ದೈವಾಲಯಗಳ ಪ್ರಕಟಣೆಗೆ – ಉಚಿತ ಅವಕಾಶ

ಶೇರ್ ಮಾಡಿ

ಮಾತಾಡುವ ದೇವರೆಂಬ ನಮ್ಮ ಹಿರಿಯರ ಮಾತುಗಳು ಅಂದಿಗೆ ಮಾತ್ರ ಸತ್ಯ ಇಂದು ಮಿತ್ಯ ಎಂದು ಜನರು ಮಾತನಾಡುವ ಮಟ್ಟಿಗೆ ತಲುಪಿರುವುದು – ಕಾಲದ ಮಹಿಮೆ ಬದಲಾಗಿ – ಅಭಿವೃದ್ಧಿ ನೆಪದಲ್ಲಿ – ಶಿಕ್ಸಣ ಪದ್ದತಿಯ ವಿದೇಶಿ ನೀತಿಯನ್ನು ಕುರುಡಾಗಿ ಪಾಲಿಸಿ – ನಮ್ಮ ನೆಮ್ಮದಿ ಬದುಕಿಗೆ ಕೊಳ್ಳಿಯಿಟ್ಟು – ಪ್ರಸ್ತುತ ದೇವರಿಲ್ಲ, ದೈವವಿಲ್ಲ , ಬದುಕು ಕೂಡ ಇಲ್ಲ ಎನ್ನುವ ಗೊಂದಲದ ಗೂಡಿನಲ್ಲಿದ್ದೇವೆ. ಆಚಾರ ಅನಾಚಾರ ಕಾಟಾಚಾರಗಳಲ್ಲಿ ಆಚಾರವನ್ನು ಮಾತ್ರ ಪಾಲನೆ ಮಾಡುವುದರಲ್ಲಿ ಬದ್ಧರಾಗಬೇಕಾದ ನಾವು ಮೂರನ್ನು ಸಮ್ಮಿಲನ ಮಾಡಿ ಮುನ್ನಡೆಸುವ ಬದುಕು ನಿರಂತರ ಚಿಂತೆ ಎಂಬ ಚಿತೆಯಲ್ಲಿ ಬೇಯುತಿದೆ. ದೈವಗಳನ್ನು ಯಾರಿಂದಲೊ ಸುಭದ್ರ, ವಾಸ್ತುಶಿಲ್ಪಕ್ಕೆ ಬದ್ದವಾಗಿ ಕಟ್ಟಿದ ದೈವಸ್ಥಾನದಲ್ಲಿ ಪ್ರತಿಷ್ಠೆ ಮಾಡುವುದರೊಂದಿಗೆ ಮನ ಮೈದಾನದಲ್ಲಿ, ಬುದ್ದಿಯ ಸುತ್ತುಪೌಳಿ ಕಟ್ಟಿ, ದೈವದೊಂದಿಗೆ ಬದುಕು ಸಾಗಿದಾಗ ನಾವು ಸತ್ಯ ಧರ್ಮ ನ್ಯಾಯದ ಪರಿಪಾಲಕರಾಗಿ ನೆಮ್ಮದಿ ಬದುಕು ತನ್ನಿಂದ ತಾನೆ ನಮ್ಮ ಜೊತೆಗಿರುತದೆ. ದೈವದ ಮಹಿಮೆ ಜನತೆಗೆ ಸಾರಲು ದೈವಸ್ಥಾನದ ಜಾಗತಿಕ ಪ್ರಕಟಣೆ ಅತ್ಯಗತ್ಯ. ಆದ್ದರಿಂದ ಸಾರ್ವಜನಿಕ ದೈವಸ್ಥಾನದ ಪ್ರಕಟಣೆಗೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಈ ಸುಸಂದರ್ಭವನ್ನು ಬಳಸಿ ದೈವಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿ ಹಸನಾದ ಬಾಳು ನಮ್ಮದಾಗಲೆಂದು ಬಯಸುತ್ತ ನಿಮ್ಮ ಸ್ಪಂದನಕ್ಕೆ ಸ್ವಾಗತಿಸುತಿದ್ದೇವೆ
ನಿಮ್ಮ ನಮ್ಮ ಅನುಕೂಲಕ್ಕಾಗಿ ಕೆಲವು ನಿಯಮಗಳು
೧ . ಒಂದು ಪುಟ ಅಂದರೆ ೩೦೦ ಪದಗಳು ಮತ್ತು ಎರಡು ಭಾವಚಿತ್ರಕ್ಕೆ ಮಾತ್ರ ಉಚಿತ ಸೌಲಭ್ಯವಿದೆ
೨. ಹೆಚ್ಚಿನ ಅವಕಾಶ ಬೇಕಾದಲ್ಲಿ ಪದಗಳಿಗೆ ರೂಪಾಯಿ ೧೦ ರಂತೆ ೫೦ ಪದಗಳ ಪ್ಯಾಕೇಜ್ ಬಳಸಿ
೩. ಒಂದು ಪ್ರಕಟಣೆ ಯಾವುದೆ ಕಾರಣಕ್ಕೂ ಮೂರು ಪುಟಕ್ಕೆ ಕಡ್ಡಾಯ ಸೀಮಿತ – ೯೦೦ ಪದಗಳು ಮಾತ್ರ
೪. ಭಾವಚಿತ್ರ ಒಂದಕ್ಕೆ ರೂಪಾಯಿ ೧೦೦/- ರಂತೆ ಮಿತಿಯಿಲ್ಲದ ಅವಕಾಶ
೫. ಕನಿಷ್ಠ ಶುಲ್ಕದೊಂದಿಗೆ ವರದಿ ಬದಲಾವಣೆಗೆ ಅವಕಾಶ
೬. ವರದಿ ವೆಬ್ಗೆ ಅಪ್ಲೋಡ್ ಮಾಡುವ ರೀತಿಯಲ್ಲಿ ಮಾತ್ರ ಕಳುಹಿಸಿ
೭. ಮೂಲ ದೈವಾರಾಧನೆಗೆ ಮಹತ್ವ ಕೊಟ್ಟ ಉಲ್ಲೇಖವಿರಲಿ
೮. ದೈವ ಕಟ್ಟಿದವನ ಮಾತು ಬದಲು ದೈವದ ಮಾತುಗಳು ಬಂದ ಸನ್ನಿವೇಶಗಳ ಮಾಹಿತಿ ಕೊಡಿ
೯. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅನ್ಯರಿಗೆ ಆದರ್ಶವಾಗುವಂತೆ ಸ್ಪಂದಿಸಬೇಕಾಗಿ ಕೋರಿಕೆ
೧೦. ಉಚಿತ ಸೌಲಭ್ಯದ ಅವಧಿ ಮೀರಿದ ಮೇಲೆ ರೂಪಾಯಿ ೧೦೦೦/- ಶುಲ್ಕವಿರುತ್ತದೆ
೧೧. ಉಚಿತ ಸೌಲಭ್ಯಕ್ಕೆ ಏಳು ದಿನಗಳ ಮಿತಿ ಈ ದಿನ ಸೇರಿ

See also  Sanvi - Daughter of Ajaya and Sushma -Pandyappereguttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?