ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಿಗದಿತ ದಿನದಂದು ಮತ್ತು ಕೆಲವು ಸ್ಥಳಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಶಾಲೆಗಳ ರಜಾದಿನದಲ್ಲಿ ನಡೆಯುತಿರುವುದು ವಾಡಿಕೆ ಹಲವಾರು ವರುಷಗಳಿಂದ ನಡೆದುಕೊಂಡು ಬರುತಿದೆ. ದೀಪ ಬೆಳಗಿಸುವುದರಿಂದ ಪ್ರಾರಂಭಗೊಂಡು ಪೂಜೆ ಆಟೋಟ ಸ್ಪರ್ಧೆಗಳು ಮುಗಿದ ಬಳಿಕ ಸಭಾ ಕಾರ್ಯಕ್ರಮದೊಂದಿಗೆ ವಾರ್ಷಿಕ ಜನ್ಮಾಷ್ಟಮಿ ಹಬ್ಬ ಕೊನೆಗೊಳ್ಳುತದೆ. ಚಿಂತಕರ ಚಾವಡಿಯಲ್ಲಿ ಪ್ರಕಟವಾದ, ಸಂಗ್ರವಾದ ಜನಮನದ ಅಭಿಪ್ರಾಯದ ತುಣುಕುಗಳು ಇತ್ಯಾದಿಗಳನ್ನು ಸಂವಾದ ರೂಪದಲ್ಲಿ – ಈ ಹಬ್ಬ ಉತ್ತುಂಗ ಶಿಖರಕ್ಕೆ ಹೋಗುವಂತಾಗಲು ನಮ್ಮ ಪುಟ್ಟ ಕೊಡುಗೆ – ಮುಂದಕ್ಕೆ
ವಾರ್ಷಿಕ ಒಂದು ದಿನ ಆಚರಣೆಯ ಬದಲು ತಿಂಗಳಿಗೊಂದು ಕಾರ್ಯಕ್ರಮ ಬೇರೆ ಬೇರೆ ರೀತಿಯಲ್ಲಿ ಮಾಡಿದರೆ ಒಳಿತು . ಯಾಕೆ ಮಾಡುತಿಲ್ಲ ?
ಪೂಜಾ ವಿಭಾಗದ ವ್ಯವಸ್ಥೆ ಆಟೋಟ ಕ್ಷೇತ್ರ ಒಟ್ಟಾಗಿ ಬೆಳೆಯುತಿದೆ. ಸರಿಯಾದ ಮಾರ್ಗದರ್ಶನ ಮತ್ತು ಸಹಾಯ ಸಿಕ್ಕಿದರೆ ಮುನ್ನಡೆಸುವ ಹಂಬಲ ಇದೆ
ಯೌಟ್ಯೂಬ್ ಅಥವಾ ಫೇಸ್ಬುಕ್ ನೇರ ಪ್ರಸಾರ ಯಾ ತುಣುಕುಗಳಾಗಿ ವಿಂಗಡಿಸಿ ಪ್ರಚಾರಕ್ಕೆ ಯಾಕೆ ಒತ್ತು ಕೊಡುತಿಲ್ಲ?
ಧನಾತ್ಮಕ ಚಟುವಟಿಕೆಗಳ ಪ್ರಸಾರ ಕಿಸೆಗೆ ಹೊರೆಯಾಗಿದ್ದು ಋಣಾತ್ಮಕ ಚಟುವಟಿಕೆಗೆ ಪುಕ್ಕಟೆ ಪ್ರಕಟಣೆಗೆ ಮುಗಿಬೀಳುವ ಮಾಧ್ಯಮಗಳ ಇಂದಿನ ಬದುಕಿನ ಬದಲಾವಣೆ ಅನಿವಾರ್ಯದ ಜೊತೆಗೆ ನಾವು ಕೂಡ ಮುಂದಕ್ಕೆ ಇತ್ತ ಗಮನಹರಿಸುತ್ತೇವೆ
ಜನಾಕರ್ಷಣೆ ಮಾಡುವಲ್ಲಿ ಪ್ರಗತಿ ಸಾದಿಸಿದ ಈ ವೇದಿಕೆಯನ್ನು ಜನರ ಪ್ರಯೋಜನಕ್ಕಾಗಿ ಬಳಸುವ ಚಿಂತನೆ ಇದೆಯಾ ?
