ದೈವಕ್ಕೆ – ತಂಬಿಲ ಮಾತ್ರ ಸಾಕೆ ? ನರ್ತನ ಸೇವೆ ಬೇಕೇ ?

ಶೇರ್ ಮಾಡಿ

ಇದು ಒಂದು ಜಟಿಲವಾದ ಪ್ರಶ್ನೆ. ಬಹುಪಾಲು ದೈವ ಆರಾಧಕರು ಗೊದಲದಲ್ಲಿ ಸಿಲುಕಿ – ಜೋತಿಷ್ಯರನ್ನು ಭೇಟಿಯಾಗಿ ಅವರ ಮಾರ್ಗದರ್ಶನದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ. ದೈವಕ್ಕೆ ತಂಬಿಲ ಸೇವೆ ಮಾತ್ರ ಸಾಕು. ಯಾವುದೇ ಕಾರಣಕ್ಕೂ ನರ್ತನ ಸೇವೆಯ ಅವಶ್ಯಕತೆ ಇರುವುದಿಲ್ಲ ಎಂಬುದು ತಜ್ಞರ ಅಭಿಮತ. ಆದರೆ ನರ್ತನ ಸೇವೆಯನ್ನು ವರುಷಕ್ಕೊಮ್ಮೆ , ಎರಡು ವರುಷಕ್ಕೊಮ್ಮೆ , ೩ ,೫, ಈ ರೀತಿ ಅವಧಿ ಮಾಡಿಕೊಂಡು ನಡೆಸುತ್ತಾ ಬರುತಿರುವವರು ಪ್ರಗತಿ ಹೊಂದುವುದು ವಾಸ್ತವ. ಇದಕ್ಕೆ ಆ ವ್ಯಕ್ತಿಗಳಲ್ಲಿ ಉದ್ದೀಪನಗೊಳ್ಳುವ ಧನಾತ್ಮಕ ಶಕ್ತಿಯೇ ಮೂಲ ಕಾರಣ, ಇನ್ನೊಂದು ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನವರಿಗಾಗುವ ಪ್ರಯೋಜನವೆಂದು ಸಮಜಾಯಿಸಿ ನೀಡುವವರು ಇದ್ದಾರೆ. ಬೇರೆ ಬೇರೆ ಮೂಲಗಳಿಂದ ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ತನ್ನಲ್ಲಿರುವ ಆರ್ಥಿಕ ಬಲವನ್ನು ಗಣನೆಗೆ ತೆಗುದುಕೊಂಡು ಅಂತಿಮ ತೀರ್ಮಾನ ವ್ಯಕ್ತಿಗಳಿಗೆ ಬಿಟ್ಟದ್ದು
ನರ್ತನ ಸೇವೆಯ ಅಂದಿನ ಉದ್ದೇಶವೇ ಇಂದಿಗಿಂತ ಭಿನ್ನ. ಇಂದು ತನ್ನ ಆರ್ಥಿಕ ಬಲದ ಪ್ರದರ್ಶನಕ್ಕೆ ಅದು ಒಂದು ವೇದಿಕೆಯಾಗಿದೆ. ನರ್ತನವೆಂಬ ನಾಟಕ ಸೇವೆ ಪಾತ್ರದಾರಿಗಳಿಂದ ಆಗುತದೆ . ಇದು ದೈವಾರಾಧನೆಗೆ ತಟ್ಟಿದ ಬಹು ದೊಡ್ಡ ಶಾಪ . ಅದು ನಮ್ಮಿಂದಲೇ ನಾವೇ ಮಾಡುತಿರುವ ಕೆಟ್ಟ ಕೆಲಸ.ನಿರ್ದಿಷ್ಟವಾದ ಒಂದು ಕೆಲಸ ಅಥವಾ ಒಂದು ಸಮಸ್ಯೆ ಯಾವುದೇ ಪ್ರಯತ್ನದಿಂದ ಕಾರ್ಯಗತಗೊಳ್ಳದಿದ್ದಲ್ಲಿ – ದೈವದಲ್ಲಿ ನರ್ತನ ಸೇವೆಯಲ್ಲಿ ಆ ಸಂಕಷ್ಟಕ್ಕೆ ಪರಿಹಾರ ಗಿಟ್ಟಿಸಿಕೊಳ್ಳುವುದೇ ಅಂದಿನ ಉದ್ದೇಶ ಆಗಿತ್ತು. ಆದರೆ ಇಂದು ಆ ಉದ್ದೇಶ ನೆರವೇರುತಿಲ್ಲ . ಇದಕ್ಕೆ ಸಂಘಟಿತ ಪ್ರಯತ್ನ ದೈವಾರಾಧಕರು ಮಾಡಲೇಬೇಕಾಗಿದೆ.
ನರ್ತನ ಸೇವೆ ಸಂಮೋಹನ ವಿದ್ಯೆ. ದೈವದ ಹುಟ್ಟನ್ನು ಪಾರ್ದನ ಮೂಲಕ ಹೇಳುತಿದ್ದಂತೆ ಆ ದೈವ ಪಾತ್ರದಾರಿಯಲ್ಲಿ ಪ್ರವೇಶವಾಗಿ – ಮಾಯದೃಷ್ಟಿಯ ಮೂಲಕ – ಅಷ್ಟಮಂಗಲದ ರೀತಿಯಲ್ಲಿ – ಸಕಲವನ್ನೂ ತಿಳಿಸುವುದೇ ಅರ್ಥಪೂರ್ಣ ನರ್ತನ ಸೇವೆ .
ನಿರಂತರ ವರುಷಕೊಮ್ಮೆ ಅಥವಾ ಅವಧಿ ನಿಗದಿ ಪಡಿಸಿ ನರ್ತನ ಸೇವೆ ಮಾಡುತ್ತಾ ಬರುವವರು ಈ ಸೇವೆಯ ಮೂಲ ಉದ್ದೇಶ ನೆರವೇರುವುದಿಲ್ಲ ಎಂದು ಅರಿತಾಗ ಉತ್ಸಹ ಕಳೆದುಕೊಂಡು ನರ್ತನ ಸೇವೆ ಮಾಡಿಸುವುದನ್ನು ಮುಂದೂಡುತಿದ್ದಾರೆ.
ಇಂದು ಮಾಯದೃಷ್ಟಿ ದೈವ ಪಾತ್ರಿಗೆ ಗೋಚರಿಸದಿರುವುದಕ್ಕೆ – ದೈವಾರಾಧನೆಯಲ್ಲಿ ತೊಡಗಿಸಿಕೊಂಡವರೆಲ್ಲರ ಪಾಲು ಇದೆ ಎಂಬುದನ್ನು ಅರಿಯೋಣ. ಪ್ರತಿಯೊಬ್ಬರೂ ಅವರವರ ತಪ್ಪುಗಳನ್ನು ಹಂತ ಹಂತವಾಗಿ ತಿದ್ದಿ ಮುನ್ನಡೆದು ಮೂಲ ದೈವಾರಾಧನೆ ನಮ್ಮ ಪಾಲಿಗೆ ದೈವ ದೇವರು ಕರುಣಿಸಲಿ – ಇದು ದೈವಾರಾಧಕರ ಬಿನ್ನಹ.

See also  Avyaktha vachanagalu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?