ದೈವಾರಾಧನೆ ಅರಸು ಪದ್ದತಿಯ ನ್ಯಾಯಾಂಗ ವ್ಯವಸ್ಥೆ.
ತಪ್ಪು ಯಾರೇ ಮಾಡಿದರು ದೂರು ಕೊಟ್ಟು ಕೆಲವೇ ದಿನಗಳಲ್ಲಿ ತಪ್ಪಿಸ್ಥ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ತಕ್ಕುದಾದ ಶಿಕ್ಷೆ ಕೊಡುವ ಜಾಗತಿಕ ಮಟ್ಟದ ಅತ್ಯಂತ ಶ್ರೇಷ್ಠ ವ್ಯವಸ್ಥೆ.
ಇದು ದೇವೆರ ನ್ಯಾಯಾಲಯ
ಸಮಯ, ಶ್ರಮ , ಸಂಪತ್ತಿನ ಕನಿಷ್ಠ ಬಳಕೆ
ತಪ್ಪಿತಸ್ಥನಿಗೆ ಶಿಕ್ಷೆ ನೂರಕ್ಕೆ ನೂರು ಶತಸಿದ್ಧ
ಇಂದಿಗು ನ್ಯಾಯಾಂಗ ಸುತ್ತಿ ಕಟ್ಟ ಕಡೆಗೆ ದೈವಕ್ಕೆ ಮೊರೆ ಹೋಗುವುದು ನಮ್ಮ ವಾಡಿಕೆ
ಇಂದು ಯಾರ ಮನೆಯಲ್ಲಿ, ಗುತ್ತಿನಲ್ಲಿ , ಅರಸು ಪಟ್ಟದಲ್ಲಿ – ದೈವಗಳು ಇಲ್ಲ ಮೂರ್ತಿ ಮಾತ್ರ ಇದೆ.
ನಾವು ನಿತ್ಯ ತಪ್ಪು ಮಾಡಿ ನಮ್ಮನ್ನು ರಕ್ಷಿಸು – ಮೊರೆ ಕೇಳಿ ಕೇಳಿ – ಕಾಡು ಸೇರಿವೆ – ಬಲ್ಲವರ ಅಭಿಮತ
ಮನದಲ್ಲಿ ಇರುವ ದೈವ – ಮನೆಯಲ್ಲಿ ಇರಬೇಕಾದ ದೈವ – ಬಾಹ್ಯ ಆಡಂಬರಕ್ಕೆ ಮಾತ್ರ ಒತ್ತು – ದೈವಾರಾಧನೆಗೆ ಇತಿಶ್ರೀ
ಮೂಲ ದೈವಾರಾಧನೆ ಕಾಟಾಚಾರಕ್ಕೆ ಮತ್ತು ಅನಾಚಾರಕ್ಕೆ ಬಲಿ.ಆಚಾರಕ್ಕೆ ಅಂತ್ಯ ಇಂದಿನ ವಾಸ್ತವ.
ನರ್ತನ ಸೇವೆ ಬಹಿರಂಗ ನ್ಯಾಯಾಲಯ. ತಪಿತಸ್ಥನನ್ನು ಕರೆದು ಯಜಮಾನನ ಅನುಮತಿಯಂತೆ ಶಿಕ್ಷೆ ಪ್ರಕಟಣೆಗೆ ಮಾತ್ರ ಮೀಸಲು.
ಅತ್ಯಂತ ಶ್ರೇಷ್ಠ ಸಂಸ್ಕಾರವಂತರು ಅಂದು ಜೈನರಾಗಿದ್ದರು. ಅದಕ್ಕಾಗಿ ದೈವ ಅವರ ಆಶ್ರಯ ಪಡೆದಿತ್ತು.
ಇಂದು ಅತ್ಯಂತ ಶ್ರೇಷ್ಠ ಸಂಸ್ಕಾರ ಇರುವ ವ್ಯಕ್ತಿಯ ಆಶ್ರಯ ದೈವಗಳು ಪಡೆದು ತಮ್ಮ ಶಕ್ತಿ ತೋರಿಸುತ್ತವೆ.
ದೈವಾರಾಧನೆ ಬಗ್ಗೆ ಸರಿಯಾದ ಮಾಹಿತಿಯನ್ನು ಜನಸಾಮಾನ್ಯರಿಗೆ ಕೊಟ್ಟು ಅರ್ಥ ಪೂರ್ಣ ಬದುಕು ಸಾಗಿಸೋಣ.
ಪಟ್ಟ, ಗಡಿ ,ಭಾಮಾ , ಆಗದೆ ದೈವಾರಾಧನೆ ನಿಷಿದ್ಧ. ಪ್ರಧಾನಮಂತ್ರಿ ಇಲ್ಲದ ದೇಶದಂತೆ.
ದೈವಾರಾಧಕರು – ಚಿಂತನ ಮಂಥನ ಮಾಡಿ ಅನುಷ್ಠಾನ ಮಾಡೋಣ
ತಪ್ಪು ಮಾಡಿದವರಿಗೆ ನೂರಕ್ಕೆ ನೂರು ಶಿಕ್ಷೆ ಆದರೆ ನಾವು ನಿಂತ ನೆಲ ಸ್ವರ್ಗ.