ಉದ್ಯಪ್ಪ ಅರಸರಿಂದ ನಿರ್ಮಿಸಲ್ಪಟ್ಟ ಇಚಿಲಂಪಾಡಿ ಅನಂತನಾಥ ಸ್ವಾಮಿ ಬಸದಿ – ಪ್ರಸ್ತುತ ಉದ್ಯಪ್ಪ ಅರಸರ ಮುಂದಾಳುತ್ವದಲ್ಲಿ ಜೀರ್ಣೋದ್ದಾರ
ಅಧ್ಯಕ್ಸರು – ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು , ಉಪಾದ್ಯಕ್ಶರು ಯಶೋಧರ ಶೆಟ್ಟಿ ಸಮುರ್ದ್ದಿ, ಕಾರ್ಯದರ್ಶಿ ಮಹಾವೀರ್ ಜೈನ ದೆಪ್ಪುಣಿಗುತ್ತು
ಉಪಕಾರ್ಯದರ್ಶಿ ಜಿನೇಂದ್ರ ಹೆಟೋಲ್ಗೆ ಖಜಾಂಜಿ ಅಕ್ಷಯ ಕೂರಟ
ಪ್ರಸ್ತುತ ಚಿಂತನೆ – ಶಿಲಾಮಯ ಕಟ್ಟಡ ಮಾಡು ಹೊರತುಪಡಿಸಿ. ಸುಮಾರು ಅಂದಾಜು ವೆಚ್ಚ ೬೦ ಲಕ್ಷ
ಅಧ್ಯಕ್ಸರ ಮನ ಮಿಡಿತ – ಅಧ್ಯಕ್ಷ ಪದವಿ ಕುರ್ಚಿ ಪಟ್ಟ ಅಲ್ಲ – ಸೇವಾ ಪಟ್ಟ – ಇದು ಮನದ ಮಾತು. ಜೈನ ಶ್ರಾವಕರ ಸಲಹೆ – ಜಿನದೇವರ ಆಶೀರ್ವಾದ(ಪುಷ್ಪ ತೆಗೆಯುವ ಮೂಲಕ ) – ಕಟ್ಟಾಜ್ಞೆ ಎಂದು ತಿಳಿದು ಪಾಲಿಸಲು ಬದ್ಧನಾಗಿದ್ದೇನೆ. ಜೈನರಲ್ಲಿ ಮಾನವರಲ್ಲಿ ಜೀವರಾಶಿಗಳಲ್ಲಿ – ಜೈನ ಭಾಷೆಯಲ್ಲಿ ಹೇಳುವುದಾದರೆ ಜಿನನನ್ನು – ಇತರ ಭಾಷೆಯಲ್ಲಿಯಾದರೆ ದೇವರನ್ನು ಕಾಣುವಾತ – ಕೆಟ್ಟ ಸಂಸ್ಕಾರ – ಮಿತ್ಯ ದರ್ಶನ ಜ್ಞಾನಾ ಚಾರಿತ್ರದ ವಿರುದ್ಧ ಸದಾ ಯುದ್ಧ ಮಾಡುತಾ ಗೆಲುವು ಸಾದಿಸುವಾತ – ಏಕತೆಯ ಜ್ವಲಂತ ನಿದರ್ಶನ – ಪ್ರಕೃತಿಯ ಜೊತೆ ಬಾಳುವಾತ – ಜೈನರು – ಅರಿತು ಮುನ್ನಡೆಯುವಾಗ ತಪ್ಪಾದಲ್ಲಿ ಕ್ಷಮೆಯಿರಲಿ.
ಸ್ವಾಲಂಬಿ ಮತ್ತು ಸಂತುಷ್ಟ – ಜಿನಾಲಯ ದೇವಾಲಯ ದೈವಾಲಯ ಮತ್ತು ಬದುಕು – ಎಂಬ ಮೂಲ ಮಂತ್ರವನ್ನು ಬದುಕಿನ್ನಲ್ಲಿ ಪಟಿಸುತ್ತಾ ಪಯಣ ಮುಂದೆ ಮುಂದೆ ಸಾಗುತಿದೆ. ಅದಕ್ಕೆ ಬೇಕಾದ ಪೂರಕ ವ್ಯವತೆಗಳನ್ನು ತೋಚಿದ ರೀತಿಯಲ್ಲಿ ಸಾಗುತಿದೆ.
