ಅಂದಿನ ಅರಸರು ತಮ್ಮ ವ್ಯಾಪ್ತಿಯ ಜನರಿಂದ ಕಪ್ಪಕಾಣಿಕೆ ಪಡೆದು ತಮ್ಮ ಖಜಾನೆಯನ್ನು ತುಂಬಿಸಿಕೊಂಡು – ಅದರ ಬಳಕೆಯಿಂದ ಅವರ ಆಡಳಿತ ಸುಗಮವಾಗಿ ಸಾಗುತಿತ್ತು. ಇಂದು ಬಹುತೇಕ ದೇಶಗಳು ಜನರಿಂದ ಕಪ್ಪಕಾಣಿಕೆಯನ್ನು ರೂಪಾಂತರಗೊಳಿಸಿ ಹಣದ ರೂಪದಲ್ಲಿ ಕಪ್ಪಕಾಣಿಕೆಗೆ ತೆರಿಗೆ ನಾಮಕರಣದೊಂದಿಗೆ ದೇಶದ ಆಡಳಿತ ಕೆಲವು ದೇಶಗಳಲ್ಲಿ ಸುಗಮವಾಗಿ ನಡೆಯುತಿದ್ದು – ಇನ್ನು ಕೆಲವು ದೇಶಗಳಲ್ಲಿ ಸಾವು ಬದುಕಿನ ದೊಂಬರಾಟ ನಡೆಯುತಿರುತದೆ.
ಇದಕ್ಕೆ ಮೊದಲ ಕಾರಣ ಆ ದೇಶ ಅಭಿವೃದ್ಧಿ ಕಾಣದಿರುವುದು -ಸ್ವಾಭಾವಿಕವಾಗಿ ಯಾವ ದೇಶ ಅಭಿವೃದ್ಧಿ ಹೊಂದಿಲ್ಲವೋ , ಅಲ್ಲಿ ತೆರಿಗೆ ಪಾಲು ಕೂಡ ಕೊರತೆಯಿಂದಾಗಿ ಸಂಕಷ್ಟದಲ್ಲಿ ದೇಶ ಸಾಗುತಿರವುದು ಜನ ಸಾಮಾನ್ಯರಿಗೆ ತಿಳಿದ ವಿಷಯ .
ಎರಡನೆಯದಾಗಿ ದೇಶವನ್ನೇ ನುಂಗುವ ಸಂಪನ್ಮೂಲ ಸಂಗ್ರಹದಲ್ಲಾಗುವ ಸೋರಿಕೆ : ಬ್ರಷ್ಟಾಚಾರವೆಂಬುದು ಪ್ರಪಂಚವನ್ನೇ ಬಲಿತೆಗುದುಕೊಳ್ಳುತಿರುವ ಶಾಶ್ವತ ಕೋರೋಣ. ಇದು ಎಲ್ಲಿ ಇದೆ ಎಲ್ಲಿ ಇಲ್ಲ ಎನ್ನುವುದಕ್ಕಿಂತ ಎಷ್ಟು ಶೇಕಡಾ ಹತೋಟಿಯಲ್ಲಿಡಲು ಸಮರ್ಥರಾಗಿದ್ದೇವೆ ಎನ್ನುವುದೆ ಯಕ್ಷ ಪ್ರಶ್ನೆ. ಪ್ರಜಾಪ್ರಭುತ್ವದ ಮೂರೂ ಅದಾರ ಸ್ಥಂಬಗಳಾದ -ಶಾಸಕಾಂಗ ಕಾರ್ಯಂಗ ನ್ಯಾಯಾಂಗಕ್ಕೆ ವ್ಯಾಪಿಸಿ – ನಾಲ್ಕನೇ ಅದಾರ ಸ್ತಂಭ ಎಂದು ಕರೆಸಿಕೊಳ್ಳುವ ಮಾಧ್ಯಮಕ್ಕೂ ವಿಸ್ತರಿಸಿ – ಒಂದು ರೂಪಾಯಿ ಆದಾಯಕ್ಕೆ ಹತ್ತು ರೂಪಾಯಿ ವೆಚ್ಚ ಮಾಡುವ ಸ್ಥಿತಿ ದೇಶಗಳು ಹೊರಲಾಗದ ಹೊರೆಯನ್ನು