ಒಂದು ದೇಶದ ಚಾಲಕರು ರಾಜಕಾರಿಣಿಗಳು – ಪಕ್ಷ ಹಿತ ಸ್ವಾರ್ಥ ಹಿತ ಮರೆತು ದೇಶದ ಹಿತಕ್ಕಾಗಿ ತಮ್ಮ ಕರ್ತವ್ಯ ಮಾಡಿದರೆ – ಕೆಲವೇ ಸಮಯಗಳಲ್ಲಿ ದೇಶ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಮೆರೆಯುವ ಎಲ್ಲ ಸಾಧ್ಯತೆಗಳಿವೆ. ರಾಜಕಾರಿಣಿಯೊಬ್ಬ ಸ್ವಾರ್ಥಿಯಾಗಲು ಅವನೊಬ್ಬನೇ ಕಾರಣವಾಗದೆ ಜನಸಾಮಾನ್ಯರ ಕೊಡುಗೆ ಅಪಾರವಾಗಿದೆ. ದೇಶದ ಪ್ರಜೆಗಳಾದ ನಾವೆಲ್ಲರೂ ಸೇವಾ ಮನೋಭಾವನೆ ವೇಷ ತೊಟ್ಟು ಬಾಳುವೆ ನಡೆಸಿದರೆ ನಾವು ನಿಂತ ನೆಲ ಸ್ವರ್ಗವಾಗಬಹುದು.
ಇದಕ್ಕಾಗಿ ನಾವು ಮಾಡತಕ್ಕ ಮಾರ್ಗೋಪಾಯಗಳು
ಪ್ರತಿ ಹಂತದಲ್ಲೂ ರಾಜಕಾರಿಣಿಗಳ ಸೇವಾ ಒಕ್ಕೂಟದ ಸ್ಥಾಪನೆ
ರಾಜಕಾರಿಣಿಗಳಿಗೆ ಅನ್ಯ ಮೂಲಗಳಿಂದ ಸಂಪಾದನೆಗೆ ದಾರಿ ಹುಡುಕುವುದು
ಪ್ರತಿ ರಾಜಕಾರಿಣಿಯನ್ನು ಆನ್ಲೈನ್ ಮೂಲಕ ಪರಿಚಯಿಸುವುದು
ಸೇವಾ ಒಕ್ಕೂಟದಿಂದ ಗರಿಸ್ಟ್ ಕಾಮಗಾರಿ ವೆಚ್ಚವನ್ನು ಕನಿಷ್ಟಕ್ಕೆ ತಲುಪಿಸುವುದು
ಪ್ರತಿಯೊಂದು ಸಣ್ಣ ಪುಟ್ಟ ಕೆಲಸಕ್ಕೆ ಬೊಕ್ಕಸಕ್ಕೆ ಬಾರವಾಗದೆ ಜನ ಸಾಮಾನ್ಯರು ಮಾಡುವಂತೆ ಪ್ರೇರೇಪಿಸುವುದು
ನನ್ನ ನಿನ್ನ ಕೆಲಸಕ್ಕೆ ತಿಲಾಂಜಲಿಯಿತ್ತು ನಮ್ಮ ಕೆಲಸವೆಂಬ ಅರಿವು ಮೂಡಿಸುವುದು
ಕಟ್ಟುನಿಟ್ಟಿನ ಕಾನೂನು ಪಾಲನೆಯತ್ತ ನೂರು ಶೇಕಡಾ ಅನುಷ್ಠಾನ
ತಪ್ಪು ಮಾಡಿದವರಿಗೆ ಶಿಕ್ಷೆ – ಅನ್ಯ ದೇಶದ ಪಾಠವನ್ನು ನಾವು ಪಾಲಿಸೋಣ
ಒಂದು ತಪ್ಪಿಗೆ ಎರಡೆರಡು ಶಿಕ್ಷೆಗೆ ಇತಿಶ್ರೀ
ನಿಷ್ಠಾವಂತ ಆದರ್ಶ ರಾಜಕಾರಿಣಿಗಳಿಗೆ ಮರುಜನ್ಮ ನೀಡುವುದು
ಇಂದಿನ ಅರಸರು ಪ್ರಜಾಪ್ರತಿನಿದಿಗಳು ಪ್ರಜೆಗಳಿಗೆ ಆದರ್ಶವಾಗಿರಲಿ
ವ್ಯಕ್ತ ಅವ್ಯಕ್ತ ಮಾನವ ಶಕ್ತಿಯನ್ನು ಸದ್ಬಳಕೆ ಮಾಡೋಣ,
ನಮ್ಮೆಲ್ಲರ ಬಾಳು ಬದುಕು ಸನ್ಮಾರ್ಗದತ್ತ ಮುಂದೆ ಮುಂದೆ ಸಾಗಲಿ