ದೈವದ ಯಜಮಾನ ಯಾರು

ಶೇರ್ ಮಾಡಿ

ಒಂದು ಅರಸು ಕ್ಷೇತ್ರದಲ್ಲಿ ಪಟ್ಟವಾದ ಕೂಡಲೇ ಅರಸು ದೈವ ಪರಿಚಾರಕರು ಮತ್ತು ಆಡಳಿತ ವರ್ಗದವರನ್ನು ಕರೆದು ಈ ಕ್ಷೇತ್ರದಲ್ಲಿ ಯಜಮಾನರು ಯಾರು ಎಂಬ ಪ್ರಶ್ನೆಯನ್ನು ಕೇಳಿದಾಗ ಸೇರಿದ ೧೪ ಮಂದಿಯಲ್ಲಿ ೧೩ ಮಂದಿ ಬೇರೆ ಬೇರೆ ಹೆಸರುಗಳನ್ನೂ ಸೂಚಿಸಿ ಅದಕ್ಕೆ ಅವರದ್ದೇ ಆದ ಸಮಜಾಯಿಸಿ ಕೊಟ್ಟರು. ಅವರ ಪೈಕಿ ಒಬ್ಬ ಮಾತ್ರ ಯಜಮಾನರು ಅರಸರು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ಒಂದು ಉದಾರಣೆಯಿಂದ ಶೇಕಡಾ ೭ % ಜನರಿಗೆ ಮಾತ್ರ ದೈವದ ಯಜಮಾನ ಬಗ್ಗೆ ತಿಳಿದಿದೆ. ಹಾಗಾದರೆ ದೈವದ ಬಗ್ಗೆ , ಪಾರ್ದನದ ಬಗ್ಗೆ , ಆಂತರಿಕ ಮತ್ತು ಬಾಹ್ಯ ಸ್ವಚ್ಛತೆ ಬಗ್ಗೆ , ನುಡಿಕಟ್ಟು ಬಗ್ಗೆ, ಗುತ್ತು ಬಾರಿಕೆಯವರ ಬಗ್ಗೆ, ದೈವ ಶಕ್ತಿ ಬಗ್ಗೆ ………………………….ಇತ್ಯಾದಿ ಖಂಡಿತಾ ೭ % ಕಿಂತಲೂ ಕಡಿಮೆಯೇ ತಿಳಿದಿರಬೇಕು. ನಿಜ ಅರ್ಥದಲ್ಲಿ ಅದು ಸೊನ್ನೆಯ ಆಸುಪಾಸಿನಲ್ಲಿ ಇರಬಹುದು. ದೈವಾರಾಧನೆಯ ಈ ಪವಿತ್ರ ಕೆಲಸದಲ್ಲಿ ತೊಡಗಿಕೊಂಡಿರುವ ನಾವೆಲ್ಲ ಸ್ವಾರ್ಥ ಉದ್ಯೋಗಿಗಳು. ಇದಕ್ಕಿಂತ ದೊಡ್ಡದಾದ ಅನಾಚಾರ, ಭ್ರಷ್ಟಾಚಾರ ……………..ಪ್ರಪಂಚದಲ್ಲಿ ಬೇರೆ ಎಲ್ಲಿಯಿಯಾದರು ಇರಬಹುದೇ.?
ಇದು ಖಂಡಿತಾ ಜನಸಾಮಾನ್ಯರ ತಪ್ಪಲ್ಲ. ಬದುಕಿನ ಎಲ್ಲಾ ಮಜಲುಗಳನ್ನು ಸರಿಯಾಗಿ ಸ್ಪಷ್ಟವಾಗಿ ಅರಿವು ಮೂಡಿಸುವ ಶಿಕ್ಷಣ ಪದ್ಧತಿ ನಮ್ಮಲ್ಲಿ ಇರುತಿದ್ದರೆ ಭವ್ಯ ಭಾರತ ದೇಶದ ಪ್ರಜೆಗಳ ಬದುಕು ನರಕವಾಗುತಿರಲಿಲ್ಲ. ನಮಗೆ ಬೇಕಾದ – ದೇವರು , ದೈವ, ಜ್ಯೋತಿಸ್ಯ , ವಾಸ್ತು, ಶಿಕ್ಷಣ, ಪ್ರಜಾಪ್ರಭುತ್ವ, ನ್ಯಾಯಾಂಗ …………..ಇತ್ಯಾದಿಗಳ ಬಗ್ಗೆ ನಮ್ಮನ್ನು ಕುರುಡರನ್ನಾಗಿಸಿ, ನಮಗೆ ಬದುಕಿಗೆ ಯಾವತ್ತೂ ಕೂಡ ಬೇಡವಾದ ವಿಷಯಗಳನ್ನು ತುಂಬಿ ನಮ್ಮನ್ನು ನಾವೇ ಜೀವಂತ ಕೊಲೆ ಮಾಡುವ ಮನೋಸ್ಥಿತಿ ವಿದ್ಯಾವಂತರ ವಸ್ತು ಸ್ಥಿತಿ
