ಸರಿ ತಪ್ಪು ಮತ್ತು ನ್ಯಾಯ ಅನ್ಯಾಯಗಳ ಮೌಲ್ಯ ಮಾಪನ

ಶೇರ್ ಮಾಡಿ

ನಾವು ವಾಹನ ಚಲಾಯಿಸುವಾಗ ಮುಂದಿನ ದಾರಿಯನ್ನು ನೋಡಿಕೊಂಡು ಚಲಾಯಿಸುವುದು ವಾಡಿಕೆ, ಆದರೆ ಇನ್ನೊಬ್ಬ ಚಾಲಕ ವಾಹನ ನಡೆಸುವುದನ್ನೇ ನೋಡಿಕೊಂಡು ನಡೆಸಿದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ. ಇದು ವಾಹನದ ಕತೆಯಲ್ಲ ಮಾನವನ ಬದುಕಿನ ವಾಸ್ತವ ಚಿತ್ರಣ. ಎಲ್ಲ ಜಾತಿ ಮತ ಪಂಥಗಳ ದೇವರುಗಳು – ಬೋಧಿಸಿದ ಸಾರಾಂಶ – ಒಂದೇ ತಾಯಿಯ ಮಕ್ಕಳಂತೆ ಬಾಳಿ, ನಿನ್ನನ್ನು ನೀನು ನೋಡು – ಅನ್ಯರನ್ನು ನೋಡಬೇಡ – ದೇವರನ್ನು ನೋಡಿ ಹಿಂಬಾಲಿಸು – ಇದು ಮಾನವರಿಗೆ ಅಪತ್ಯ. ನಮ್ಮ ಬಾಯಿಗೆ ರುಚಿಯಾದದ್ದು – ಅನ್ಯರ ನಡೆ ನುಡಿ – ಅನ್ಯರ ಬದುಕು – ಸರಿ ತಪ್ಪುಗಳ ಮತ್ತು ನ್ಯಾಯ ಅನ್ಯಾಯಗಳ ಬಗ್ಗೆ ತಮ್ಮ ತಮ್ಮ ಮೂಗಿನ ನೇರಕ್ಕೆ ತೀರ್ಮಾನ – ಅಂತಹ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾ ಪೇಪರ್ ಮತ್ತು ಇತರ ಮಾಧ್ಯಮಗಳಿಗೆ ರವಾನೆ – ಇದು ಇಂದಿನ ಮಾನವ ಬದುಕಿನ ಉಭಯ ಕುಶಲೋಪರಿ ಎಲ್ಲರನ್ನು
ಎಲ್ಲ ವಲಯದಲ್ಲಿಯೂ ಕಾಡುತಿದೆ.
ಒಂದನೆ ತರಗತಿಯ ಮಗು , ಹತ್ತನೇ ತರಗತಿಯ ಮಗು , ಹದಿನೈದನೇ ತರಗತಿಯ ಯುವಕ – ಈ ಮೂರೂ ಜನರು ಒಂದು ವೇದಿಕೆಯಲ್ಲಿದ್ದಾಗ ಮೊದಲ ಮಗುವಿನ ತಪ್ಪು ಎರಡನೇಯವನಿಗೆ , ಎರಡನೇಯವನ ತಪ್ಪು ಮೂರನೆಯವನಿಗೆ , ಮೂರನೆಯವನ ತಪ್ಪು ಅವನಿಂದ ಹೆಚ್ಚು ಓದಿದದವರಿಗೆ ತಿಳಿಯುತದೆ. ಬದುಕಿನಲ್ಲಿ ಮಾನವರು ಪಡೆದ ಜ್ಞಾನವು ಕೂಡ ಈ ತೆರನಾಗಿದ್ದು ಸರಿ ತಪ್ಪುಗಳ ಮತ್ತು ನ್ಯಾಯ ಅನ್ಯಾಯಗಳ ವಿಮರ್ಶೆ ತೀರ್ಮಾನ ದೋಸಪೂರಿತವಾಗಿದ್ದು – ಸತ್ಯ ನ್ಯಾಯಗಳ ಸ್ಪಷ್ಟ ಅಂತಿಮ ತೀರ್ಪು ಪ್ರಜಾಪದ್ದತಿಯಲ್ಲಿ ಸರ್ವೋಚ್ಚ ನ್ಯಾಯಾಲದಿಂದ ಮತ್ತು ಅರಸು ಪದ್ದತಿಯಲ್ಲಿ ದೈವ ದೇವರಿಂದ ಯಾ ಅರಸು ಮುಖೆನ ಮಾತ್ರ ಸಾಧ್ಯ. ಇದರಿಂದಾಗಿ ಕೆಲವೊಂದು ವೇದಿಕೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಭಿನ್ನಾಭಿಪ್ರಾಯಕ್ಕೆ ಕಾರಣ – ಏಕಾಭಿಪ್ರಾಯಕ್ಕೆ ಬರಲು ಸಮಾನ ಚಿಂತನ ಮಂಥನದ ಅವ್ಯಶ್ಯಕತೆ ಇದೆ.
