ಅರ್ಚಕರ ಬದುಕು ಇಂದು ಯಾವ ಸ್ಥಿತಿಯಲ್ಲಿದೆ – ಅವರು ಸ್ವಾವಲಂಬಿ ಜೀವನ ಸಾಗಿಸುತಿದ್ದಾರೆಯೇ – ಅವರಿಗೆ ಸಿಗಬೇಕಾದ ಸ್ಥಾನ ಮಾನ ಗೌರವ ಸಿಗುತಿದೆಯೇ – ಬರುವ ಭಕುತರಿಗೆ ಒಳಿತು ಮಾಡಿ ಸದಾ ನಿನ್ನ ಅನುಗ್ರಹ ಆಶೀರ್ವಾದ ನೀನು ದಯಪಾಲಿಸು ಎಂದು ದೇವರಲ್ಲಿ ಬೇಡಿಕೊಳ್ಳುವ ಮಾನಸಿಕ ಆರ್ಥಿಕ ಮತ್ತು ದೈಹಿಕ ಸಾಮರ್ಥ್ಯ ಅವರಲ್ಲಿ ಕಾಣಬರುವುದು ವಾಸ್ತವಿಕ ವಿಷಯಗಳನ್ನು ಗಮನಿಸಿದಾಗ ಕಷ್ಟ ಸಾಧ್ಯ. ಈ ಕುರಿತು ನಾವು ಪ್ರತಿ ಭಕುತ ಸಮಾಜ ಚಿಂತನ ಮಂಥನ ಅನುಷ್ಠಾನದತ್ತ ಗಮನ ಹರಿಸಬೇಕೇ ? ಮುಂತಾದ ನೂರಾರು ಪ್ರಶ್ನೆಗಳು ಅರ್ಚಕರ ಸಹಚಿಂತಕರಾಗಿ ಯೋಚಿಸಿದಾಗ – ಉನ್ನತ ಕೆಲಸ ಮಾಡುವ ನಮ್ಮ ಆತ್ಮೀಯ ವ್ಯಕ್ತಿಯ ಮನದಾಳ ಅರಿವಿಗೆ ಬರುತದೆ- ಸ್ಪಂದಿಸೋಣ.
ಒಬ್ಬ ಕೂಲಿ ಕೆಲಸ ಮಾಡುವ ವ್ಯಕ್ತಿಯ ಸಂಭಾವನೆ, ಅಡುಗೆ ಮಾಡುವವನಿಗೆ ಸಿಗುವ ಸಂಭಾವನೆ, ದೇಹ ವಸ್ತ್ರ ಮನಸ್ಸು ಸ್ವಚ್ಛ ಮಾಡಿಕೊಂಡು ದೇವರ ಅತಿ ಹತ್ತಿರ ನಿಂತು ಕೆಲಸ ಮಾಡುವ ವ್ಯಕ್ತಿಗೆ ದುಡಿಮೆಯನ್ನು ಗಂಟೆ ಲೆಕ್ಕದಲ್ಲಿ ತೂಗಿ ಅಳೆದು ನೋಡಿದಾಗ – ಸಿಗುವುದಿಲ್ಲ ಎಂದಾದರೆ – ಕೆಲವೇ ಸಮಯದಲ್ಲಿ ಅರ್ಚಕ ಪರಂಪರೆ ಇತಿಶ್ರೀ ಆಗುವುದರಲ್ಲಿ ಎರಡು ಮಾತಿಲ್ಲ.
ಅರ್ಚಕರ ಬುಲೆಟಿನ್ ಎಂಬ ಹೆಸರಿನೊಂದಿಗೆ ಅರ್ಚಕರಾದ ನಿಮ್ಮ ಮನೆ ಬಾಗಿಲಿಗೆ ಮನದ ಬಾಗಿಲಿಗೆ ಬರುತಿದ್ದೇವೆ.ನೀವು ನಿಮ್ಮ ಮನೆಯವರ ಜೊತೆಗೆ ಭಾವಚಿತ್ರ ಪ್ರಕಟಿಸಲು ನಮಗೆ ಅವಕಾಶ ಮಾಡಿ ಕೊಡಿ. ನೀವು ಕಳುಹಿಸಿ ಕೊಡುವ ಭಾವಚಿತ್ರದಲ್ಲಿ ಎಲ್ಲರನ್ನು ಗುರುತಿಸುವ ರೀತಿಯಲ್ಲಿ ಹೆಸರನ್ನು ಬರೆದು ಕಳುಹಿಸಿ. ಇದಕ್ಕೆ ಯಾವುದೇ ಶುಲ್ಕವಿಲ್ಲ. ಇದು ನಿಮ್ಮ ಸಂಪಾದನೆಯನ್ನು ಬೇರೆ ಮೂಲಗಳಿಂದ ವೃದ್ಧಿಸುವ ವೇದಿಕೆ ಮಾತ್ರ. ಹಂತ ಹಂತವಾಗಿ ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ತಿಳಿಸಲಾಗುವುದು. ಈ ನಮ್ಮ ಸೂತ್ರ ಯಾ ವ್ಯವಸ್ಥೆ ಮೇಲೆ ನಂಬಿಕೆ ಬಾರದಿದ್ದರೆ ನೀವು ಪೂಜೆ ಮಾಡುವ ದೇವರು ಅಭಯ ಕೊಟ್ಟರೆ ಮಾತ್ರ ನಮ್ಮೊಂದಿಗೆ ಕೈಜೋಡಿಸಿ. ನಿಮ್ಮ ಭಾವಚಿತ್ರ ಪ್ರಕಟಣೆಯಿಂದ ಯಾವುದೇ ರೀತಿಯ ತೊಂದರೆ ಇಲ್ಲದಿರುವುದರಿಂದ ನಮ್ಮ ಜೊತೆ ಸಹಕರಿಸಿ. ಕೆಲವೊಂದು ಆನ್ಲೈನ್ ಆವಿಸ್ಕಾರಗಳು ಅಮೇರಿಕಾ ಇಂಗ್ಲೆಂಡ್ ಜನರಿಗೆ ಕೂಡಲೇ ಅರಿವು ಮೂಡಿ ತೊಡಗಿಸಿಕೊಂಡು ಬದುಕನ್ನು ಉನ್ನತ ಪದವಿಗೆ ಏರಿಸಿಕೊಂಡು ಸುಖ ಜೀವನ ನಡೆಸುತಾರೆ. ನಾವು ಅನ್ಯರ ತಪ್ಪುಗಳನ್ನು ನೋಡುತ್ತಾ , ಮಾಧ್ಯಮಗಳಲ್ಲಿ ಬಿತ್ತರಿಸ್ತಾ, ನಮ್ಮ ಬದುಕನ್ನು ಸರ್ವನಾಶ ಮಾಡುವ ವಿಕೃತ ಭಾವನೆಯಿಂದ ಹೊರಬಂದು ದೇವಮಾನವ ಬದುಕಿನತ್ತ ಪಯಣ ಬೆಳೆಸೋಣ