ಕೆಲವೊಂದು ಕ್ಷೇತ್ರಗಳಲ್ಲಿ ಮುಂದೆ ಸಾಗಿದ್ದು ಜನಾಭಿಪ್ರಾಯ ಕ್ರೂಡೀಕರಣದ ವ್ಯವಸ್ಥೆ ನಮಗೆ ದಾರಿದೀಪ. ಆಟೋಟಗಳಿಗೆ ಅವಕಾಶ, ವೇದಿಕೆಯ ಅನುಕೂಲತೆ.
ಇತ್ಯಾದಿಗಳೊಂದಿಗೆ ಒಲಿಂಪಿಕ್ಸ್ ಗುರುತಿಸಲ್ಪಟ್ಟ ಸ್ಪರ್ಧೆಗೆ ಪ್ರೋತ್ಸಹ ಕೊಡುವ ಇಂಗಿತ ನಮ್ಮಲ್ಲಿದೆ. ಪ್ರಕೃತಿದತ್ತ ಹೊಳೆ ನದಿ ಹೊಂಡಗಳ ಇಂದಿನ ಅಭಾವ ಜಲ ಕ್ರೀಡೆಗೆ ಕೊರತೆಯಾಗಿರುವ ಅವಕಾಶವನ್ನು ಮಳೆ ನೀರನ್ನು ಸಂಗ್ರಹಿಸುವ ಪ್ಲಾಸ್ಟಿಕ್ ಅವರಣಹೊಂದಿರುವ ಕೆರೆಗಳನ್ನು ಮಾಡುವ ಚಿಂತನೆ ಜಲಕ್ಷಾಮಕ್ಕೆ ಪರಿಹಾರ, ಮೀನು ಕೃಷಿಗೆ ಪೂರಕ, ಜಲಕ್ರೀಡೆಗಳಲ್ಲಿ ಮರಣಹೊಂದುವುದಕ್ಕೆ ತಡೆ ಮುಂತಾದ ಕನಸು ಸಹಕಾರಕ್ಕಾಗಿ ಕಾದುಕುಳಿತಿವೆ.
ತನು ಮನ ಧನ ಸದ್ಬಳಕೆ ಮಾಡಿದರೆ ಸಕಲವೂ ಸಾಧ್ಯ ಆದರೆ ಹಣವಿದ್ದರೆ ಮಾತ್ರ ಸಾಧ್ಯವೆಂಬ ಹಣೆಪಟ್ಟಿಯಿಂದ ಹೊರ ಬಂದು ಚಿಂತಿಸಿದರೆ?
ಹಸಿದವನಿಗೆ ಊಟ ತಿಂದು ತೇಗುತಿರುವವನಿಗೆ ಊಟ ಕಾಲಘಟ್ಟದಲ್ಲಿ ಬದುಕು ಸಾಗುತಿದೆ .ಎಲ್ಲ ಸಂಘಟನೆಗಳು ತಮ್ಮ ತಮ್ಮ ಹೆಸರಿನ ಜೊತೆಗೆ ಸೇವಾ ಒಕ್ಕೂಟ ಎಂಬ ನಾಮಕರಣವನ್ನು ಸೇರಿಸಿ – ವಿಪುಲವಾಗಿರುವ ಸೇವಾ ಕ್ಷೇತಗಳ ಹಸಿವಿಗೆ ಶಾಂತ್ವನ ಹೇಳಬೇಕಾಗಿದೆ.
ಸಭಾ ಕಾರ್ಯಕ್ರಮದಲ್ಲಿ ದೇವರ ಮೂರ್ತಿ ಯಾ ನಾಮಫಲಕ ಕೊಡುವ ಪದ್ಧತಿ ಕೆಲವರಿಗೆ ಅದಕ್ಕೋಸ್ಕರ ಜಮಉಗ್ರಾಣ ಬೇಕಾದ ಪರಿಸ್ಥಿತಿ ತಪ್ಪಿಸಲು ನಿತ್ಯ ಉಪಯೋಗಿ ಶಾಲು, ವ್ಯಾಪ್ತಿಯಲ್ಲಿ ಪ್ರಕಟಣೆಗೊಂಡ ಪುಸ್ತಕ ಇತ್ಯಾದಿ ಬಗ್ಗೆ ಚಿಂತನೆ ಮಾಡಬಹುದೇ?
