ಟೀಚರ್ ಸೇವಾ ಒಕ್ಕೂಟ ಮತ್ತು ಟೀಚರ್ಸ್ ಬುಲೆಟಿನ್ – ಸಂವಾದ

ಶೇರ್ ಮಾಡಿ

ಶಾಲಾಶಿಕ್ಷಣ ಸಂಪಾದನೆಯ ಮತ್ತು ಸೋಮಾರಿಗಳನ್ನು ಸೃಷ್ಟಿಸುವ ಶಿಕ್ಷಣವಾದ ಪರ್ವ ಕಾಲದಲ್ಲಿ – ಬದುಕಿನ ಶಿಕ್ಷಣದ ಮಾನವಕುಲಕೋಟಿಯ ಮನದಾಳದ ಕೂಗನ್ನು ಅಳಿಸಿ – ಸಂಗ್ರವಾದ ಕೆಲವೊಂದು ಸಲಹೆ ಸೂಚನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಈ ವೇದಿಕೆಯನ್ನು ಬಳಸುತಿದ್ದೇವೆ.
ನಮಗೆ ದೊರೆಯುತಿರುವ ಶಿಕ್ಷಣ ಅಕ್ಷರ ಜ್ಞಾನ ಎಂಬುದು ಸರಿಯೇ?
ಒಂದು ಮಗುವಿನಲ್ಲಿ ಪರಿಪೂರ್ಣ ವ್ಯಕ್ತಿತ್ವವದ ಜ್ಞಾನವನ್ನು ಕೊಡುವುದೇ ಶಿಕ್ಷಣ ನಮ್ಮ ಪೂರ್ವಜರ ಅಂಬೋಣ – ಅರ್ಧ ಶತಮಾನಗಳ ಹಿಂದಿನ ಜನಾಭಿಪ್ರಾಯ ಕೂಡ ಆಗಿತ್ಹು. ಶಾಲೆಗೆ ಹೋದ ಮಕ್ಕಳಿಗೆ ಓದಲು ಬರೆಯಲು ಗೊತ್ತು ಎನ್ನುವ ಅನಿಸಿಕೆ ವಾಸ್ತವದ ಸ್ಥಿತಿ.
ಇದಕ್ಕೆ ಶಿಕ್ಷಕರು ಹೊಣೆಗಾರರೇ
ಇವರು ವ್ಯವಸ್ಥೆಯ ಮತ್ತು ಪರಿಸ್ಥಿತಿಯ ಕೈಗೊಂಬೆಗಳು.
ಇವರಿಗೆ ಶಿಕ್ಷಕರಿಗೆ ಶಿಕ್ಷಕರಾಗಿ ಸರಿಪಡಿಸುವ ಸಾಧ್ಯತೆಗಳ ಬಗ್ಗೆ ?
ಬದುಕಿನ ಕೆಲವೇ ಬೀಜ ಮಂತ್ರಗಳನ್ನು ನಿತ್ಯ ನಿರಂತರ ಪಠಣ ಮಾಡಲು ವಿದ್ಯಾರ್ಥಿಗಳಿಗೆ ಪಾಠಮಾಡಬೇಕು ಮತ್ತು ಅವರು ಕೂಡ ಪಾಲಿಸಬೇಕು. ಸ್ವಾರ್ಥ ಮತ್ತು ದರೋಡೆ ಬದುಕು ಬದಲು ಸೇವಾ ಮನೋಭಾವನೆ, ತಾನು ಮಾಡಿದ ಯಾ ಆದ ತಪ್ಪುಗಳನ್ನು ಒಪ್ಪಿಕೊಂಡು ಸೂಕ್ತ ಶಿಕ್ಷೆ ಸಾಮಾಜಿಕ ರೋಗಕ್ಕೆ ಮದ್ದೆಂಬ ಅರಿವು, ಪ್ರಕೃತಿ ಜೀವರಾಶಿಗಳಿಗೆ ಮೀಸಲಾಗಿದ್ದು ಸಹಬಾಳುವೆಗೆ ಒತ್ತು, ಹಿರಿಯರ ಅನುಗ್ರ ಆಶೀರ್ವಾದದಲ್ಲಿ ದೇವರ ಅನುಗ್ರಹ ಆಶೀರ್ವಾದ ಒಳಗೊಂಡಿರುವ ಸ್ಪಷ್ಟ ಚಿತ್ರಣ ವಿದ್ಯಾರ್ಥಿಗಳಲ್ಲಿ ಬಿತ್ತಿ ಬೆಳೆಸಬೇಕು
ಪ್ರಸ್ತುತ ವ್ಯವಸ್ಥೆ ಎತ್ತ ಸಾಗುತಿದೆ?
