ತನ್ನ ಕಂಬಾತ ಏರುತಿಹನು
ಅನ್ಯ ಕಂಬಾತ ಇಳಿಯುತಿಹನು
ನಿನ್ನ ಕಂಬಾತ ಹಾರುತಿಹನು ………………………..ಅವ್ಯಕ್ತ
ಬಾಳಿನಲ್ಲಿ ಒಮ್ಮೆ ಮಾತ್ರ ಒಬ್ಬರಿಗೆ ಸಿಗುವ ಅವಕಾಶ ಎಂಬ ತಾನೇ ಕಟ್ಟಿಕೊಂಡ ಕಲ್ಪನಾ ಲೋಕದಲ್ಲಿ ಮುಳುಗಿ ಹೋಗಿರುವ ಪ್ರಸ್ತುತ ಬಹುತೇಕ ಮಾನವರು ಅದ್ದೂರಿ ಆಡಂಬರದ ಮದುವೆಗೆ ಜೋತು ಬಿದ್ದು – ಹಣ ಇದ್ದವರು ಇಲ್ಲದವರು ತನ್ನ ಕೈ ಮೇಲಾಗಬೇಕೆಂಬ ಹೆಬ್ಬಯಕೆ ಈಡೇರಿಸುತಿದ್ದರೆ. ಇದಕ್ಕೆ ಸವಾಲಾಗಿ ನಿಂತು – ವಿವಾಹ ವಿಚ್ಛೇದನ ಎಂಬ ಕರೆಗಂಟೆ – ತನ್ನ ಕೈ ಕೂಡ ಯಾಕೆ ಮೇಲಾಗಬಾರದು – ಎಂದು ತಿಳಿದು ದಾಪುಗಾಲು ಇಡುತಿರುವುದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ.
ನಾವು ಇಂದು ಹೆಸರಿಗೆ ಮಾತ್ರ ಸ್ವದೇಶೀ – ನಾವು ವಿದೇಶಿ ಮುಖವಾಡ ಹಾಕಿಕೊಂಡು ಬದುಕುತ್ತಿದ್ದೇವೆ. ಇಂದು ಮದುವೆ – ನಾಳೆ ವಿಚ್ಛೇದನ – ನಾಡಿದ್ದು ಮರುಮದುವೆ – ಇದು ವಿದೇಶಿ ಸಂಸ್ಕೃತಿ – ನಮಗೆ ಈ ರೋಗ ಪ್ರಾರಂಭವಾಗಿ ಪ್ರಥಮ ಹಂತದಲ್ಲಿ ಮಾತ್ರ ಇದೆ . ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೋಗ ನಿರೋಧಕ ಮದ್ದು ಆವಿಸ್ಕಾರಮಾಡಿ, ಆದಷ್ಟು ಬೇಗ ರೋಗ ಪೀಡಿತರಿಗೆ ಚುಚ್ಚು ಮದ್ದು ರೂಪದಲ್ಲಿ ಕೊಡದೆ ಹೋದಲ್ಲಿ ಕೆಟ್ಟ ಪ್ರಾಣಿಗಳ ಬದುಕು ನಮ್ಮ ಪಾಲಿಗೆ ಬರುತದೆ.
ಇದು ಕೋರೋಣ ರೋಗಕ್ಕಿಂತಲೂ ಅತಿ ಮಾರಕ, ನನ್ನ ಮನೆಗೆ ಬರಲಿಲ್ಲ ಎಂದು ಯಾರು ಕೂಡ ತಟಸ್ಥರಾಗದೆ – ನಾವೆಲ್ಲರೂ ಒಂದಾಗಿ – ಚಿಂತನ ಮಂಥನ ಅನುಷ್ಠಾನದತ್ತ – ಮುನ್ನುಗ್ಗೋಣ
ವಿಚ್ಛೇದನ ರೋಗವನ್ನು ಅತಿ ಹೆಚ್ಚು ಹರಡುವ ಕೆಲಸವನ್ನು ಮೊಬೈಲ್ ಮಾಡುತಿರುವುದರಿಂದ – ಮದ್ದನ್ನು ಕೊಡುವ ಕೆಲಸವನ್ನು ಮೊಬೈಲಿಗೆ ಕೊಟ್ಟರೆ ಒಳಿತೆಂದು – ಮೊಬೈಲಿನ ಆಯ್ಕೆ ಮಾಡಲಾಗಿದೆ.