ಜೀರ್ಣೋದ್ಧಾರವೆಂಬುದು ಅಜೀರ್ಣವಾದ ಕೆಟ್ಟ ವಸ್ತುಗಳನ್ನು ತೆಗೆದು ಬಿಸಾಕಿ ಸುಭದ್ರ ಜಿನಾಲಯ (ದೇವಾಲಯ ) ನಿರ್ಮಾಣದ ಆಂತರಿಕ ಮರ್ಮ – ನಾವು ನಮ್ಮ ಕೆಟ್ಟ ವಿಚಾರ ಚಿಂತನೆ ಮನಸ್ಸು ಇತ್ಯಾದಿ ಬೇಡವಾದ ವಸ್ತುಗಳನ್ನು ಕಿತ್ತು ಬಿಸಾಕಿ – ಬದುಕಿನ ಸುಖ ಶಾಂತಿ ನೆಮ್ಮದಿಗೆ ಪೂರಕವಾದ ವಸ್ತುಗಳ ಸುಭದ್ರ ಜೋಡಣೆಯಾಗಿದೆ.
ಸಂಪನ್ಮೂಲ ಕ್ರೂಡೀಕರಣಕ್ಕೆ, ಎಲ್ಲಾ ವಯೋಮಾನವರ ಒಗ್ಗಟ್ಟಿಗಾಗಿ ,ಎಲ್ಲಾ ವೃತಿಪರರ ಏಕತೆಗಾಗಿ , ಮನದ ಕಸದ ತೊಟ್ಟಿಯ ಸ್ವಚ್ಛತೆಗಾಗಿ, ಸ್ವಾವಲಂಬಿ ಭಾರತಕ್ಕೆ ಕಿರುಕಾಣಿಕೆಯಾಗಿ, ನ್ಯೂಸ್ ಮಾಧ್ಯಮದ ಜೊತೆಗೆ ಬುಲೆಟಿನ್ ಮಾಧ್ಯಮದ ಸೇರ್ಪಡೆಯಗೊಳಿಸುವ ಪುಟ್ಟ ಕಾರ್ಯ- ಮಾನವ ಕುಲಕೋಟಿಯ ಬೆಸ್ಸೆಲುಬಾಗಿ ನಿಲ್ಲಬಲ್ಲದೆಂಬ ದ್ರಡ ಸಂಕಲ್ಪದೊಂದಿಗೆ – ಬುಲೆಟಿನ್ ಮಾಧ್ಯಮದ ಸಂಕ್ಷಿಪ್ತ ಚಿತ್ರಣ ಬೆರಳೆಣಿಕೆ ಪದಗಳಲ್ಲಿ.
ದೇವರು ಮಾನವರು ವಿಷಯ ಜಗತ್ನಿಗೆ ಪರಿಚಯಿಸುವ ಸಲುವಾಗಿ ಉದಯಿಸಿದೆ – ಅವ್ಯಕ್ತ ಬುಲೆಟಿನ್
ಜಿನಾಲಯಗಳ ದೇವಾಲಯಗಳ ದೈವಾಲಯಗಳ ವಸ್ತುಗಳ ವಿಷಯಗಳ ಮಾನವರ ಅಂದರೆ – ೧. ಕೃಷಿ ಬುಲೆಟಿನ್ ೨ . ಬರ್ತ್ ಡೇ ಬುಲೆಟಿನ್ ೩. ಮ್ಯಾರೇಜ್ ಡೇ ಬುಲೆಟಿನ್ ೪. ಶ್ರದಾಂಜಲಿ ಬುಲೆಟಿನ್ ೫. ಆಟೋ ಬುಲೆಟಿನ್ ೬. ಬಿಸಿನೆಸ್ ಬುಲೆಟಿನ್ ೭. ದೈವಾರಾಧನೆ ಬುಲೆಟಿನ್( ದೈವಸ್ಥಾನ ಮತ್ತು ದೈವ ನರ್ತಕರು ಸೇರಿ ) 8. ದೇವಾಲಯ ಬುಲೆಟಿನ್ 9. ಟೈಲರ್ ಬುಲೆಟಿನ್ 10. ಸ್ಕೂಲ್ ಬುಲೆಟಿನ್ ೧೧. ಬೆಸ್ಟ್ ಸ್ಟೂಡೆಂಟ್ ಬುಲೆಟಿನ್ (ಟಾಪರ್ ಸ್ಟೂಡೆಂಟ್ ) ೧೨. ಅಭಿನಂದನೆಗಳ ಬುಲೆಟಿನ್ ೧೩ ಪ್ರೀಸ್ಟ್ (ಅರ್ಚಕರ ) ಬುಲೆಟಿನ್ ೧೪.