ಹೊತ್ತು ಸಾಗುತಿವೆ. ದೇಶದ ಸಂಪತ್ತಿನ ಬಹುಪಾಲು ನುಂಗಿ ನೀರು ಕುಡಿಯುತಿರುವ ವಿದ್ಯಾಸಂಸ್ಥೆಗಳ ಬಹು ದೊಡ್ಡ ಲೋಪ – ದೇಶಕ್ಕಾಗಿ ತ್ಯಾಗ ಮಾಡುವ ಮಾನವರನ್ನು ತಯಾರುಮಾಡುವ ಬದಲು ಸ್ವ ಹಿತಕ್ಕಾಗಿ ದೇಶವನ್ನು ಬಲಿಯಾಗಿಸುವ ನಿಜ ರೂಪದ ರಾಕ್ಸಸರನ್ನು ತಯಾರು ಮಾಡಿ ಬಿಡುತಿರುವುದು. ಇನೊಂದು ದೇಶದ ಕಾನೂನುಗಳನ್ನೇ ಪುಸ್ತಕದ ಬದನೇಕಾಯಿ ಮಾಡಿ ಆಡಳಿತ ನಡೆಸುವ ಪರಿಪಾಠ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಪ್ರಸ್ತುತ ಈ ವ್ಯವಸ್ಥೆಯಲ್ಲಿ ಬದುಕುತಿರುವ ಪ್ರತಿ ಪ್ರಜೆಯ ಅಳಲು ಮತ್ತು ಬದುಕು ಒಂದೇ – ಎಲ್ಲರು ಎಲ್ಲರ ಕುತ್ತಿಗೆಗೆ ಹಗ್ಗ ಹಾಕಿ ಎಲ್ಲರು ಹಗ್ಗವನ್ನು ಹಿಡಿದುಕೊಂಡ ಬದುಕುವ ಸ್ಥಿತಿ ಮಾನವರ ಪಾಲಿಗೆ ಬಂದು ಒದಗಿದೆ. ಇದು ಅತಿ ಬುದ್ದಿವಂತ ಮಾನವರಾದ ನಾವು ನಮ್ಮ ಆಡಳಿತದ ಪರಿ – ದೇವರನ್ನು ಪ್ರಕೃತಿಯನ್ನು ಮರೆತು – ನಿನ್ನ ಅಗತ್ಯ ನಮಗಿಲ್ಲ ಎನ್ನುವ ಸಂದೇಶದ ರವಾನೆ – ಏನನ್ನು ಸಾಧಿಸಲಾಗದೆ ನೀನೆ ನಮಗೆ ಗತಿ ಎಂದು ಅಂಗಲಾಚುವ ಅಂತಿಮ ಕಾಲಘಟ್ಟ .
ಅರಸು ಪದ್ದತಿಯಲ್ಲಿ ಪಜೆಗಳ ಕಪ್ಪಕಾಣಿಕೆಯಿಂದ ಅರಮನೆಯ ಖಜಾನೆ ತುಂಬಿ ತುಳುಕುತಿತು – ಬೆಳ್ಳಿ ಬಂಗಾರ , ವಜ್ರ ವೈಡೂರ್ಯಗಳು ಮಾರ್ಗದ ಬದಿಯಲ್ಲಿ ತರಕಾರಿಯಂತೆ ಮಾರುತಿದ್ದರು ಎನ್ನುವ ಅಂದಿನ ಸ್ಥಿತಿ ಏರು ಪೇರಾಗಲು ಕಾರಣಕರ್ತರು ಯಾರು ? ಎಲ್ಲಿ ಯಾರು ತಪ್ಪಿದ್ದಾರೆ – ಚಿಂತನ ಮಂಥನ ಅನುಷ್ಠಾನದ ಅವಶ್ಯಕತೆ ಬೆಟ್ಟದಷ್ಟಿದೆ.
