Avyaktha Vachanagalu

Share this

ದೇಹದ ಕಾಯಿಲೆಗೆ ಆಸ್ಪತ್ರೆಯಲ್ಲಿ ಮದ್ದು
ಸಾಮಾಜಿಕ ಕಾಯಿಲೆಗೆ ಸೆರೆಮನೆಯಲ್ಲಿ ಮದ್ದು
ಸಾಮಾಜಿಕ ಕಾಯಿಲೆಗೆ ಸಮಾಜ ಬಲಿಯಾಗಿದೆ …………………………………ಅವ್ಯಕ್ತ

ಶಾಸಕ ಸಂಸದರ ನಡುವೆ ಗಲಾಟೆ
ನಿತ್ಯ ಬದುಕಿನಲ್ಲಿ ಮಾನವರೊಂದಿಗೆ ಗಲಾಟೆ
ಬದುಕು ಸಾಕು ಯಮ ಬಾಯೆಂದ ………………………………………………..ಅವ್ಯಕ್ತ

ಕಲಹ ಪ್ರಿಯರಿಗೆ ರತ್ನಕಂಬಳಿ ಸ್ವಾಗತ
ಶಾಂತಿ ಪ್ರಿಯರಿಗೆ ದೊಣ್ಣೆಯ ಸ್ವಾಗತ
ಧರ್ಮ ಮತ್ತು ಆಡಳಿತ ಇಲ್ಲವೆಂದ ………………………………………………. ಅವ್ಯಕ್ತ

ಹಾರ್ಟ್ ಇದ್ದವರಿಗೆ ಹಾರ್ಟ್ ಅಟ್ಯಾಕ್
ಹಾರ್ಟ್ ಇಲ್ಲದವರಿಗೆ ನೋ ಅಟ್ಯಾಕ್
ಹಾರ್ಟ್ ಕೊಟ್ಟು ತಪ್ಪು ಮಾಡಿದೆ …………………………………………………ಅವ್ಯಕ್ತ

ರಾಕ್ಷಸರ ನಿಗ್ರಹಿಸದ ಆಡಳಿತ
ಮಾನವರ ಸಂರಕ್ಷಿಸದ ಆಡಳಿತ
ಪ್ರಾಣಿ ಪ್ರಪಂಚದ ಬದುಕೆಂದ ………………………………………………….ಅವ್ಯಕ್ತ

ಓಡಿ ಬದುಕುವ ಕಲೆ
ಇದ್ದು ಎದುರಿಸುವ ಕಲೆ
ಅರಿತು ಬಾಳಿದರೆ ಲೇಸೆಂದ ……………………………………………………..ಅವ್ಯಕ್ತ

ಪುರುಷ ಮಹಿಳೆ ಶ್ರಧಾಂಜಲಿ
ಸೇವಾ ಒಕ್ಕೂಟದ ಬಯಕೆ
ನನ್ನುಸಿರು ಧರೆಗಿಳಿದು ಈಡೇರಿಸೆಂದ ………………………………………………….. ಅವ್ಯಕ್ತ

ದ್ವೇಷಾಗ್ನಿ ಧರೆಯಲ್ಲಿ ಹೊತ್ತಿ ಉರಿಯುತಿಹುದು
ಸೇವೆ ಶಾಂತಿ ಮಂತ್ರ ಪಠಿಸುತಿಹೆನು
ಸಾವು ಬದುಕು ನಿನಗೆ ಶರಣು ………………………………………………………… ಅವ್ಯಕ್ತ

See also  Avyaktha vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you