ದೈವ ಒಂದು ವಿಶೇಷವಾದ ಶಕ್ತಿ – ಕರಾವಳಿ ಪ್ರದೇಶದಲ್ಲಿ ಆಚರಣೆಯಲ್ಲಿದ್ದು – ಮನೆ ಕುಟುಂಬ ಊರಿನವರು ಅರಸು ವ್ಯಾಪ್ತಿಯ ಜನರನ್ನು ಒಂದು ತಾಯಿ ಮಕ್ಕಳಂತೆ ಬಾಳುವೆ ನಡೆಸಲು ಮಾತ್ರ ಅವಕಾಶ ಕಲ್ಪಿಸಿ – ತಪ್ಪಿ ನಡೆದರೆ ಶಿಕ್ಸಿಶಿ ಒಂದಾಗಿ ಬಾಳುವಂತೆ ಮಾಡುವ ಮಾಯಾ ಶಕ್ತಿ – ಪೂರ್ವಜರ ಕೊಡುಗೆ – ಅನುಷ್ಠಾನದಲ್ಲಿ ಸೇವಾ ಮನೋಭಾವನೆಗೆ ಇತಿಶ್ರೀ ಹಾಡಿ ವ್ಯಾಪಾರ ಮತ್ತು ದರೋಡೆಕೋರರ ಕಪಿಮುಷ್ಠಿಯಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಇಂದಿಗೂ ಕೂಡ ನಂಬಿದವರಿಗೆ ಇಂಬು ಕೊಟ್ಟು – ಹುಟ್ಟಿನಿಂದ ಸಾಯುವಲ್ಲಿಯವರೆಗೆ ನಮ್ಮೊಡನಿದ್ದು ದೇವರ ದೂತನಾಗಿ ನಮಗೆ ಸದಾ ರಕ್ಷಣೆ ಕೊಡುವುದೆಂದು ನಮ್ಮೆಲ್ಲರ ಅಪಾರ ನಂಬಿಕೆಗೆ ಕೆಲವೊಮ್ಮೆ ಮಾತ್ರ ಪುಷ್ಟಿ ದೊರಕುತಿದ್ದು ನಿತ್ಯ ನಿರಂತರ ದೊರಕುವಂತಾಗಲು ಈ ವೇದಿಕೆಗೆ ಚಾಲನೆ ನೀಡಲಾಗಿದೆ.
ದೈವ ಆರಾಧಕರ ಒಕ್ಕೂಟ ಯಾಕೆ ಬೇಕು ?
೧. ದೈವ ದೈವಾರಾಧನೆ ಆಡಳಿತ ವಿಭಾಗ – ಪೂಜಾ ವಿಭಾಗಕ್ಕೆ ಸ್ಥಳಾಂತರ ಮಾಡಿರುವುದು ದೊಡ್ಡ ದುರಂತ – ಚಿಂತಿಸೋಣ
೨. ಬಾಹ್ಯ ಆಡಂಬರ ಮುಗಿಲುಮುಟ್ಟಿದೆ – ಆಂತರಿಕ ಆಡಂಬರದತ್ತ ದಾಪುಗಾಲು ಇಡುವ ಸಂಕಲ್ಪ ಮಾಡಿ ಸಾಗಬೇಕಾಗಿದೆ
೩. ದೈವ ನರ್ತನ ಸೇವೆ ಬಹಿರಂಗ ನ್ಯಾಯಾಲಯ – ಅರಿವು ಮುಟ್ಟಿಸುವ ಕೆಲಸ ಮಾಡೋಣ
೪. ಯಜಮಾನ ಮಾಡುವುದನ್ನು ಯಾರೋ ಮಾಡುತ್ತಾರೆ ಪ್ರತಿಫಲ ಸೂನ್ಯ
