ಮನೆಯಲ್ಲಿ ಮನೆಯವರೊಂದಿಗೆ ಮನಸ್ಸಿನಲ್ಲಿ ದೈವ ಅಂದು ನೆಲೆಸಿತ್ತು. ಮನೆಯಿಂದ ದೈವವನ್ನು ಹೊರಹಾಕಿ , ಮನೆಯವರಿಂದ ಹೊರಹಾಕಲ್ಪಟ್ಟು , ಮನಸಿನಿಂದಲೂ ದೂರವಾದ ದೈವ – ಶ್ರದ್ದೆ ಭಕ್ತಿ ನಂಬಿಕೆಯಿಂದಲೂ ದೂರವಾಗಿ – ಅನ್ಯೋನ್ಯತೆ ನಿಕಟಸಂಪರ್ಕದ ಅಭಾವ – ದೈವ ಒಂದು ಕಡೆ, ಮಾನವರು ಇನ್ನೊಂದು ಕಡೆ ಬದುಕುವ ಪರಿ – ಪ್ರಸ್ತುತ ದುರಂತಕ್ಕೆ ಹಿಡಿದ ಕೈಗನ್ನಡಿ. ನಮಗೆ ದೈವ ಪವಾಡದ ಫಲ, ದೈವ ಶಕ್ತಿಯ ಪ್ರಯೋಜನ ಪಡೆಯುವಂತಾಗಲು ನಾವು ಮಾಡಬೇಕಾದ ಕೆಲಸ ಕಾರ್ಯಗತ್ತ ಚಿತ್ತ ಹರಿಸೋಣ.
ನಮ್ಮ ಹಿರಿಯರಿಗೆ ದೈವ ದೇವರೇ ಅಸ್ತಿ . ಇಂದು ನಮಗೆ ಹಣ ಅಂತಸ್ತು ಜಮೀನು ….ಇತ್ಯಾದಿ ಬಾಹ್ಯ ಸಂಪತ್ತುಗಳೇ ನಮ್ಮ ಅಸ್ತಿ. ನಿಜವಾದ ನಮ್ಮ ಅಸ್ತಿ ಬಗ್ಗೆ ನಮಗೆ ಅರಿವು ಹುಟ್ಟಬೇಕು. ದೈವ ದೇವರು ಕೊಟ್ಟರೆ ಮಾತ್ರ ನಮಗೆ.
ಅಂದಿನವರ ದೈವ ದೇವರ ಒಡನಾಟ ನಿತ್ಯ ನಿರಂತರ. ನಮಗೆ ಅದಕ್ಕೆ ಮಾತ್ರ ಪೂರೋಸೋತಿಲ್ಲ. ಬಾಕಿ ಎಲ್ಲದಕ್ಕೂ ಸಮಯವನ್ನು ಮೀಸಲಿಟ್ಟು ಅನ್ಯ ಕೆಲಸ ಮಾಡುತೇವೆ. ನಾವು ಕೊಟ್ಟದನ್ನೇ ನಾವು ಪಡೆಯುತೇವೆ.
ಇಂದು ಪ್ರತಿಯೊಬ್ಬರ ಬೇಡಿಕೆ ಸ್ವಾರ್ಥ. ಅಂದಿನವರ ಬೇಡಿಕೆ ತ್ಯಾಗ ಬೇಡಿಕೆ – ಮಾನವರಿಗಾಗಿ, ಜೀವರಾಶಿಗಳಿಗಾಗಿ
ನಮ್ಮ ಶಕ್ತಿ ಸಾಮರ್ಥ್ಯಕ್ಕೆ ಬೆಲೆ ತೆತ್ತು ಸೋತಾಗ ದೈವಕ್ಕೆ ಮೊರೆ – ಅಂದು – ನೀನೆ ಸೂತ್ರಧಾರಿ ನಾನು ಪಾತ್ರದಾರಿ
ದೈವ ಶಕ್ತಿ ಸಾಮರ್ಥ್ಯ ಗಣನೆಗೆ ತೆಗೆದುಕೊಂಡು ನಮ್ಮ ಮೊರೆ – ಅಂದು ದೈವದ ಪರೀಕ್ಷೆ ನಮ್ಮವರಿಂದ ಆಗುತಿರಲಿಲ್ಲ
ಅಂದಿನವರಿಗೆ ಏಕಮಾತ್ರ ಮಾರ್ಗ – ಇಂದಿನವರಿಗೆ ಸೋತಾಗ , ಕೈಮಿಗಿಲಾದಾಗ ಮಾತ್ರ ಇತ್ತ ಒಲವು
ಮಾನವಕುಲಕೋಟಿಗೆ ೧೦೦ ಶೇಕಡಾ – ಶ್ರದೆ ಭಕ್ತಿ ನಂಬಿಕೆ – ಇಂದು ೧೦ ಶೇಕಡಕಿಂತ ಕೆಳಗೆ.
ಮನೆಯ ದೈವ ದೇವರಿಗೆ ಪ್ರಥಮ ಪ್ರಾಶಸ್ತ್ಯ.ಇಂದು ಕೊನೆಯ ಪ್ರಾಶಸ್ತ್ಯ
ಅಂದು ಎಲ್ಲವು ದೈವ ದೇವರ ಕೊಡುಗೆ – ಇಂದು ಎಲ್ಲವು ನನ್ನ ಗಳಿಕೆ
ನನ್ನೊಟ್ಟಿಗೆ ಮಹಾಶಕ್ತಿಯೊಂದಿದೆ ಎಂಬ ಅರಿವಿತ್ತು – ಇಂದು ಹಣ ಬಲ ಜನ ಬಲ ……….. ಅರಿವು ಮಾತ್ರ
ನಾವು ಅಂದು ಮಾನವರು – ಇಂದು ಯಂತ್ರ ಮಾನವರು
ದೈವ ಅಂದು ಉಪಕಾರಿ – ಇಂದು ಅಪಕಾರಿ – ಇದು ನಮ್ಮ ಕೊಡುಗೆ -ನಿರಂತರ ಒಡನಾಟ – ಸೂಕ್ತ ಪರಿಹಾರ
ದೈವ ಇಚ್ಛೆ – ದೇವರ ಇಚ್ಛೆ – ಮಾನವರ ಇಚ್ಛೆ ಒಂದಾದಾಗ – ಸಕಲವೂ ಸಾಧ್ಯ
ನನ್ನ ಬೆನ್ನು ನಾನು ನೋಡಿದಾಗ ಲೋಕ ಸುಂದರ
ನಾವು ದೇವರ ಮಕಳಾಗಿ ಒಂದಾಗಿ ಬಾಳಿದಾಗ – ನಾವು ನಿಂತ ನೆಲ ಸ್ವರ್ಗ – ಸ್ವರ್ಗದ ಕನಸು ನನಸಾಗಿಸೋಣ