ಹುಟ್ಟಿದ ಮಗು ದೇವರ ಜಾತಿ
ಬೆಳೆದ ಮಗು ಜಾತಿಯ ಮುಖವಾಡ
ದೇವರ ಜಾತಿಯ ಮಗುವಾಗಿ ಬೆಳೆಸು ………………..ಅವ್ಯಕ್ತ
ದೈವ ದೇವರ ಪ್ರತಿಷ್ಠೆ ನಾಟಕದಿ
ನಿಜ ಭಕ್ತರು ದೂರ ನಿಂತಿಹರು
ಧರೆಗೆ ಇಳಿದು ಭಕ್ತರ ಸಂತೈಸೇಂದ …………………..ಅವ್ಯಕ್ತ
ಸೇವಾ ವೃತ್ತಿ ದರೋಡೆಗಾರರ ಆಯುಧ
ಆಡಲಿತ ಬೆಂಗಾವಲಾಗಿ ನಿಂತ ಸೈನಿಕರು
ಶಿಕ್ಷಣ ಶಿಕ್ಷೆ ಕೊಟ್ಟು ಸರಿಪಡಿಸಲಾರೆಯಾ ………………. ಅವ್ಯಕ್ತ
ವಾರ್ತ ಪತ್ರಿಕೆಗಳು ದಿನಕೊಂದು ಹುಟ್ಟುತಿಹವು
ಬುಲೆಟಿನ್ ಪತ್ರಿಕೆಗಳ ನಿರೀಕ್ಷೆ ಹುಸಿಯಾಗುತಿಹುದು
ಕಸದ ತೊಟ್ಟಿಯಾಗುವ ಮನದ ರಕ್ಷಿಸೆಂದ ……………… ಅವ್ಯಕ್ತ
ಶಾಲಾ ಶಿಕ್ಷಣ ಸೋಮಾರಿ ಶಿಕ್ಷಣ ಆಗುತಿಹುದು
ಬದುಕಿನ ಶಿಕ್ಷಣ ದೇಶಕ್ಕೆ ಸಮಾಜಕ್ಕೆ ಭೂಷಣ
ದುಡಿಯುವ ಕೈಗಳು ದುಡಿಯದ ಕೈಗಳಾದರೆ ಸರ್ವನಾಶವೆಂದ ……….. ಅವ್ಯಕ್ತ
ಜಾತಿ ಒಕ್ಕೂಟ ಪಕ್ಷ ಒಕ್ಕೂಟ ವೃತ್ತಿ ಒಕ್ಕೂಟ
ಮಾರಕ ಒಕ್ಕೂಟಗಳಾಗಿ ದೇಶ ಸಮಾಜ ಒಡೆದು ಚೂರಾಗುತಿಹುದು
ನದಿಗಳಿಗೆ ಸಮುದ್ರದಂತೆ ಮಾನವರ ಸೇವಾ ಒಕ್ಕೂಟ ದಯಪಾಲಿಸು …… ಅವ್ಯಕ್ತ