೫. ಬಾಹ್ಯ ಕಟ್ಟುಕಟ್ಟಳೆಗೆ ಮಾತ್ರ ಓತ್ತು – ಆಂತರಿಕ ಕಟ್ಟುಕಟ್ಟಲೆ ಬಗ್ಗೆ ಅರಿವಿಲ್ಲ
೬. ನರ್ತನ ಸೇವಾ ವೇದಿಕೆ – ಅರಸು ತಂತ್ರಿ ಅರ್ಚಕರ ಗುತ್ತು ಬಾರಿಕೆ ……… ಸನ್ಮಾನ ವೇದಿಕೆ ಆಗಿರುವುದು ಅತಿ ದೊಡ್ಡ ದುರಂತ
೭. ಸಮಾಜಘಾತಕ ವ್ಯಕ್ತಿಗಳನ್ನು ಮಾಯಜ್ಞಾನದಿಂದ ಹೆಸರು ಹೇಳಿ ಕರೆದು ಶಿಕ್ಷೆ ಪ್ರಮಾಣವನ್ನು ಯಜಮಾನನಲ್ಲಿ ಸಮಾಲೋಚಿಸಿ ಕೊಡುವ ದೈವದ ನುಡಿ ಹೇಳ ಹೆಸರಿಲ್ಲದೆ ಶಾಶ್ವತ ಮಾಯವಾಗಿದೆ
೮. ದೈವದ ಪರಿಚಾರಕ ವರ್ಗದಿಂದ ಹಿಡಿದು ಯಜಮಾನ ನರ್ತಕ ತಂತ್ರಿ ವಾಸ್ತು ಜ್ಯೋತಿಷ್ಯ ……. ತಮ್ಮಿಂದ ಆದ ತಪ್ಪುಗಳನ್ನು ಒಪ್ಪಿಕೊಳ್ಳದ ಇಂದಿನ ಸ್ಥಿತಿ ದೈವಾರಾಧನೆ ವೇದಿಕೆಗೆ ಅನರ್ಹರು – ತಿಳಿಯಪಡಿಸಬೇಕಾಗಿದೆ
೯. ದೈವದ ನುಡಿಕಟ್ಟು ನರ್ತಕನ ನುಡಿಕಟ್ಟು ಅರಿತ ಸಮಾಜದ ಅವಶ್ಯಕತೆ ಇದೆ
೧೦. ಯಾವುದೇ ನ್ಯಾಯಾಲಯದಲ್ಲಿ ಸಿಗದ ನ್ಯಾಯ ಸೂನ್ಯ ಯಾ ಕಿಂಚಿತ್ತೂ ವೆಚ್ಚದಲ್ಲಿ ಈ ವೇದಿಕೆಯಲ್ಲಿ ಸಿಗುತಿರುವುದನ್ನು ಪ್ರಚಾರಪಡಿಸಬೇಕು
೧೧. ಜಾಗತಿಕ ಮಟ್ಟದ ಅತ್ಯಂತ ಶ್ರೇಷ್ಠ ನ್ಯಾಯಾಂಗ ವ್ಯವಸ್ಥೆ ನಮ್ಮದು – ಕೀಳು ಮಟ್ಟದ ಸಂಕುಚಿತ ಭಾವನೆಯಿಂದ ಹೊರ ಬಂದು – ಉತ್ತುಂಗ ಶಿಖರಕ್ಕೆ ಏರಿಸೋಣ – ಪ್ರತಿಯೊಬ್ಬರಿಗೂ ಸ್ಪಷ್ಟವಾದ ಅರಿವು ಮುಟ್ಟಿಸುವ ಕೆಲಸ ನಮ್ಮಿಂದಾಗಲಿ
ಮುಂದುವರಿಯುವುದು , ಆಯ್ಕೆಯಾದ ಸಲಹೆ ಸೂಚನೆಗಳನ್ನು ಭಾವಚಿರದೊಂದಿಗೆ ಪ್ರಕಟಿಸುವ ಅವಕಾಶ ಕಲ್ಪಿಸಲಾಗಿದೆ