ಜಲಕ್ರೀಡೆ ಮಾನವ ಜನಾಂಗದ ಅತ್ಯಂತ ಮೋಜಿನ ಆಟಗಳ ಪೈಕಿ ಮೊದಲನೆಯದು. ಇದಕ್ಕೆ ಅತಿ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಆನಂದ ಉಲ್ಲಾಸದೊಂದಿಗೆ ನೆಮ್ಮದಿಯನ್ನು ತರಬಲ್ಲುದು. ಸುಮಾರು ೪೦ ರಿಂದ ೫೦ ವರುಷಗಳ ಹಿಂದೆ ಜಲಕ್ರೀಡೆಗೆ ಪೂರಕವಾದ ವಾತಾವರಣ ನಮ್ಮ ಸುತ್ತುಮುತ್ತ ಇತ್ತು . ಕೆರೆಗಳು , ಕಟ್ಟಗಳು , ಹೊಳೆಗಳು……… ಇತ್ಯಾದಿಗಳ ನಿಕಟ ಸಂಪರ್ಕ ವಿಪುಲ ಅವಕಾಶ ಕಲ್ಪಿಸುತಿತ್ತು . ಕಾಲದ ವಿಷ ವರ್ತುಲಕ್ಕೆ ಸಿಕ್ಕ ನಮ್ಮ ಬದುಕು ಬೋರವೆಲ್ಲುಗಳ ಹಾವಳಿ ನೀರಿನಲ್ಲಿ ಆಟವಾಡುವ ಅವಕಾಶಗಳು ಗಗನ ಕುಸುಮವಾಗಿ – ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಮಾಡುವ ಅತಿಯಾದ ಆತುರ – ಯುವ ಶಕ್ತಿಯನ್ನು – ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಜಲಕ್ರೀಡೆ ಮರಣ ಮೃದಂಗ ಬಾರಿಸುತಿದೆ. ಇದನ್ನು ಅರಿಯೋಣ. ಪರಿಹಾರದತ್ತ ಚಿತ್ತ ಹರಿಸೋಣ ಈ ಒಂದು ವಿಷಯದ ಬಗ್ಗೆ ಸಮಾನ ಚಿಂತಕರ ಚಾವಡಿಯಿಂದ ಬಂದ ಅಭಿಪ್ರಾಯಗಳು.
ಸುಮಾರು ೪೦-೨೦- ೫ ಉದ್ದ ಅಗಲ ಎತ್ತರದ ಟ್ಯಾಂಕಿ ಸಾಮಾನ್ಯ ದೇವಾಲಯದಲ್ಲಿ ಸಾಕು
ಸುಮಾರು ೧೦ ಜನರಿಗೆ ಏಕಕಾಲದಲ್ಲಿ ಅವಕಾಶ ಕಲ್ಪಿಸಬಹುದು
ಸಮಯದ ಆಧಾರದಲ್ಲಿ ಅರ್ದದಿಂದ ಒಂದು ಗಂಟೆಯ ತನಕ ಒಬ್ಬರಿಗೆ ಕಾಲಾವಕಾಶ ಕೊಡಬಹುದು
ತಿಂಗಳಿಗೆ/ ದಿನಕ್ಕೆ / ಗಂಟೆಗೆ / ವಾರಕ್ಕೆ -ಒಬ್ಬನಿಗೆ ನಿಗದಿತ ಶುಲ್ಕವಿಧಿಸಿದರೆ ಒಳ್ಳೆಯ ಆದಾಯ
ಮಕ್ಕಳು ಮತ್ತು ಯುವ ಜನಾಂಗವನ್ನು ಕರೆತರುವ ನೂತನ ಆವಿಸ್ಕಾರ
ಸದ್ರಡ ದೇಹದ ಬೆಳವಣಿಗೆ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕ
ಬಾಹ್ಯ ಸ್ವಚ್ಛತೆ ಮತ್ತು ಆಂತರಿಕ ಸ್ವಚೆತೆಗೆ ಪೂರಕ ವಾತಾವರಣ
ಜಲಕ್ರೀಡೆಗೆ ಸಿಕ್ಕಿರುವ ಅವಕಾಶ ಉತ್ತಮ ಅಂತರಾಷ್ಟ್ರೀಯ ಕ್ರೀಡಾಪಟುಗಳ ಸೃಷ್ಟಿಗೆ ಒತ್ತು
ದೇವಾಲಯದ ಮೂಲಉದ್ದೇಶ ಈಡೇರಿಸಿದ ತೃಪ್ತಿ.
ದೇವಾಲಯವೇ ಅಂದಿನ ಶಿಕ್ಷಣಾಲಯ – ಪರಿಪೂರ್ಣದತ್ತ ದಾಪುಗಾಲು
ಗರಿಷ್ಠ ೨೦ ಲಕ್ಷಕ್ಕಿಂತ ಹೆಚ್ಚು ವೆಚ್ಚ ಮಾಡಿ ಮನೆ ಕಟ್ಟುವ ಕೃಷಿಕರು ಜಲಕ್ರೀಡೆ ಈಜುಕೊಳಕ್ಕೆ ಅರ್ಹರು
ರೋಗ ಮುಕ್ತ -ಸುಖ ಶಾಂತಿ ನೆಮ್ಮದಿ ಬದುಕಿಗೆ ಇದು ಅನಿವಾರ್ಯ
ಜಲಕ್ರೀಡೆಗೆ ಹೋಗಿ ನಿಧನವಾದವರಿಗೆ ನಮ್ಮ ಶ್ರದ್ದಾಂಜಲಿ – ಜಲಕ್ರೀಡೆಗಾಗಿ ಈಜುಕೊಳ ಒಂದೇ