ಮನೆ ಮನೆ ಭೇಟಿ ಅಂದಿಗೆ ಸೂಕ್ತ
ಮನ ಮನ ಭೇಟಿ ಇಂದಿಗೆ ಸೂಕ್ತ
ದೇವ ಪ್ರೇರಣೆ ಮನ ಭೇಟಿ ಮಾಡೆಂದ ———— ————–ಅವ್ಯಕ್ತ
ದೇವ ದೇಗುಲ ಮರೆತ ಮಾನವ
ವಿದ್ಯಾ ದೇಗುಲ ಅಪ್ಪಿಕೊಂಡ ಮಾನವ
ನ್ಯಾಯ ದೇಗುಲ ಶಿಕ್ಷೆ ಅನುಭವಿಸುತಿಹನು ——————— ಅವ್ಯಕ್ತ
ಪುಸ್ತಕದ ಓದು ಸೀಮಿತ
ಮಾಸ್ತಕದ ಓದು ಅಪರಿಮಿತ
ಮಾಸ್ತಕದ ಓದು ತಿಳಿಯೆಂದ ———– ಅವ್ಯಕ್ತ
ಸ್ವಾರ್ಥ ಪಕ್ಷಕ್ಕೆ ಬಲಿಯಾದರೆ
ಪಕ್ಷ ದೇಶಕ್ಕೆ ಬಲಿಯಾದರೆ
ದೇಶದ ಅಭಿವೃದ್ಧಿ ಸಾಧ್ಯ ———– ಅವ್ಯಕ್ತ
ಸಂಪತ್ತಿಗಾಗಿ ವಲಸೆ ಪದ್ಧತಿ ವಿದ್ಯಾಭ್ಯಾಸದ ಕೊಡುಗೆ
ಮನೆಯಲ್ಲಿ ಇದ್ದು ಸಂಪಾದನೆ ಪೂರ್ವಜರ ಕೊಡುಗೆ
ನಿಂತಲ್ಲಿ ಕೂತಲ್ಲಿ ಸಂಪಾದನೆ ಅವಿಸ್ಕಾರದ ಕೊಡುಗೆ —— ಅವ್ಯಕ್ತ
ನ್ಯಾಯಕ್ಕಾಗಿ ನ್ಯಾಯಾಲಯ ಸೃಷ್ಟಿ ಪ್ರಜಾಪ್ರಭುತ್ವ ಕೊಡುಗೆ
ಮನೆ ಬೀದಿ ಹೋರಾಟ ಸ್ವಾರ್ಥದ ಕೊಡುಗೆ
ಮಾನವ ಬದುಕು ದೇಶ ಹೊತ್ತಿ ಉರಿಯುತಿಹುದು —————— ಅವ್ಯಕ್ತ