ಸೂಟ್ ಬೂಟು ಸಂಸ್ಕೃತಿ , ಸ್ಟಾರ್ ಹೋಟೆಲ್ ವ್ಯವಸ್ಥೆ ಇರುವ ಶಾಲಾಕಾಲೇಜುಗಳು, ಜೀತ ಪದ್ದತಿಯಂತೆ ಮಕ್ಕಳಿಗೆ ಸೇವೆ ಮಾಡುವ ಪೋಷಕರು – ಇತ್ಯಾದಿಗಳ ಸಂಪೂರ್ಣ ಪ್ರಯೋಜನ ಪಡೆದು ಹೊರಬರುವ ವಿದ್ಯಾವಂತರು – ಅಣ್ಣ ಆಹಾರ ಹಾಲು ತರಕಾರಿ ಹಣ್ಣುಹಂಪಲು ಬೆಳೆಸುವ ರೈತರಾಗಿ ದುಡಿಯಲು ಸಾಧ್ಯವೇ – ವಿದ್ಯಾವಂತರನ್ನೆಲ್ಲ ವೈದ್ಯರು ಗುರುಗಳು ನ್ಯಾಯವಾದಿಗಳು …………… ತಯಾರು ಮಾಡುಲು ಹೋರಾಟ ನಾವು ಪ್ರಸ್ತುತ ಆಹಾರ ನೀರು ಗಾಳಿಯಿಂದ ಸಾಗುವ ಬದುಕು ಮುಂದಕ್ಕೆ ಬರೆ ನೀರು ಗಾಳಿಯಿಂದ ಮಾತ್ರ, ಕೊನೆಗೆ ಗಾಳಿಯಿಂದ ಮಾತ್ರ ಬದುಕಿಗೆ ಸಕಲ ವ್ಯವಸ್ಥೆಯೊಂದಿಗೆ ಮುಂದೆ ಸಾಗುತಿದ್ದೇವೆ.
ಪ್ರಸ್ತುತ ವ್ಯವಸ್ಥೆಗೆ ಅಂಕಿತ ನೆಮ್ಮದಿ ಬದುಕಿಗೆ ನಾಂದಿ……?
ವಿದ್ಯಾವಂತರಾಗಿ ಜಾಬ್ ಎಂಬ ವಿಷ ವರ್ತುಲದಲ್ಲಿ ಬಿದ್ದು ನರಕ ಜೀವನ ನಡೆಸುತಿರುವ ನಮ್ಮವರ ಬದುಕಿನ ಚಿತ್ರಣ – ದಿನಕ್ಕೆ ಹನ್ನೆರಡು ಗಂಟೆ ದುಡಿಮೆ – ಮನೆ ಬಾಡಿಗೆ – ಕರೆಂಟು ಬಿಲ್ಲು – ವಾಹನಕ್ಕೆ ವೆಚ್ಚ ಎಲ್ಲ ಸೇರಿ ಬರುವ ಸಂಬಳದಲ್ಲಿ ೭೦ ಪಾಲು ಖರ್ಚು ಉಳಿದುದರಲ್ಲಿ ಬದುಕು – ಸ್ವಂತ ಮನೆ ಕನಸಿನ ಮಾತು
ಆದರೆ ಹಳ್ಳಿಯ ಒಬ್ಬ ಕೂಲಿಕಾರ್ಮಿಕನ ಬದುಕು ದಿನಕ್ಕೆ ಗರಿಷ್ಠ ಆರು ಗಂಟೆ ದುಡಿಮೆ ೬೦೦ ಸಂಬಳ – ದಿನದ ಎರಡು ಆಹಾರ ಪುಕ್ಕಟೆ – ಸ್ವಂತ ಮನೆ -ಶುದ್ಧ ಆಹಾರ ನೀರು – ಯಾವುದೇ ಸಭೆ ಸಮಾರಂಭಗಳಿಗೆ ನಿರಂತರ ಹಾಜರು – ಊರಿನವರ ಸಂಬಂಧಿಗಳ ನಿರಂತರ ಒಡನಾಟ – ಒಳ್ಳೆಯ ದೇಹದ ಅರೋಗ್ಯ …………ಇತ್ಯಾದಿಗಳ ಚಿಂತನ ಮಂಥನ ನಡೆಸಿ – ಸೇವಾ ಒಕ್ಕೂಟ ಮೂಲಕದೊಂದಿಗೆ ಆನ್ಲೈನ್ ಶಿಕ್ಷಣವನ್ನು ಕೊಡುವ ವ್ಯವಸ್ಥೆಗ್ಗೆ ಹೋದರೆ ಮುಂದಿನ ನೆಮ್ಮದಿ ಬಾಳು ನಮ್ಮದಾಗಬಹುದು
ಮುಂದುವರಿಯುವುದು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?