ಪ್ರಾಯೋಜಕರು ; ಶ್ರದ್ಧಾಂಜಲಿ ಸೇವಾ ಒಕ್ಕೂಟ
ಉದ್ದೇಶ ;ಅಗಲಿದ ಮಾನವ ಬಂದುಗಳ ಶಾಶ್ವತ ಪರಿಚಯ ಮುಂದಿನ ಪೀಳಿಗೆಗೆ
ಪ್ರಯೋಜನ ; ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಉಪಯೋಗಕ್ಕೆ ಅವಕಾಶ – ನಮ್ಮ ಸಂಸ್ಕೃತಿಯ ಉಳಿವು – ಸೇವಾ ಬದುಕಿಗೆ ಪುನರ್ಜನ್ಮ
ಶ್ರೀ ಯುವರಾಜ ಬಲ್ಲಾಳ್ ಇಚ್ಲಂಪಾಡಿ ಗುತ್ತಿನವರು ತಾರೀಕು ಜೂಲೈ 23 ರಂದು ಬದುಕಿನ ಜೀವನದ ಯಾತ್ರೆಗೆ ವಿದಾಯ ಹೇಳಿದ್ದಾರೆ. ಇವರು ಇಚ್ಲಂಪಾಡಿ ಬೀಡಿಗೆ ಮಾಡಿದ ಸೇವೆ ಅಪಾರ – ನಿಂತು ಹೋಗಿರುವ ದೇವರ ಪೂಜೆ ದೈವಗಳ ಜಾತ್ರೆ ಮತ್ತು ದೇವಾಲಯದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಮುಂತಾದ ಸಕಲ ಕೆಲಸ ಕಾರ್ಯಗಳಲ್ಲಿ ನೇತೃತ್ವ ವಹಿಸಿ – ಹೆಂಡತಿ ಮಕ್ಕಳ, ಸೊಸೆಯಂದಿಯರ ಮತ್ತು ಮೊಮಕ್ಕಳ ತ್ಯಾಗ ಬದುಕನ್ನು ಸದುಪಯೋಗ ಮಾಡಿ – ದಿವಂಗತ ಶ್ರವಣಬೆಳಗೊಳ ಸ್ವಾಮಿಗಳಿಂದ ಗುರುತಿಸಲ್ಪಟ್ಟ ವ್ಯಕ್ತಿಯಾಗಿ – ಹೋರಾಟದ ಬದುಕೇ ನಿಜವಾದ ಬದುಕು ಎಂಬುದನ್ನು ನಿತ್ಯ ಬದುಕಿನಲ್ಲಿ ತೋರಿಸಿಕೊಟ್ಟ – ಸಾಧನೆಯಲ್ಲಿ ಸಾಧಕನಾಗಿ – ಮಾನವ ಬದುಕಿಗೆ ದಾರಿದೀಪವಾಗಿ ಅಮರತ್ವ ಪಡೆದ ಧೀಮಂತ ವ್ಯಕ್ತಿಗೆ – ಅಳಿಲ ಸೇವೆ – ಶ್ರದ್ಧಾಂಜಲಿ ಅಭಿಯಾನ.
ಈ ಅಭಿಯಾನ ಉದ್ಯಪ್ಪ ಅರಸು ವ್ಯಾಪ್ತಿ ಮತ್ತು ದಿವಂಗತರ ಸಂಬಂಧಿಗಳಿಗೆ ಮಾತ್ರ ಸೀಮಿತ.
ಅಭಿಯಾನವು ಜೂಲೈ 25 ರಿಂದ ಪ್ರಾರಂಭವಾಗಿ ಆಗುಸ್ಟ್ 8 ರ ತನಕ ಮಾತ್ರ
ಪ್ರತಿ ಮನೆಯವರು ನಿಮ್ಮ ನಿಮ್ಮ ಮನೆಯಲ್ಲಿರುವ ಅಗಲಿದವರ ಭಾವಚಿತ್ರ , ಹೆಸರು ,ಊರಿನ ಹೆಸರು ,ಜಾತಿಯ ಹೆಸರು, ಮರಣ ದಿನಾಂಕ, ಮರಣ ಹೊಂದಿದವರ ತಂದೆ ತಾಯಿ ಹೆಸರು ಗೊತ್ತಿದ್ದರೆ ಮಾತ್ರ, ಪತ್ನಿ / ಪತಿ ಮತ್ತು ಮಕ್ಕಳ ಹೆಸರಿನ ಜೊತೆಗೆ ನಮಗೆ ವಾಟ್ಸಪ್ಪ್ ಮೂಲಕ ನಿಗದಿ ಪಡಿಸಿರುವ ತಾರೀಕಿನ ಒಳಗಡೆ ಕಳುಹಿಸಿ ಕೊಡಿ. ಭಾವಚಿತ್ರ ಲಭ್ಯವಿಲ್ಲದವರು ಕೂಡ ಗೊತ್ತಿರುವ ಮಾಹಿತಿ ಕಳುಹಿಸಿಕೊಟ್ಟು ಸಹಕರಿಸಿ. ನಮಗೆ ಪರಿಚಿತ ವ್ಯಕ್ತಿಯ ಮೂಲಕ ಕಳುಹಿಸಿ ಕೊಡುವುದು ಅತ್ಯಗತ್ಯ. ಗರಿಷ್ಠ ಮಾಹಿತಿ ೫೦ ಪದಗಳಿಗೆ ಮೀರದಿರಲಿ. ಇದು ಸಂಪೂರ್ಣ ಉಚಿತ
ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ 9480241765