ವಿದ್ಯೆ ಕಲಿಸುವ ಶಾಲೆ ಬದಲಾಗಲೇ ಬೇಕು
ಬುದ್ದಿ ಕಲಿಸುವ ಶಾಲೆ ತೆರೆಯಲೇ ಬೇಕು
ಆಗದಿದ್ದೊಡೆ ವಿದ್ಯೆ ಬುದ್ದಿ ಶಾಲೆ ತೆರೆಯೆಂದ ————————————– ಅವ್ಯಕ್ತ
ಭಾವ ಪೂಜೆಯಲ್ಲಿ ಲೋಪ ಇದ್ದೊಡೆ
ದ್ರವ್ಯ ಪೂಜೆಯಲ್ಲಿ ಲೋಪ ಇಲ್ಲದಿದ್ದೊಡೆ
ಮಲ್ಪ ಪೂಜೆ ದೇವರಿಗೆ ಸಲ್ಲದೆಂದ ————————————— ಅವ್ಯಕ್ತ
ನಿನ್ನ ದೇಹದೊಳಗಿಹ ಗುಡಿಯ ದೇವರಿಗೆ ಪೂಜೆ ಮಾಡದೆ
ದೇವರಿಗಾಗಿ ದೇವಾಲಯದಿಂದ ದೇವಾಲಯಕ್ಕೆ ಅಲೆದಾಡಿ ಪೂಜೆ ಮಾಡುತಿರೆ
ನಿನ್ನ ದೇಹವೆಂಬ ವಾಹನ ಪಯಣ ದೇವಾಲಯದಿಂದ ದೇವಾಲಯಕ್ಕೆ ————————————– ಅವ್ಯಕ್ತ