ಇದು ನಾವು ಆವಿಸ್ಕಾರ ಮಡಿದ ಮದ್ದು ಕಂಡಿತಾ ಅಲ್ಲ. ನಮಗೆ ಬೇರೆ ಬೇರೆ ಮೂಳಗಳಿಂದ ಕಲೆಹಾಕಿದುದನ್ನು ನಮ್ಮೊಳಗೇ ಹಂಚಿಕೊಳ್ಳುತಿದ್ದೇವೆ. ವಿಚ್ಛೇದನದ ಅಮಲು ತಾರಕಕ್ಕೇರಿರುವ ಬಂಡುಗಳೇ – ನಿಮ್ಮ ಮನ ನೋಯಿಸುವ ಹಂಬಲ ನಮಗಿಲ್ಲ. ಸರಿಯಾದ ಸ್ಪಷ್ಟವಾದ ನಮ್ಮ ಅರಿವಿಗೆ ಬಂದುದನ್ನು ಹೇಳುವ ಹಕ್ಕು ನಮಗಿದೆ. ಅಮೃತ ವಿಷ ಆಯ್ಕೆ ಅವರವರಿಗೆ ಬಿಟ್ಟದ್ದು.
ದೈವ ದೇವರ ಪ್ರಕೃತಿಯ ಜೊತೆಗೆ ಸಹಚಿಂತಕರ – ಅಭಯ ಹಸ್ತ ಮತ್ತು ಬೆಂಬಲದೊಂದಿಗೆ – ಮನವಿ – ಒಳಿತಿಗಾಗಿ
ಹುಟ್ಟು ಸಾವು ಬದುಕಿನಲ್ಲಿ ನಮ್ಮ ಟ್ರ್ಯಾಕಿನಲ್ಲಿ ನಾವು ಓಡಿದರೆ – ನಮ್ಮದು ಸ್ವರ್ಗದ ಬದುಕು
ನಿಮ್ಮ ಕಾರನ್ನು ನೀವು ಓಡಿಸಿ – ಅನ್ಯರ ಕಾರನ್ನು ನೀವು ಕಂಡಿತಾ ಬೇಡ
ಪ್ರಪಂಚದಲ್ಲಿರುವ ಯಾವುದೇ ಜಾತಿ ಧರ್ಮವನ್ನು ನೀವು ಪಾಲಿಸುತಿದ್ದರೆ, ಅದುವೇ ವಿಚ್ಛೇದನಕ್ಕೆ ಮದ್ದು
ಅಧಿಕಾರ ಚಲಾಯಿಸುವುದು ದಾಂಪತ್ಯ ಜೀವನಕ್ಕೆ ಮಾರಕ
ಸಹ ಚಿಂತೆನೆ ಸಹ ಬಾಳುವೆ ದಾಂಪತ್ಯದ ಮರ್ಮ
ಅನ್ಯ ಮಾನವರಲ್ಲಿ , ಜೀವರಾಶಿಗಳಲ್ಲಿ ದೇವರನ್ನು ಕಾಣುವುದು ಬದುಕಿನ ರಾಜ ರಸ್ತೆ
ಚಪ್ಪಾಳೆಗೆ ಎರಡು ಕೈಗಳು ಅಗತ್ಯ – ಸರಸ ವಿರಸ ಎರಡಕ್ಕೂ ಇಬ್ಬರು ಬದ್ಧರು
ಹುಟ್ಟು ಸಾವು ಮದುವೆ ಮಕ್ಕಳು ಬಂದುಗಳು – ದೈವ ದೇವರ ಪ್ರಕೃತಿಯ ವರ – ಪಾಲಿಸೋಣ