ನಿನ್ನ ಸೇವೆ ನಿನ್ನಿಂದ ಮಾತ್ರ ಸಾಧ್ಯ – ಈಗಲೆ ಮಾಡಿ ಮುಗಿಸು – Your service can only be done by you – do it now

ಶೇರ್ ಮಾಡಿ

ನೀನು ಪ್ರಸ್ತುತ ಸಮಾಜದ ಯಾವುದೇ ಕ್ಷೇತ್ರದ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು – ಕೋಟಿ ಕೋಟಿ ಹಣ ದಾನ ಧರ್ಮದಲ್ಲಿ ತೊಡಗಿಸಿದ್ದರು – ಕವಿಯಾಗಿ, ಆಟಗಾರನಾಗಿ, ಕಲಾಕಾರನಾಗಿ, ವಿಜ್ಞಾನಿಯಾಗಿ, ಸಾಧಕನಾಗಿ, ದರ್ಮದರ್ಶಿಯಾಗಿ, ತ್ಯಾಗಿಗಳಾಗಿ , ಸ್ವಾಮಿಗಳಾಗಿ ಇತ್ಯಾದಿ – ಗರಿಷ್ಠ ಸಾಧನೆ ಮಾಡಿದ್ದರು – ತನ್ನದೇ ಆದ ಸೀಮಿತ ವ್ಯಾಪ್ತಿಯ ಅಡ್ಡಗೋಡೆಯಿಂದ ಹೊರಬಂದು – ಕಾಣುವ ದೇಹವನ್ನು ತ್ಯಜಿಸಿದ್ದರು – ಜನಮನದಲ್ಲಿ ಅಮರತ್ವದ ಬದುಕನ್ನು ನಿನ್ನದಾಗಿಸಲು – ನಿನ್ನ ಜೀವನ ಚರಿತ್ರೆ – ಕನಿಷ್ಠ ಭಾವಚಿತ್ರ ಸಹಿತ ವ್ಯಕ್ತಿ ಪರಿಚಯ – ಆನ್ಲೈನಿನಲ್ಲಿ ಬರುವಂತೆ ಮಾಡಿದರೆ ಮಾತ್ರ – ನಿತ್ಯ ನಿರಂತರ ಬಾಳಿನ ಸಂಗಾತಿಯಾದ ಮೊಬೈಲ್ ನಿನಗೆ ಕೃತಜ್ಞತೆ ಸಲ್ಲಿಸಬಹುದು.
ಈ ಬಗ್ಗೆ ಸರಿಯಾಗಿ ತಿಳಿಯಲು ನಿನ್ನನ್ನು ಮೂದಲಿಸಿ ಹೀಯಾಳಿಸುತಿರುವ ನಿನ್ನಿಂದ ಜಗತ್ತನ್ನು ಕಾಣುವ ವಸ್ತುಗಳ ಮಾತುಗಳನ್ನು ಆಲಿಸಿ ಸಾದ್ಯವಾದರೆ ಬದುಕಿನಲ್ಲಿ ಉತ್ತರ ಕೊಡಲು ರಣಕಹಳೆ ಊದು
ನಾನು ನೀನು ಬರೆಯುವ ಪುಸ್ತಕ ಕಂಪ್ಯೂಟರ್ ಮೊಬೈಲ್ – ನನ್ನ ಬಗ್ಗೆ ಮಾಹಿತಿ ಇದೆ – ನಿನ್ನ ಮಾಹಿತಿ ಎಲ್ಲಿದೆ
ನಾನು ಕೃಷಿ ಯಂತ್ರ – ನನ್ನ ಬಗ್ಗೆ ಅರಿವು ಹುಟ್ಟಿಸುವ ಕೆಲಸ ನೀನು ಮಾಡಿದ್ದಿ – ನಿನ್ನ ಬಗ್ಗೆ ಏನು ಮಾಡಿದ್ದಿ
ನಾನು ಒಂದು ಶಾಲೆ – ನನ್ನ ಬಗ್ಗೆ ತಿಳಿಯುವ ವ್ಯವಸ್ಥೆ ನೀನು ಮಾಡಿದ್ದು – ನಿನ್ನ …..?
ನೀನು ಹಾಕುವ ಬಟ್ಟೆ – ಜಗಕ್ಕೆ ಅರಿವು ಇದೆ – ಹಾಕಿಕೊಳ್ಳುವ ನಿನ್ನ ಬಗ್ಗೆ ಜಗಕ್ಕೆ ಅರಿವು ಇಲ್ಲ ಯಾಕೆ
ನೀನು ಓಡಿಸುವ ಕಾರು – ಜಗದ ಜನರು ಬಲ್ಲರು – ಓಡಿಸುವ ನಿನ್ನ ಬಗ್ಗೆ ಬಲ್ಲವರು ಯಾರು ?
ನನಗಾಗಿ ಕೋಟಿ ವೆಚ್ಚ ಮಾಡುವೆ – ನಿನಗಾಗಿ ಸಾವಿರ ವೆಚ್ಚ ಮಾಡಲು ಹಿಂಜರಿಕೆ ಏಕೆ
ಚಿನ್ನದ ಗೋಪುರದಿ ಬದುಕುವೆ – ಬದುಕನ್ನು ಚಿನ್ನವನ್ನಾಗಿಸಲು ದಾರಿ ಕಾಣದಾದೆಯಾ ?
ಮದುವೆಗೊಂದು ಬಟ್ಟೆ – ಬದುಕನ್ನು ಸುಂದರವಾಗುಸುವ ಬಟ್ಟೆ ಕಾಣುವುದಿಲ್ಲ ಏಕೆ
ತಿಂಗಳಿಗೊಂದು ಮೊಬೈಲ್ – ವರುಷಕ್ಕೊಂದು ಕಾರು – ಐದು ವರುಷಕ್ಕೆ ಒಂದು ಮನೆ ನಿನ್ನ ಚಿಂತನೆ ಇತ್ತ ಸಾಗಲಿ
ಕೆಲಸಕ್ಕಾಗಿ ಅಲೆದಾಟ – ಮನೆಯಲ್ಲಿ ಕೆಲಸಕ್ಕೆ ನಾಂದಿಯಾಗಲಿ
ಸ್ವಾರ್ಥ ಪೈಪೋಟಿ – ಸೇವಾ ಪೈಪೋಟಿಯತ್ತ ಸಾಗಲಿ
ಜಾತಿ ಮತ ಭೇದ ಮರೆತು – ದೇಶದ ಹಿತ , ಮಾನವರ ಹಿತ , ಜೀವರಾಶಿಗಳ ಹಿತ , ಪ್ರಕೃತಿಯ ಹಿತ – ಕಾಯುವ ಬದುಕಿನ ಸೈನಿಕರು ನಾವಾಗಿ ನಮ್ಮೆಲ್ಲರ ಬದುಕು ಹಸನಾಗಿಸೋಣ

See also  Shresta

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?