ಬರಹಗಾರರ ಬುಲೆಟಿನ್ ೧೫ ಭಾಷಣಗಾರರ ಬುಲೆಟಿನ್ ೧೬. ಕ್ಷೌರಿಕರ ಬುಲೆಟಿನ್ ೧೭. ವಕೀಲರ ಬುಲೆಟಿನ್ 18. ಡಾಕ್ಟರರ ಬುಲೆಟಿನ್ ೧೯. ಎಂಜಿನೀರರ ಬುಲೆಟಿನ್ ೨೦ ಹೌಸ್ ಬುಲೆಟಿನ್ ೨೧. ಕಾಂಟ್ರಾಕ್ಟರ್ಸ್ ಬುಲೆಟಿನ್ ೨೨. ಆನ್ಲೈನ್ ಬಳಕೆದಾರರ ವೇದಿಕೆ ಬುಲೆಟಿನ್ ೨೩. ಕ್ಲಾಸ್ಸಿಫಿಎಡ್ ಬುಲೆಟಿನ್ ೨೪. ಮಾರಾಟಕ್ಕಿದೆ ಬುಲೆಟಿನ್ ೨೫ ಬೇಕಾಗಿದೆ ಬುಲೆಟಿನ್ ೨೬ . ಊರಿನ ಬುಲೆಟಿನ್ 27 ಪಟ್ಟಣದ ಬುಲೆಟಿನ್ 28 ಫೋಟೋಗ್ರಾಫೇರ್ಸ್ ಇತ್ಯಾದಿ ಇತ್ಯಾದಿ
ಈ ಬೇರೆ ಬೇರೆ ವೃತಿಯಲ್ಲಿ ತೊಡಗಿರುವವರು ಕೆಲವು ಲಕ್ಷಗಳಿಗೂ ಮಿಗಿಲಾಗಿ ಇದ್ದಾರೆ. ಪ್ರತಿ ವೃತಿಪರರನ್ನು ಮನೆಯಂಗಳದಿಂದ ಜಗದಂಗಳಕ್ಕೆ ಉನ್ನತೀಕರಿಸುವ ಕಾರ್ಯ – ಅವರ ಭಾವಚಿತ್ರ ಹೆಸರು ಊರು ಬುಲ್ಲೆಟಿನಿನಲ್ಲಿ ಪ್ರಕಟಿಸಲು ಇಚ್ಚಿಸಿದ್ದು ಒಂದಕ್ಕೆ ರೂಪಾಯಿ ನೂರು ಶುಲ್ಕವಿರಿಸಿ ಪ್ರತಿಶತ ೫೦ ನ್ನು – ಸ್ವಾಲಂಬಿ ಮತ್ತು ಸಂತುಷ್ಟ – ಜಿನಾಲಯ ದೇವಾಲಯ ದೈವಾಲಯ ಮತ್ತು ಬದುಕು – ಇದಕ್ಕೆ ಮೀಸಲಿಡುವ ಇಚ್ಛೆ ಹೊಂದಿದ್ದು – ನಾವೆಲ್ಲ ಜಾತಿ ಮತ ಪಂತ ಬೇಡ ಮರೆತು – ಪ್ರಕೃತಿಯ ಮರ್ಮವನ್ನು ಅರಿತು ಬಾಳೋಣ – ನಮ್ಮ ಪ್ರಗತಿ ನಮ್ಮಿಂದ ಅರಿಯೋಣ – ಮಾನವ ಬದುಕನ್ನು ಆನ್ಲೈನ್ ಬೆಳಕಿನತ್ತ ಕೊಂಡುಹೋಗೋಣ – ಇತಿ ತಮ್ಮವ