
ದೈವ, ದೇವಾಲಯ ಮತ್ತು ಧರ್ಮಜೀವನದ ಪುನರುಜ್ಜೀವನಕ್ಕಾಗಿ —
ಅಭಿಯಾನದ ಉದ್ದೇಶಗಳು
- ವಾರಕ್ಕೊಮ್ಮೆ ದೇವಾಲಯ ಅಭಿಯಾನ: ದೇವಾಲಯ ಭೇಟಿಯೊಂದಿಗೆ ಕ್ಷೇತ್ರ ಮಂತ್ರ ಪಠಣ ಮತ್ತು ದೇವಾಲಯ ಸ್ವಚ್ಛತಾ ಕಾರ್ಯ ನಡೆಸುವುದು. 
- ಉದ್ಯೋಗ ಅಭಿಯಾನ: ಪ್ರತಿಯೊಬ್ಬರಿಗೂ ಮನೆಯಲ್ಲಿಯೇ ಉದ್ಯೋಗದ ಅವಕಾಶ ಕಲ್ಪಿಸುವ ಯೋಜನೆ. 
- ಸ್ವಾವಲಂಬಿ ಮತ್ತು ಸಂತುಷ್ಟ ಜೀವನ: ದೈವ, ದೇವರು ಮತ್ತು ಬದುಕಿನ ಸಮತೋಲನ ಸಾಧಿಸುವ ದಾರಿ. 
- ಪ್ರತಿಯೊಬ್ಬರಿಗೂ ಸ್ಥಾನ–ಮಾನ–ಘನತೆ–ಗೌರವ ಮತ್ತು ಸಂಪಾದನೆ: ಜೀವನದ ನೈಜ ಪ್ರಗತಿ ಗುರಿ. 
- “ಸಾವಿರ ವೆಚ್ಚದ ಕೆಲಸ – ಒಂದು ರೂಪಾಯಿಯಲ್ಲಿ” : ಪರಿಣಾಮಕಾರಿ ಅನುಷ್ಠಾನದ ವೇದಿಕೆ. 
- ನಾವು ಅಂದಿನ, ಇಂದಿನ, ಮುಂದಿನ ರಾಜರು: ಶತಸಿದ್ಧ ಭವಿಷ್ಯ ದೃಷ್ಟಿಯೊಂದಿಗೆ ಬದುಕೋಣ. 
- ಕ್ಷೇತ್ರ ಮಂತ್ರ ಪಠಣವೇ ಮನೋವೇಗದ ಅಭಿವೃದ್ಧಿಗೆ ಮೂಲ: ಅರಿತು ಅನುಭವಿಸಿ ಬದುಕೋಣ. 
ಅನುಷ್ಠಾನದ ವಿಧಾನ
- ಪ್ರತಿ ಮಂಗಳವಾರ ಬೆಳಿಗ್ಗೆ 11:30ರಿಂದ 12:30ರವರೆಗೆ ದೇವಾಲಯ ಭೇಟಿಯೊಂದಿಗೆ ಪಠಣ ಕಾರ್ಯಕ್ರಮ. 
- ಉದ್ಯೋಗಿಗಳಿಗೆ ರಜಾದಿನಗಳಲ್ಲಿ ಅವಕಾಶ. 
- 30 ನಿಮಿಷದ ಕಾರ್ಯಕ್ರಮ: ಮಂತ್ರ ಪಠಣ, ಸಾಮೂಹಿಕ ಪೂಜೆ, ಮನದ ಮಾತಿಗೆ ವೇದಿಕೆ, ಉದ್ಯೋಗ ಆವಿಷ್ಕಾರ ಚರ್ಚೆ. 
- 30 ನಿಮಿಷ ದೇವಾಲಯ ಸ್ವಚ್ಛತೆ. 
- ದೇವಾಲಯ ಅಭಿಯಾನದ ಅಧ್ಯಕ್ಷರ ಬದಲಾವಣೆ ವಾರ್ಷಿಕವಾಗಿ ನಡೆಯುವುದು. 
- ಸಕಲ ಅಭಿಯಾನಗಳ ಅಧ್ಯಕ್ಷರು ಹಿಂದೂಗಳ ಅಭಿಯಾನದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವರು. 
- ಎಲ್ಲಾ ಅಭಿಯಾನಗಳ ಅಧ್ಯಕ್ಷರ ಬದಲಾವಣೆಗೂ ವಾರ್ಷಿಕ ವ್ಯವಸ್ಥೆ. 
