ಬದುಕಿನ ಜೀರ್ಣೋದ್ಧಾರಕ ಗುರುಗಳ ಉಚಿತ ಭಾವಚಿತ್ರ ಪ್ರಕಟಣೆ
ಗುರುಗಳಿಂದಲೇ ಜಗತ್ತು – ಯಾರೇ ಆಗಲಿ ಯಾವುದೇ ಹುದ್ದೆಯಲ್ಲಿರಲಿ ಎಂಥಹ ದೊಡ್ಡ ವ್ಯಕ್ತಿಯಾಗಿರಲಿ – ಅವರು – ಪ್ರಧಾನಿಯಾಗಲಿ , ದೇಶದ ಅಧ್ಯಕ್ಸಣಾಗಲಿ ಉದ್ಯಮಿಯಾಗಲಿ ದರ್ಮದರ್ಶಿಯಾಗಲಿ ಋಷಿ ಮುನಿಗಳಾಗಲಿ ಜೋತಿಷ್ಯರಾಗಲಿ ತಂತ್ರಿಗಳಾಗಲಿ – ಇತ್ಯಾದಿ ಮಾನವಕುಲಕೋಟಿ ಗುರುಗಳ ಶಿಷ್ಯರಾಗಿರುವುದು ವಾಸ್ತವ – ಪ್ರತಿ ಮಾನವರು ತಿಳಿದಿರುವ ನಗ್ನ ಸತ್ಯ. ಈ ಗುರುಗಳಿಂದ ಪಾಠ ಕಲಿತ ಪ್ರತಿಯೊಬ್ಬರೂ ಕೂಡ ಒಳ್ಳೆಯ ಪ್ರಜೆಗಳಾಗಿ ಸನ್ಮಾರ್ಗದಲ್ಲಿ ಮಾತ್ರ ನಡೆಯ ಆದರ್ಶ ಮಾನವರಾಗಿ ಬಾಳುವ ಕಾಲ ಒಂದಿತ್ತು. ಆದರೆ ಇಂದು ಕಾಲ ಬದಲಾಗಿದೆ. ಗುರುಗಳ ಶಿಷ್ಯರಾದ ನಾವು ದುಷ್ಟರ ಮತ್ತು ಶಿಷ್ಟರ ಕೂಟದಲ್ಲಿ ಒಂದಾಗಿ ಮಾನವ ಬದುಕು ದುಃಖದ ಕಡಲಲ್ಲಿ ಮುಳುಗುವ ಸ್ಥಿತಿಯಲ್ಲಿದೆ . ಇದಕ್ಕೆ ನಾವೆಲ್ಲರೂ ನಮ್ಮ ನಮ್ಮ ಜವಾಬ್ದಾರಿ ಅರಿತು ಕಾರ್ಯಪ್ರವೃತರಾಗುವ ಕಾಲ ಸನ್ನಿಹಿತವಾಗಿದೆ .
ಜೀರ್ಣೋದ್ದಾರೆಂಬುದು ಜೀರ್ಣವತೆಯಲ್ಲಿರುವ ವಸ್ತುಗಳನ್ನು ಕಿತ್ತು ಹಾಕಿ ಸುಭದ್ರವಾದ ಗಟ್ಟಿಮುಟ್ಟಾದ ಸುದೀರ್ಘ ಬಾಳಿಕೆಗೆ ಪೂರಕವಾದ ವಸ್ತು ಸಾಮಗ್ರಿಗಳಿಂದ ಭದ್ರವಾಗಿ ಕಟ್ಟುವ ಕಟ್ಟಡ – ಅದು ಬಹುಪಾಲು ದೈವ ದೇವಸ್ಥಾಗಳಿಗೆ ಸಂಬಂದಿಸಿದ್ದು ಆಗಿರುತದೆ. ಈ ತೆರನಾಗಿ ಗುರುಗಳು ಮುಂದಿನ ಸಮಾಜಕ್ಕೆ ಪೂರಕವಾದ ವ್ಯಕ್ತಿಗಳನ್ನು ಮಾತ್ರ ಸಮಾಜಕ್ಕೆ ಬಿಟ್ಟಿಕೊಟ್ಟು ಅಯೋಗ್ಯರನ್ನು ತಮ್ಮಲ್ಲಿಯೇ ಇರಿಸಿ ಅವರು ಯೋಗ್ಯರಾದಾಗ ಮಾತ್ರ ಗುರುಕುಲ ಶಿಕ್ಸಣ ಪದ್ದತಿಯಿಂದ ಹೊರ ಬರುತಿದ್ದರು. ಇದು ಇಂದಿನ ಕಾಲಘಟ್ಟದಲ್ಲಿ ಅಸಾಧ್ಯವೆಂದು ಕಂಡುಬಂದರೂ ಕನಿಷ್ಠ ತಮ್ಮ ಸುತ್ತ ಬೇಲಿಯನ್ನು ಹಾಕಿಕೊಂಡು ದಾನವರಾಗುವ ಬದಲು ಮಾನವರಾಗಿ ಬದುಕಲು ಕೆಲವೊಂದು ಸೂತ್ರಗಳನ್ನು ಬೋಧಿಸಿ ಮನದಟ್ಟು ಮಾಡಿ ಬಿಡುವ ಅವಕಾಶ ವಿಪುಲವಾಗಿದೆ. ಅವುಗಳೆಂದರೆ
ನಾನು ಅನ್ಯರ ಬೆನ್ನು ನೋಡುವುದಿಲ್ಲ – ಮುಖ ಮಾತ್ರ ನೋಡಿ ಬದುಕುತ್ತೆನೆ ಇದರ ಮರ್ಮ – ಅನ್ಯರ ಒಳ್ಳೆಯ ಗುಣ ಲಕ್ಸಣ ಮಾತ್ರ ನೋಡುವುದು
ನನ್ನಿಂದ ಎಲ್ಲಿಯಾದರೂ ಹೇಗಾದರೂ ತಪ್ಪಾದರೆ ಕಾನೂನಿನ ಶಿಕ್ಷೆಗೆ ಸ್ವಯಂ ಪ್ರೇರಿತವಾಗಿ ಶರಣಾಗುವುದು.
ಅನ್ಯರಲ್ಲಿ ದೇವರನ್ನು ಕಾಣುವ ಪ್ರವತ್ತಿ ಬೆಳೆಸಿಕೊಂಡಾಗ ನಾವು ನಮಗೆ ಅರಿವಿಲ್ಲದೆ ಸನ್ಮಾರ್ಗಿಗಳಾಗುತ್ತೆವೆ.
ನಾವು ಅಂದು ಕಂಡ ಗುರುಗಳ ಪಾವಿತ್ಯತೆ – ಗುರುಗಳನ್ನು ಮೇಲ್ಪಂತಿಯಲ್ಲಿ ಕುಳ್ಳಿರಿಸಿ – ಉನ್ನತ ಸ್ಥಾನ ಕೊಡುವ ಏಕಮಾತ್ರ ಉದ್ದೇಶದಿಂದ ನಿಮ್ಮ ಭಾವಚಿತ್ರ ಸಂಸಾರದ ಜೊತೆಯಾಗಿ ಟೀಚರ್ಸ್ ಬುಲ್ಲೆಟಿನಿನಲ್ಲಿ ಪ್ರಕಟಿಸಲು ಉದ್ದೇಶಿಸಿದ್ದೇವೆ,. ನಿಮ್ಮ ಹೆಸರು , ಭಾವಚಿತ್ರ , ಭಾವಚಿತ್ರದಲ್ಲಿರುವವರ ಗುರುತಿಸುವ ರೀತಿಯಲ್ಲಿ ಹೆಸರು ಬರೆದು, ಊರಿನ ಹೆಸರು (ಶಾಲೆಯ ಹೆಸರು ಸೂಕ್ತವಲ್ಲ ) ಬರೆದು ನಮಗೆ ಕಳುಹಿಸಿದರೆ ಉಚಿತವಾಗಿ ನಾವು ಪ್ರಕಟಿಸುತ್ತೆವೆ. ನಮಗೆ ನಿಮ್ಮ ಮೊಬೈಲ್ ನಂಬರು ಬೇಕಾಗಿಲ್ಲ. ಬೇಕಾದಲ್ಲಿ ಪ್ರಕಟಣೆಗೆ ಅವಕಾಶವಿದೆ. ಒಂದು ಭಾವಚಿತ್ರದೊಂದಿಗೆ ಹತ್ತು ಪದಗಳಿಗೆ ಮಾತ್ರ ಅವಕಾಶವಿದೆ. ಇದು ಸಂಪೂರ್ಣ ಉಚಿತ್ಹ್ವಗಿದೆ – ಸಮಾಜಕ್ಕೆ ಪುಟ್ಟ ಸೇವೆ – ದಯಮಾಡಿ ಸದುಪಯೋಗ ಮಾಡೋಣ . ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.