ಮಾನವ ಮಾನವರ ಮದ್ಯೆ ಇರುವ ಸಂಬಂಧಗಳು ದೂರವಾಗುತಿರುವ ಈ ವಿಷಮ ಕಾಲದಲ್ಲಿ – ಸಮಾಜದಲ್ಲಿ ಕ್ರಾಂತಿಕಾರಿ ಬೀಜಗಳನ್ನು ಬಿತ್ತಿ – ಯಾವ ವಿಷ ಬೀಜ ಮೊಳಕೆ ಬಂದು ಹೆಮ್ಮರವಾಗಿ ನಿಂತಿರುವುದನ್ನು ಮೂಲದಿಂದಲೆ ಸರ್ವನಾಶ ಮಾಡಿ – ಮುಂದಕ್ಕೆ ನಾವೆಲ್ಲರೂ ಹಾಲು ನೀರಿನಂತೆ ಒಟ್ಟಾಗಿ ಜೀವರಾಶಿಗಳ ಪೈಕಿ ಪ್ರಾಣಿವರ್ಗದಲ್ಲಿರುವುದ ಅರಿತು – ಪ್ರಕೃತಿ ಮತ್ತು ದೇವರು ಏಕತೆಗೆ ಮಾತ್ರ ಪೂರಕ ಭಿನ್ನತೆಗೆ ಮಾರಕ – ವಿಧಿ ನಿಯಮ ಅನುಷ್ಠಾನಕ್ಕೆ ಈ ಪುಟ್ಟ ವೇದಿಕೆಯಿಂದ ಮನವಿ.
ಈ ಒಕ್ಕೂಟ ಯಾಕೆ ಬೇಕು ?
ಸೇವಾ ಮನೋಭಾವನೆ ಮನೋಬಲ ವೃದ್ಧಿಸುತ್ತದೆ – ಸ್ವಾರ್ಥ ಕುಗ್ಗಿಸುತ್ತದೆ
ಸೇವೆ ಪದದ ಬದಲು ಕರ್ತವ್ಯ ಸೂಕ್ತ ಪದ – ಬದುಕಿನ ಮರ್ಮ ಅರಿತಾಗ ಮನವರಿಕೆ ಆಗುತದೆ
ನಮ್ಮ ಮಾತಾಪಿತೃಗಳ ಸೇವೆ ಕರ್ತವ್ಯ – ಅವರುಗಳು ಸಂಖ್ಯೆ ಅಗಣಿತ – ೧ ತಲೆ ಮರಿಗೆ ೨ , ೨ ತಲೆಮಾರಿಗೆ ೪ , ೪ ತಲೆಮಾರಿಗೆ ೧೬, ೧೦ ತಲೆಮಾರಿಗೆ ೧೦೨೪ , ೨೦ ತಲೆಮಾರಿಗೆ ೧೦೪೮೫೭೬
ಜಾತಿ ವೃತ್ತಿ ಊರು ಸಂಘಟನೆಗಳು ಒಕ್ಕೂಟಗಳು – ಮಾನವರ ಸೇವಾ ಒಕ್ಕೂಟದ ಅಂಗ ಸಮುಸ್ಥೆಗಳಾಗಿ ಬೆಳೆಸುವ ಪರಿಪಾಠ ನಮ್ಮದಾಗಲಿ
ಕಿತ್ತು ತಿನ್ನುವ ರಕ್ಕಸ ಪ್ರವೃತ್ತಿ ಬಿಟ್ಟುಬಿಡೋಣ – ಹಂಚಿ ತಿನ್ನುವ ಮಾನವ ಪ್ರವೃತ್ತಿ ಅಳವಡಿಸೋಣ – ಕೊಟ್ಟು ತಿನ್ನುವ ಪ್ರವೃತ್ತಿ ಬೆಳೆಸೋಣ