ಪಾಲುದಾರಿಕೆ
- ಅಧ್ಯಕ್ಷರಿಗೆ – 5% 
- ಉಪಾಧ್ಯಕ್ಷರಿಗೆ – 5% 
- ಸದಸ್ಯರಿಗೆ – 20% 
- ಬಂಡವಾಳ ಹೂಡಿಕೆ – ಸೂನ್ಯ 
ಪ್ರಾಯೋಜಕರು
ಈ ಮಹತ್ತರ ಅಭಿಯಾನವನ್ನು “ಅವ್ಯಕ್ತ ಬುಲೆಟಿನ್” ಮುಖಾಂತರ ಶುಭಾಕರ ಹೆಗ್ಗಡೆ ಪ್ರಾಯೋಜಿಸಿದ್ದಾರೆ.
ಜನರ ಅಭಿಪ್ರಾಯ ಮತ್ತು ದೇವರ ಅನುಗ್ರಹ ಮೇರೆಗೆ ಸೂಕ್ತ ಬದಲಾವಣೆಗಳನ್ನು ಮಾಡಲಾಗುವುದು.
ಉದ್ದೇಶಿತ ಉಪಾಭಿಯಾನಗಳು
- ದೇವಾಲಯ ಅಭಿಯಾನ 
- ಶ್ರದಾಂಜಲಿ ಅಭಿಯಾನ 
- ಜೀವನ ಚರಿತ್ರೆ ಅಭಿಯಾನ 
- ಸಾಧಕ ವ್ಯಕ್ತಿ ಅಭಿಯಾನ 
- ವ್ಯಾಪಾರ ಅಭಿಯಾನ 
- ಅಡಿಕೆ ಕೃಷಿ ಅಭಿಯಾನ 
- ತೆಂಗು ಕೃಷಿ ಅಭಿಯಾನ 
- ಗೇರು ಕೃಷಿ ಅಭಿಯಾನ 
- ಕಾಳುಮೆಣಸು ಕೃಷಿ ಅಭಿಯಾನ 
- ರಬ್ಬರ್ ಕೃಷಿ ಅಭಿಯಾನ 
- ಉದ್ಯೋಗಿಗಳ ಅಭಿಯಾನ 
- ಉದ್ಯಮಿಗಳ ಅಭಿಯಾನ 
- ಶಿಕ್ಷಕರ ಅಭಿಯಾನ 
- ಚಾಲಕರ ಅಭಿಯಾನ 
- ಟೈಲರ್ ಅಭಿಯಾನ 
- ಮಹಿಳಾ ಅಭಿಯಾನ 
- ವಸ್ತ್ರ ಅಭಿಯಾನ 
- ಚಿನ್ನಾಭರಣ ಅಭಿಯಾನ 
- ಫೋಟೋಗ್ರಾಫರ್ ಅಭಿಯಾನ 
- ಲೇಖಕರ ಅಭಿಯಾನ 
- ಭಾಷಾಗರು ಅಭಿಯಾನ 
- ವೈದ್ಯರ ಅಭಿಯಾನ 
- ನ್ಯಾಯವಾದಿಗಳ ಅಭಿಯಾನ 
- ಅಡುಗೆ ಅಭಿಯಾನ 
- ಮದುವೆ ಅಭಿಯಾನ 
- ಮನೆ ಅಭಿಯಾನ 
- ವಿದ್ಯಾರ್ಥಿ ಅಭಿಯಾನ 
- ರಾಜಕಾರಿಣಿಗಳ ಅಭಿಯಾನ 
- ಅರ್ಚಕರ ಅಭಿಯಾನ 
ಅಭಿಯಾನದ ತತ್ವ
ಈ ಕಾರ್ಯ ನಾನು (ವ್ಯಕ್ತಿ) ಮಾಡುತ್ತಿರುವುದಲ್ಲ —
ದೇವಿ ಮಾಡಿಸುತ್ತಿದ್ದಾಳೆ ಎಂಬ ನಂಬಿಕೆಯೇ ನಮ್ಮ ಶಕ್ತಿ.
ನಾವು ಮಾನವರಲ್ಲಿ ದೇವತ್ವವನ್ನು ಕಾಣುವ ಹಂಬಲದಿಂದ ಮುಂದೆ ಹೆಜ್ಜೆ ಇಡೋಣ.
ಎಲ್ಲ ಹಿಂದೂ ಸಹೋದರ ಸಹೋದರಿಯರಿಗೆ ಅವ್ಯಕ್ತ ಪ್ರಣಾಮಗಳು.