ಬಾಹ್ಯ ಆಡಂಬರದ ಇಂದಿನ ವಿದ್ಯೆ ಆಂತರಿಕ ಮೌಲ್ಯಗಳನ್ನು ಹಸಿದ ಮಣ್ಣಿನಂತಿರುವ ಮಕ್ಕಳ ಮನಸಿನಲ್ಲಿ ಬಿತ್ತಿ ಹೆಮ್ಮರವಾಗಿ ಬೆಳೆಸಬೇಕಾದ ಅಂದಿನ ಬದುಕಿನ ಶಿಕ್ಸಣ ವ್ಯವಸ್ಥೆ ನಮ್ಮ ಪಾಲಿಗೆ ಶಾಶ್ವತವಾಗಿ ದೂರವಾಗಿದೆ. ಆರಂಭದಲ್ಲಿ ಹೊಯಿಗೆಯ ಮೇಲೆ ಬರೆದು – ಬಳಿಕ ಬಲಪದಲ್ಲಿ ಮುಂದುವರಿಸಿ ಪಪೆರ್ ಪೆನ್ಸಿಲ್ ಪೆನ್ನು ಉಪಯೋಗಮಾಡಿ ಮೊಬೈಲ್ ಕಂಪ್ಯೂಟರ್ ಬಳಕೆ ಮುಂದುವರಿದು – ಓದುವ ಮಕ್ಕಳನ್ನು ನೋಡಿದಾಗ ಬೆಳ್ಳಿ ಹಾಳೆಯಲ್ಲಿ ಬಂಗಾರದ ಪೆನ್ನನ್ನು ಬಳಸುವಂತೆ ಗೋಚರಿಸುತಿದೆ. ವಿದ್ಯೆ ಎಂಬ ನಾಮಾಂಕಿತದಲ್ಲಿ ದೇಶ ತಂದೆ ತಾಯಿ ಸಮಾಜ ಮಾಡುವ ವೆಚ್ಚ ನಮ್ಮನ್ನು ಬಕಾಸುರನಂತೆ ಕಾಡುತಿದ್ದು ಪರಿಹಾರದತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಬದುಕು ಎನ್ನುವ ಸಮರವನ್ನು ಎದುರಿಸುವ ಸೈನಿಕರನ್ನಾಗಿ ಮಾಡುವ ವಿದ್ಯಾ ಸಮುಸ್ಥೆಗಳು ಹುಟ್ಟಿ ಬರಲಿ
ತಪ್ಪು ಮಾಡದೇ ಬದುಕುವ – ತಪ್ಪು ಆದರೆ ಒಪ್ಪಿ ಸೂಕ್ತ ಶಿಕ್ಷೆಗೆ ತಲೆಬಾಗುವ ಪ್ರಜೆಗಳು ಮಾತ್ರ ವಿದ್ಯಾಲಯದಿಂದ ಹೊರಬರಲಿ
ಆನ್ಲೈನ್ ಶಿಕ್ಷಣ ಗರಿಷ್ಠ ಮಹತ್ವ ಪಡೆದಾಗ ಶಿಕ್ಸಣಕ್ಕಾಗುವ ವೆಚ್ಚ ಕನಿಷ್ಠ ಮಟ್ಟಕ್ಕೆ ಇಳಿಯುತದೆ
ಸ್ಟಾರ್ ಹೋಟೆಲುಗಳ ರೀತಿಯಲ್ಲಿರುವ ಶಿಕ್ಸಣ ಸಮುಸ್ಥೆಗಳಿಂದ ಹೊರಬಂದ ವಿದ್ಯಾರ್ಥಿಗಳು -ನಿಜ ಬದುಕನ್ನು ಎದುರಿಸಲು ಸಾಧ್ಯವೇ
ಗುಣಮಟ್ಟದ ಹೆಸರಿನಲ್ಲಿ ಖಾಸಗಿ ಮತ್ತು ಸರಕಾರಿ ಶಾಲೆಗಳ ಪೈಪೋಟಿ ಪೋಷಕರಿಗೆ ಗಗನಕುಸುಮವಾಗುತಿರುವುದನ್ನು ತಪ್ಪಿಸೋಣ