ದಾನವರ ಆಡಳಿತದಿ ಖಜಾನೆ ಖಾಲಿಯಾಗಿಹುದು ನೋಡ
ಮಾನವರ ಆಡಳಿತದಿ ಖಜಾನೆ ಸಮತೋಲನದಲ್ಲಿಹುದು ನೋಡ
ದೇವಮಾನವ ಆಡಳಿತದಿ ಖಜಾನೆ ತುಂಬಿ ತುಳುಕುತಿಹುದು ನೋಡ …………………..ಅವ್ಯಕ್ತ
ಅರಸರು ಜನರ ಮನ ಗೆದ್ದು ಒಂದು ಆದರ್ಶ ಪದ್ದತಿಯಲ್ಲಿ ತಮ್ಮ ಖಜಾನೆ ತುಂಬಿಸಿಕೊಂಡು ತಮ್ಮ ರಾಜ್ಜ ದರ್ಬಾರು ನಡೆಸಿದಂತೆ ಪ್ರಸ್ತುತ ಜನಮನ ಗೆಲ್ಲುವ ಸಮನ್ಮೂಲ ಕ್ರೂಡೀಕರಿಸುವ ವ್ಯವಸ್ಥೆಯತ್ತ ಗಮನ ಹರಿಸುವ ಅಗತ್ಯವನ್ನು ನಾವೆಲ್ಲರೂ ಮನಗಾಣಬೇಕು. ಒಂದು ರಾಷ್ಟ್ರದಲ್ಲಿ ಲೊಕ್ಡೌನ್ ಆದೇಶಿಸಿದ ಮಾರನೇ ದಿನ ಒಂದು ಹುಲ್ಲುಕಡ್ಡಿ ಕೂಡ ಆ ದೇಶದಲ್ಲಿ ಅಲ್ಲಾಡುವುದು ಟಿ ವಿ ಮೂಲಕ ನಮ್ಮನ್ನು ಜಾಗ್ರತ ಗೊಳಿಸಿದೆ.. ಅದು ಯಾಕೆ ಪ್ರಪಂಚದ ಇತರ ದೇಶಗಳಿಗೆ ಗೋಚರವಾಗುತಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತಿದೆ.
ಒಂದು ದೇವಾಲಯಗಳ ಅಭಿವೃದ್ಧಿಗೆ ಜನರ ಮನ ಗೆದ್ದು ಸಂಪನ್ಮೂಲ ಕ್ರೂಡೀಕರಿಸಿದಂತೆ ದೇಶದ ಖಜಾನೆ ತುಂಬುವ ಕೆಲಸ ಸಾಧ್ಯವಿಲ್ಲವೇ? ದೇಶದ ಖಜಾನೆ ತುಂಬುವ ನೂರಾರು ರಂಧ್ರಗಳಿರುವ ನೂರಾರು ಪಾತ್ರೆಗಳು ಬಳಕೆಗೆ ಯೋಗ್ಯವೇ ? ಸ್ವಾತಂತ್ರ್ಯ ನಂತರ ಸುಮಾರು ೧೫೦೦ ಅರಸರನ್ನ ಮನ ಒಲಿಸಿ ಕಟ್ಟಿದ ನಮ್ಮ ದೇಶ ಒಂದು ಲಕ್ಷಕ್ಕೂ ಮಿಗಿಲಾಗಿ ಪ್ರಜಾಪ್ರತಿನಿಧಿ, ರಾಜಕೀಯ ವ್ಯಕ್ತಿ …………………….ಇತ್ಯಾದಿ ನಾಮಾಂಕಿತದಿಂದ ದೇಶ ದೋಚುವ ಅನಿಷ್ಟ ಪದ್ಧತಿ ನಿಲ್ಲಿಸಲು ನಾವು ಸಮರ್ಥರಲ್ಲವೇ?
ಸೋತಿರುವ ಶಿಕ್ಸಣ ಮತ್ತು ಆಡಳಿತಕ್ಕೆ ತುರ್ತು ನಿಗಾದಲ್ಲಿಟ್ಟು ಆರೈಕೆಯ ಅವಶ್ಯಕತೆ ಮನಗಂಡು ಯುದ್ದೋಪಾದಿಯಲ್ಲಿ ಮುನ್ನಡೆದರೆ ನಮ್ಮ ಗೆಲುವು ನಿಶ್ಚಿತ – ಮುಂದೆ ಮುಂದೆ ಸಾಗೋಣ .