ಮಾನವ ಬದುಕಿನಲ್ಲಿ ಪ್ರಗತಿಪರ ಚಿಂತನೆಗಳು ಕಾಲಘಟ್ಟದಲ್ಲಿ ಮಹತ್ವವನ್ನು ಕಳೆದುಕೊಂಡು ಆಗಬಹುದಾದ ಕಿರಿಕಿರಿಗಳಿಂದ ದೂರೀಕರಿಸಲು ಹೊಸ ಆವಿಸ್ಕಾರಗಳತ್ತ ದಾಪುಗಾಲು ಹಾಕುವ ಸಂಕಲ್ಪ ಇದೆ
ವಾರಕ್ಕೆ ಒಮ್ಮೆ ಯಾ ತಿಂಗಳಿಗೊಮ್ಮೆ ದೇವಾಲಯಗಳಲ್ಲಿ ಸೇರುವ ಸಾಧ್ಯವಾಗದಿದ್ದರೆ ದೇವಾಲಯದ ವಾರ್ಷಿಕ ಹಬ್ಬಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದೈವ ದೇವರ ಕೃಪೆ ಮತ್ತು ಹಿರಿಯರ ಬಯಕೆಗೆ ಸ್ಪಂದಿಸುವ ಬಗ್ಗೆ ?
ಒಂದು ಕೈಯಿಂದ ಚಪ್ಪಾಳೆ ಅಸಾಧ್ಯ – ಎರಡು ಕೈಗಳು ಸೇರಿದರೆ ಮಾತ್ರ ಎನ್ನುವ ಅನಿಸಿಕೆ ವ್ಯಕ್ತಪಡಿಸುತ್ತ – ಸೂಕ್ತ ಅಭಿವೃದ್ಧಿಶೀಲ ಚಟುವಟಿಕೆಗೆ ಸಹಕಾರ ಸದಾ ಇದೆ. ಅದಕ್ಕೆ ಬೇಕಾದ ಕಾರ್ಯ ಯೋಜನೆ ಹಾಕಿಕೊಂಡು ಮುನ್ನಡೆಸುವ ಸಂಕಲ್ಪ ದೇವಾಲಯದಿಂದ ಆಗಬೇಕಾಗಿದೆ.
ನಿತ್ಯ ನಿರಂತರ ಕೊಂಬು ವಾದ್ಯ ಸಿಡಿಮದ್ದು ದೈವ ದೇವಾಲಯದ ವಾರ್ಷಿಕ ಆಚರಣೆಯಲ್ಲಿ ಅನಿವಾರ್ಯವಾಗಿದ್ದರು ಆರ್ಥಿಕ ಕೊರತೆಯನ್ನು ಸರಿದೂಗಿಸಲು ಕನಿಷ್ಟಕ್ಕೆ ತಲುಪಿದ್ದು – ಸೇವಾ ಯಾ ಕೊಡುಗೆ ರೂಪದಲ್ಲಿ ಸಹಕಾರ ಕೊಟ್ಟು – ಗತಕಾಲದ ವೈಭವಕ್ಕೆ ಚಾಲನೆ ದೊರಕುವ ಕನಸು ನನಸಾಗಬಹುದೇ?
ಹಿರಿಯರು ಕಿರಿಯರು ಗಂಡು ಹೆಣ್ಣು ಬಡವ ಬಲ್ಲಿದ ಜಾತಿ ಭೇದ ಮೇಲು ಕೀಳು ಜೀತ ಪದ್ಧತಿ ಮುಂತಾದ ಅನಿಷ್ಟ ವಿಚಾರಗಳನ್ನು ಬದಿಗೊತ್ತಿ – ಸಹಕಾರ ಒಕ್ಕೂಟ ವ್ಯವಸ್ಥೆಯ ಕಟ್ಟುನಿಟ್ಟಿನ ಪಾಲನೆ – ಮನೋವೇಗವನ್ನು ತಮ್ಮದಾಗಿಸಲು ಮಾಡಬೇಕಾದ ಕರ್ತವ್ಯ ಪಾಲಿಸಿದಲ್ಲಿ ನಮ್ಮೊಟ್ಟಿಗೆ ನೀವಿದ್ದರೆ ನಾವು ನಿಮ್ಮೊಟ್ಟಿಗೆ ಸದಾ ಇರುವ ಭರವಸೆ ನಮ್ಮದು.
ಮುಂದುವರಿಯುವುದು