ಭಾಸ್ಕರ.ಎಸ್.ಗೌಡ ಒಡ್ಯತ್ತಡ್ಕ,ಅಧ್ಯಕ್ಷರು ,ಭೂ ಅಭಿವೃದ್ಧಿ ಬ್ಯಾಂಕ್ ಪುತ್ತೂರು , 1974ರಲ್ಲಿ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ಜನಿಸಿದವರು. ಇವರ ತಂದೆ ತ್ಯಾಂಪಣ್ಣ ಮತ್ತು ತಾಯಿ ಚಿನ್ನಮ್ಮ. ಇವರು ಓರ್ವ ದಯಾಳು ವ್ಯಕ್ತಿಯಾಗಿ ತಮ್ಮ ಕುಟುಂಬ ಹಾಗೂ ಗ್ರಾಮದಲ್ಲಿ ಪರಿಚಿತರಾಗಿದ್ದಾರೆ. ಭಾಸ್ಕರ್ ಅವರ ಒಡಹುಟ್ಟಿದವರು – ಗಿರಿಜಾ , ದೇರಣ್ಣ , ಬಾಲಕೃಷ್ಣ ,ನೀಲಮ್ಮ , ಕುಸುಮ , ಡೀಕಯ್ಯ , ಸುಶೀಲ , ಯಶೋಧ, ಜಗನ್ನಾಥ .ಅವರು ತಮ್ಮ ವಿದ್ಯಾಭ್ಯಾಸವನ್ನು ಎಸ್.ಎಸ್.ಎಲ್.ಸಿ ವರೆಗೆ ಮುಗಿಸಿದ ಬಳಿಕ ಕೃಷಿಯಲ್ಲಿ ತೊಡಗಿಸಿಕೊಂಡರು. ಕೃಷಿಕರಾಗಿರುವ ಇವರು, ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದಾರೆ.
ತಮ್ಮ ಪತ್ನಿ ರೇಖಾ ಬಿ ಅವರೊಂದಿಗೆ ಸಂತೋಷಕರ ದಾಂಪತ್ಯ ಜೀವನ ನಡೆಸುತ್ತಿದ್ದು, ಇವರಿಗೆ ಇಬ್ಬರು ಪುತ್ರರು – ಬಿ. ವಂದನ್ ಗೌಡ ಮತ್ತು ಬಿ. ನಂದನ್ ಗೌಡ. ತಮ್ಮ ಕಾರ್ಯಚಟುವಟಿಕೆಗಳಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಭಾಸ್ಕರ್ ಅವರು, ತಮ್ಮ ಗ್ರಾಮ ಮತ್ತು ಸಮುದಾಯಕ್ಕೆ ಬದ್ದರಾಗಿದ್ದಾರೆ.
Related Photos