ನಮ್ಮಿಂದ ತಪ್ಪು ಮತ್ತು ಅನ್ಯಾಯಗಳು – ಅಂತ್ಯದತ್ತ ದಾಪುಗಾಲಿಗೆ – ಕೆಲವು ಸೂತ್ರಗಳು – ಜೋಳಿಗೆಯಲ್ಲಿ ಸೇರಿಕೊಂಡದ್ದು
ನಮ್ಮ ವೈರಿ ನಮ್ಮ ಒಳಗಿದ್ದಾನೆ
ಕೋಪದ ಕೈಗೆ ಆಯುಧ ಕೊಡಬೇಡಿ
ಜನಸಮೂಹದ ನಿರ್ಧಾರಕ್ಕೆ ಯೋಚಿಸಿ ಬದ್ಧತೆ ತೋರಿಸಿ
ತಪ್ಪು ಯಾ ಅನ್ಯಾಯ ಮಾಡಿದ ಆರೋಪಿತನ ಸ್ಥಾನದಲ್ಲಿ ಒಮ್ಮೆ ನಿಂತು ಯೋಚಿಸಿ
ನಿಮ್ಮ ಅನಿಸಿಕೆ ವ್ಯಕ್ತ ಪಡಿಸಲು ಮಾತ್ರ ನಿಮಗೆ ಅದಿಕಾರವಿರುವುದನ್ನೂ ಮನದಟ್ಟುಮಾಡಿಕೊಳ್ಳಿ
ಮಾನವರಲ್ಲಿ , ಜೀವರಾಶಿಗಳಲ್ಲಿ ದೇವರನ್ನು ಕಾಣುವಾತ ನಡೆದಾಡುವ ದೇವಾಲಯದಲ್ಲಿರುವುದು ಗಮನದಲ್ಲಿರಲಿ
ನಾನು ಒಳ್ಳೆಯವನಾಗಿರುವುದೇ ನನ್ನ ಬದುಕಾಗಲೀ
ದೇವಾಲಯಗಳು ಸಂಸ್ಕಾರವಂತರನ್ನಾಗಿಸುವ ಶಿಕ್ಷಣಾಲಯ – ಅರಿಯೋಣ
ತನ್ನ್ನ ತಪ್ಪನ್ನು ಒಪ್ಪಿಕೊಂಡು ಸೂಕ್ತ ಶಿಕ್ಷೆಯನ್ನು ಸ್ವಾಗತಿಸುವ ಮಾನವರನ್ನು ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಕೊಡಲಿ
ದಾನವ ದೃಷ್ಟಿಕೋನ ತೊಲಗಿ ಮಾನವ ದೃಷ್ಟಿ ನಮ್ಮದಾಗಿ ದೇವಮಾನವ ದೃಷ್ಟಿಯತ್ತ ನಾವು ಸಾಗೋಣ
ತಪ್ಪು ಅನ್ಯಾಯದ ವಿರುದ್ಧ ಹೊರಡುವ ಹಕ್ಕು ಮಾರಾಟವಾಗಿಲ್ಲ – ಅದು ಮಾನವಜನಾಂಗದ ಹಕ್ಕು
ಸ್ವಚ್ಛ ಕೈಗೆ ಮಾತ್ರ ಕೊಳೆ ಇರುವ ಕೈಯ ಬಗ್ಗೆ ಮಾತಾಡುವ ಹಕ್ಕು ಇರುತದೆ
ಇನ್ನೊಬ್ಬರ ಸಮಾಧಿ ಮೇಲೆ ಕಟ್ತವ ಅರಮನೆ ನಮ್ಮ ಬಯಕೆ ಆಗದಿರಲಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?