ಪ್ರಕೃತಿ ದೇವರ ಸೃಷ್ಟಿ
ಜಾತಿ ಮಾನವ ಸೃಷ್ಟಿ
ಅರಿತು ಬಾಳಿದರೆ ಲೇಸೆಂದ …………………………………….. ಅವ್ಯಕ್ತ
ತನ್ನೊಳಗಿನ ವೈರಿಗಳ ಗೆಲ್ಲದಾತ
ಅನ್ಯರೊಳಗಿನ ವೈರಿಗಳ ಬೋದಿಪ
ಪಾಪದ ಕೂಪಕ್ಕೆ ಬೀಳುತಿಹನು …………………………………… ಅವ್ಯಕ್ತ
ದೇವಾಲಯದೊಳಗೆ ವಸ್ತ್ರಕ್ಕೆ ಇತಿಮಿತಿ
ದೇಹವೆಂಬ ವಸ್ತ್ರದ ಅರಿವಿಗಾಗಿ
ಬದುಕಿಗೊಂದು ಎಚ್ಚರಿಕೆ ಗಂಟೆ ………………………………….. ಅವ್ಯಕ್ತ
ದೇವಾಲಯದಿ ಮೌನಕ್ಕೆ ಶರಣು
ದೇವಾಲಯದಿ ಮಂತ್ರಕ್ಕೆ ಸೀಮಿತ
ಇಂದ್ರಿಯಗಳ ನಿಗ್ರಹಕ್ಕೆ ದಾರಿಯೆಂದ …………………………….. ಅವ್ಯಕ್ತ
ದೇವರ ಮುಂದೆ ಅಡ್ಡಗೋಡೆ ಜಾತಿ
ಜಾತಿ ಅಡ್ಡಗೋಡೆ ಕಿತ್ತು ಬಿಸಾಕಿದೊಡೆ
ದೇವರ ಅಭಯ ಆಶೀರ್ವಾದ ನಮಗೆಂದ …………………… ಅವ್ಯಕ್ತ