂಬದ ಸ್ವಾಗತ