ಅವ್ಯಕ್ತ ವಚನಗಳು – ಬದುಕು (ನಿತ್ಯೋತ್ಸವ) – ಭಾಗ 2

ಶೇರ್ ಮಾಡಿ

ಕನ್ನಡಿಯಿದ್ದೊಡೆ ಮುಖ ಕಾಂಬೆ
ಧರ್ಮದ ಅರಿವಿದ್ದೊಡೆ ಜೀವನ ಕಾಂಬೆ
ಪ್ರಶ್ನೆ ಪತ್ರಿಕೆ ಉತ್ತರವಿಲ್ಲದಿರುತಿರೆ ಮೌಲ್ಯಮಾಪನವೆಂತು ………………………….ಅವ್ಯಕ್ತ

ಮಣ್ಣಿನ ಗೊಂಬೆಗಳ ಬಂದುಗಳೆಂಬೆ
ಪುಡಿಯಾದೊಡೆ ಅರಣ್ಯರೋದನ ಮಾಲ್ಪೆ
ನೀ ಮಣ್ಣಿನ ಗೊಂಬೆ ಎಂಬುದ ಮರೆತೆಯಾ …………………………………………..ಅವ್ಯಕ್ತ

ಬಾಟಲಿ ನೀರು ಪ್ರೀಯವಾಗಿರೆ
ಬಾಟಲಿ ಮದ್ಯ ಪ್ರೀಯವಾಗಿರೆ
ಬಾಟಲಿ ವಿಷ ಅನಗತ್ಯವೆಂದ ………………………………………………………….ಅವ್ಯಕ್ತ

ಆದರ್ಶ ಬದುಕು ಬಾಳಿದವರ ವಿಗ್ರಹವನ್ನಾಗಿಸಿ ಗುಡಿಯಲ್ಲಿರಿಸಿ ಪೂಜಿಸೆ
ಆದರ್ಶ ಬಾಳಿಗಾದವನ ಹಿಂಬಾಲಿಸೆ ವ್ಯಕ್ತಿ ಪೂಜೆ ಮಾಡುತಿರೆ
ಚಿನ್ನ ಮಣ್ಣಾಗಿಹುದು ಪ್ರಚಲಿತ ವಿದ್ಯಮಾನವೆಂದ ………………………………………ಅವ್ಯಕ್ತ

ಕೃಷಿ ಬದುಕು ಯಾಂತ್ರೀಕರಣ ಬದುಕು ಹಸನಾಗಿಹುದು
ವೈದ್ಯಪದ್ಧತಿ ಯಾಂತ್ರೀಕರಣ ಗಗನ ಕುಸುಮವಾಗಿಹುದು
ಚಿಂತನೆಗೊಳಗಾಗದ ಯಾಂತ್ರೀಕರಣ ಬೇಕೇ ……………………………………………ಅವ್ಯಕ್ತ

ಪರ್ವತ ಏರುತಿರುವ ಬೆಂಕಿ ಜ್ವಾಲೆ ನೋಡಾ
ಪರ್ವತದಿಂದ ದುಮುಕುತಿರುವ ಜಲಧಾರೆ ನೋಡಾ
ಚಂಚಲೆ ಗಾಳಿಗೆ ಬದುಕು ಬಲಿಕೊಡಬೇಡವೆಂದ ………………………………………….ಅವ್ಯಕ್ತ

ದಾರಿ ತಪ್ಪಿದ ಶ್ರಾವಕರ ದಾರಿಕಾಣಿಪಾ ಸಂತರಿರೆ
ದಾರಿ ತಪ್ಪಿದ ಶ್ರಾವಕರ ದಾರಿಕಾಣಿಪಾ ಶ್ರಾವಕರಿರೆ
ಗುರು ನಿಂದೆ ಮುನಿ ನಿಂದೆ ಪಾಪ ಬಾಧಿಪುದೆ …………………………………………….ಅವ್ಯಕ್ತ

ಬಾಳಲ್ಲಿ ಉದದವರು ಊದುತಿಹರು ವೇದಿಕೆಯಲ್ಲಿ
ವೇದಿಕೆ ತನು ಮನ ಧನ ಪೋಲಾಗುವ ವೇದಿಕೆಯಾಗಿಹುದು
ವೇದಿಕೆ ಏರುವ ಚಪಲ ಬಾಳಿಗೊಂದು ಶಾಪವೇ …………………………………………..ಅವ್ಯಕ್ತ

ದುಡಿಯುವ ಜನರು ಮೆರವಣಿಗೆಯಲ್ಲಿ ಸಾಗುತಿಹರು
ದುಡಿಸುವಾತ ಮೆರವಣಿಗೆಯ ನೇತ್ರತ್ವ ವಹಿಸುತಿಹನು
ಸೋಮಾರಿ ಸೋಮಾರಿಗಳ ಜಾತ ನಿತ್ಯ ಜಾತ್ರೆಎಂಬ ಅಣುಸಮರ…………………………ಅವ್ಯಕ್ತ

ಮೌನ ವ್ರತ ಬಾಯಿ ಮಾಲಿನ್ಯ ತಡೆ
ದೃಷ್ಟಿ ವ್ರತ ಕೇಳುವ ವ್ರತ ವೈರಿಗಳ ಪ್ರವೇಶಕ್ಕೆ ತಡೆ
ವ್ರತಾಚರಣೆ ಇಲ್ಲದ ಬಾಳು ಗೋಳು ………………………………………………………….ಅವ್ಯಕ್ತ

ಭಜನೆ ಬರೆದು ಹಾಡಿದವರು ಸ್ವರ್ಗದಲ್ಲಿಹರು
ಬರೆದ ಭಜನೆ ಹಾಡಿದವರು ಭೂಮಿಯಲ್ಲಿಹರು
ಭಜನೆ ಹಾಡು ಹಡದವರು ನರಕದಲ್ಲಿಹರು ……………………………………………………ಅವ್ಯಕ್ತ

ಮಾನವ ಬದುಕು ದಾನವ ಬದುಕು ಪೇಪರು ಬದುಕು ಅಧಿಕಾರ ಬದುಕು
ವಿಭಿನ್ನ ಭಾವಚಿತ್ರಗಳಲ್ಲಿ ತೊಳಲಾಡುತಿರುವ ನಿತ್ಯ ಬದುಕು
ಹಿಂದು ಮುಂದಿನ ಅರಿವಿಲ್ಲದ ಬದುಕು ಕತ್ತಲಾಗುವ ಬದುಕಿನ ಕೂಗು …………………………ಅವ್ಯಕ್ತ

See also  Nayana Mahaveer

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?