ಯಜಮಾನ ಚಾಲಕನಿದ್ದಂತೆ. ಅವನ ಕೊರತೆ, ಅವನ ಸ್ಥಾನದಲ್ಲಿ ಅನ್ಯರ ಉಪಸ್ಥಿತಿ – ಏನೆಲ್ಲಾ ಅನಾಹುತಗಳು ಆಗಬಹುದು ಎನ್ನುವುದಕ್ಕೆ ಪ್ರಸ್ತುತ ನಾವು ನಡೆಸಿಕೊಂಡು ಬರುವ ದೈವಾರಾಧನೆ ಜೀವಂತ ಸಾಕ್ಷಿ.
ನಮ್ಮ ವಿಭಿನ್ನ ಮೂಲಗಳಿಂದ ಬಂದ ಕೆಲ ಮಾಹಿತಿ ಚಿಂತನ ಮಂಥನ ಅನುಷ್ಠಾನಕ್ಕಾಗಿ
ಮೂಲ ದೈವಾರಾಧನೆಯಲ್ಲಿ ಯಾರು ಯಾರಿಗೆ ಸ್ಥಾನ ಮಾನ ಕೊಟ್ಟಿದ್ದನ್ನು ಮಾತ್ರ ಉಳಿಸಿ ದೈವಾರಾಧನೆ ನಡೆಸಿ
ಮನೆಯಲ್ಲಿ, ಕುಟುಂಬದಲ್ಲಿ ಹಿರಿಯವನಿಗೆ – ಅವನ ಅಪ್ಪಣೆ ಮೇರೆಗೆ ಮಾತ್ರ ಅನ್ಯರಿಗೆ
ಊರಿನ ದೈವಾರಾಧನೆಯಲ್ಲಿ ಗುತ್ತಿನವನಿಗೆ ಮಾತ್ರ – ಅದು ಊರಿನಗುತ್ತು, ಸಿಮೆಗುತ್ತಿಗೆ ಅವಕಾಶವಿಲ್ಲ
ಸೀಮೆ ಗುತ್ತಿನಲ್ಲಿ ಸೀಮೆ ಗುತ್ತಿನವನಿಗೇ ಮಾತ್ರ
ಅರಸು ವ್ಯಾಪ್ತಿಯಲ್ಲಿ ಪಟ್ಟವಾದ ಅರಸನಿಗೆ ಮಾತ್ರ
ಬೂಲ್ಯೇ ,ಗಡಿ . ಭಾಮಾ , ಪಟ್ಟ ……….. ಇತ್ಯಾದಿಗಳು ವಿಭಿನ್ನ ಸ್ಥಾನಗಳ ಹೆಸರುಗಳು. ಈ ಸ್ಥಾನಗಳನ್ನು ಅಲಂಕರಿಸಿಸಬೇಕಾದರೆ ಪ್ರಮಾಣವಚನ ಸ್ವೀಕಾರವೇ – ನಿರ್ದಿಷ್ಟ ದೈವಗಳ ಮುಂದೆ ತನ್ನ ಬದ್ಧತೆಯನ್ನು ದೈವ ಸಾಕ್ಷಿಯೊಂದಿಗೆ ದೃಡೀಕರಿಸುವುದು.
ದೈವಾರಾಧನೆ ಎಂಬ ಪರಮ ಪವಿತ್ರ ಕ್ಷೇತವನ್ನು ಸ್ವಾರ್ಥ ದೃಷ್ಟಿಯಿಂದ ಇಂದಿನವರೆಗೆ ಸರ್ವನಾಶ ಮಾಡಿದ್ದು ಸಾಕು.
ಮಾನವಕುಲಕೋಟಿಯ ಸುಖ ಶಾಂತಿ ನೆಮ್ಮದಿ ಬಲಿಗಾಗಿ – ನಮ್ಮಲಿರುವ ಸ್ವಾರ್ಥನ್ನು ಮಾತ್ರ ತ್ಯಾಗ ಮಾಡುವ

See also  ಇಚಿಲಂಪಾಡಿ ಗ್ರಾಮದ ವ್ಯಾಪ್ತಿಯಲ್ಲಿರುವ ಮಾನವ ಬಂಧುಗಳೆ -

.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?