ನ್ಯಾಯಕ್ಕಾಗಿ ಹೋರಾಟ – ನ್ಯಾಯ ವಂಚಿತ ವ್ಯಕ್ತಿ, ನ್ಯಾಯಾಲಯದಲ್ಲಿ, ನ್ಯಾಯವಾದಿಯ ಮೂಲಕ, ಯಾರಿಂದ ತಾನು ನ್ಯಾಯ ವಂಚಿಲ್ಸಲ್ಪಟ್ಟಿದ್ದೇನೋ ಆತನ ವಿರುದ್ಧ ದಾವೆ ಹೂಡಿ, ಗಿಟ್ಟಿಸಿಕೊಳ್ಳುವ ನ್ಯಾಯವೆ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಯೊಬ್ಬ ಮಾಡುವ ನಿಜವಾದ ನ್ಯಾಯಕ್ಕಾಗಿ ಹೋರಾಟ. ಯಾವುದೇ ಪ್ರಜಾಪ್ರಭುತ್ವ ಪದ್ಧತಿ ಆಡಳಿತ ಅಳವಡಿಸಿದ ದೇಶದಲ್ಲಿ ನ್ಯಾಯಾಲಯದ ಮೂಲಕ ಮಾತ್ರ ನ್ಯಾಯ ಗಿಟ್ಟಿಸುವ ವಿಧಾನವನ್ನು ಬಿಟ್ಟು ಶಾಂತಿಯುತ ಯಾ ಅಶಾಂತಿಯುತ ಚಳವಳಿ …….ಇತ್ಯಾದಿ ಅನುಕರಣೆ ಮಾಡುತಿದ್ದರೆ ಆ ದೇಶದ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಪಾಠವನ್ನು ಮೊದಲ ಅಕ್ಸರ ಆ ಆ ದಿಂದ
ಪ್ರಾರಂಭಿಸಬೇಕಾಗಿರುವುದು ಅನಿವಾರ್ಯ.
ನಮ್ಮ ದೇಶದಲ್ಲಿ ಸದಾ ನ್ಯಾಯಕ್ಕಾಗಿ ಹೋರಾಟ – ಬೀದಿ ಬೀದಿಗಳಲ್ಲಿ – ಪ್ರತಿ ಪ್ರಜೆಗಳು ತನ್ನ ಸ್ಥಾನ ಮಾನ ಮರೆತು – ಬಾವುಟ ಪ್ರದರ್ಶಿಸಿ – ತನ್ನ ಕೃರ್ತವ್ಯ ಮರೆತು – ಸಂಬಳ ಸಂಭಾವನೆ ಪಡೆದು – ತಮ್ಮ ಏಳಿಗೆಯ ಜೊತೆಗೆ ದೇಶದ ಏಳಿಗೆಗೆ ಕಂಟಕರಾಗಿ – ಕೊನೆಗೂ ಅಲ್ಪ ಪ್ರಮಾಣದ ನ್ಯಾಯಕ್ಕೆ ತೃಪ್ತಿ ಪಟ್ಟು – ಬದುಕುವ ನಮ್ಮ ಬಾಳಿಗೆ ಪರಿಹಾರ ಇಲ್ಲವೇ ? ದೇಶ ಪ್ರಜ್ಞೆಯನ್ನು ದೇಹ ಪ್ರಜ್ಞೆಗೆ ಹೋಲಿಸಿ ನೋಡಿದಾಗ – ೧೩೦ ಕೋಟಿಗೂ ಮಿಗಿಲಾಗಿ ಪ್ರಜೆಗಳು – ಇದಕ್ಕೂ ಎಷ್ಟೋ ಪಟ್ಟು ಮಿಗಿಲಾಗಿ ದೇಹದಲ್ಲಿರುವ ಜೀವಾಣುಗಳ ಪೈಕಿ ಕೆಲವೇ ಜೀವಾಣುಗಳು ಗುಂಪು ಕಟ್ಟಿಕೊಂಡು ತಮ್ಮ ನ್ಯಾಯಕ್ಕಾಗಿ ಹೋರಾಡಿದರೆ ನಮ್ಮ ಬದುಕು ಆಗುವ ಸ್ಥಿತಿ ನಮ್ಮ ದೇಶಕ್ಕೆ ನಾವೆಲ್ಲರೂ ಸೇರಿ ಉಡುಗೊರೆ ರೂಪದಲ್ಲಿ ಕೊಡುತಿದ್ದೇವೆ.
ನ್ಯಾಯ ಉಚಿತವಾಗಿ ಯಾ ಅಲ್ಪ ವೆಚ್ಚದಲ್ಲಿ ಅತಿ ಶೀಘ್ರ ಪ್ರತಿಯೊಬ್ಬ ದೇಶದ ಪ್ರಜೆಗಳಿಗೆ ಸಿಗುವಂತೆ ಮಾಡುವುದು ಆಡಳಿತ ನಡೆಸುವವರ ಮೊದಲ ಕರ್ತವ್ಯ.
ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮಾ ಗಾಂಧೀಜಿ ಹಾಕಿ ಕೊಟ್ಟ ಶಾಂತಿಯುತ – ಸತ್ಯಾಗ್ರಹ, ಹೋರಾಟ – ಜನರನ್ನು ಒಟ್ಟುಗೂಡಿಸಿ ಮಾಡಿದಂತ ಚಳವಳಿ – ಇಂದಿಗೂ ಜೀವಂತವಾಗಿದ್ದು , ನಮ್ಮ ವಿರುದ್ಧ ನಾವು ಹೋರಾಟಕ್ಕೆ ವೇದಿಕೆಯಾಗಿ ಬಳಸುತಿರುವುದು – ದೇಶದ ಹಿತಕ್ಕಾಗಿ ಅಲ್ಲ – ಸ್ವಾರ್ಥ, ಸ್ವಜಾತಿ ಹಿತ , ಪಕ್ಷದ ಹಿತ , ಒತ್ತಡ ಹೇರಿ ನ್ಯಾಯವಲ್ಲದ ನ್ಯಾಯವನ್ನು ಪಡೆಯುವ ತಂತ್ರಗಾರಿಕೆ. ಇದು ನಮ್ಮ ಜ್ಞಾನ ಸಂಪತ್ತು ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಜಗತ್ತಿಗೆ ಸಾರಿ ಸಾರಿ ಹೇಳುತಿದೆ.
ಬೆರಳೆಣಿಕೆ ದಿನಗಳಲ್ಲಿ ಸಮಸ್ತ ಪ್ರಜೆಗಳಿಗೆ ಕ್ಲಪ್ತ ಸಮಯದಲ್ಲಿ , ಕಡಿಮೆ ವೆಚ್ಚದಲ್ಲಿ, ನ್ಯಾಯಕ್ಕಾಗಿ ಹೋರಾಟ ರಹಿತವಾಗಿ – ನ್ಯಾಯಾಲಯದ ಮೂಲಕವೇ – ನ್ಯಾಯ ದೊರಕಲು ಸಾಧ್ಯವಿದೆ. ಅದಕ್ಕಾಗಿ ಆಡಳಿತ ನಡೆಸುವವರು ಇದರತ್ತ – ಚಿಂತನ ಮಂಥನ ಅನುಷ್ಠಾನ ಮಾಡುವ ಅವಶ್ಯಕತೆ ಇದೆ. ಸೂಕ್ತ ಸಲಹೆಗಳು ಕೆಳಗಿನಂತಿವೆ
ನಮ್ಮ ದೇಶದ ಕಾನೂನು , ನಾವು ಮಾಡಿದ್ದು, ನಾವು ಅನುಷ್ಠಾನ ಮಾಡುವುದು, ತಪ್ಪಾದರೆ ನಾವೇ ಶಿಕ್ಷೆಗೆ ಒಳಗಾಗುವುದು
ದೇಶದ ಕಾನೂನಿಗೆ ದೇಶದ ಪ್ರತಿಯೊಬ್ಬ ಪ್ರಜೆಗಳು ಗೌರವಿಸಿ ಪಾಲನೆ ಮಾಡುವುದು
ಜೈಲುಗಳಿಗೆ ಪರಿವರ್ತನಾ ಕೇಂದ್ರ ಅಥವಾ ಮೌಲ್ಯ ವರ್ದನ ಕೇಂದ್ರವೆಂಬ ಉನ್ನತ ಮಟ್ಟದ ಹೆಸರಿನ ನಾಮಕರಣ
ದೈಹಿಕ ಕಾಯಿಲೆಗ ಆಸ್ಪತ್ರೆ ವಾಸದಂತೆ ಸಾಮಾಜಿಕ ಕಾಯಿಲೆಗೆ ಆಸ್ಪತ್ರೆ ವಾಸದ ಪರಿಕಲ್ಪ್ನೆಗೆ ಚಿಂತನೆ
ಒಂದು ತಪ್ಪಿಗೆ ಒಂದೇ ಶಿಕ್ಷೆ
ಶಿಕ್ಷೆಗೆ ಗುರಿಯಾದವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದಕ್ಕೆ ತಡೆ
ಇಲ್ಲಿಯವರೆಗೆ ಮಡಿದ ತಪ್ಪುಗಳಿಗೆ ವಿಶೇಷ ರಿಯಾಯಿತಿಯೊಂದಿಗೆ – ಬದಲಾವಣಿಗೆಗಾಗಿ ಸಹಕಾರಕ್ಕೆ ಮನವಿ
ಅನ್ಯಾಯದ ಪರ ವಾದ ಮಡುವ ಬದಲು ನ್ಯಾಯದ ಪರ ವಾದ ಮಾಡುವ ಅವಕಾಶ ನ್ಯಾಯವಾದಿಗಳಿಗೆ
ತ್ವರಿತ ಕೇಸುಗಳ ಇತ್ಯರ್ಥ ಹೆಚ್ಚು ಹೆಚ್ಚು ಕೇಸುಗಳು ಸಿಗುವ ಸಾಧ್ಯತೆ
ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ತಪ್ಪಿ – ದೇಶಕ್ಕೆ ಜನರಿಗೆ – ಕಷ್ಟ ನಷ್ಟ ತಪ್ಪಿ – ಅಭಿವೃದ್ಧಿಗೆ ಮನೋವೇಗ
ಎಲ್ಲ ಕ್ಷೇತ್ರಗಳಲ್ಲಿ ವಿಳಂಬ ನೀತಿ ಮಂಗಮಾಯ
ಲಂಚ ಮೋಸ ವಂಚನೆ – ತನ್ನ ಪರ ವಕಾಲತ್ತು ಮಾಡುವವರಿಲ್ಲದೆ ಅಂತ್ಯ
ಆಡಳಿತ ನೀರು ಕುಡಿದಷ್ಟು ಸುಲಭ
ಪ್ರಮಾಣೀಕರ, ಯೋಗ್ಯರ , ಸಂಖ್ಯೆ ಹೆಚ್ಚಳ – ಅಪ್ರಾಮಾಣಿಕರ ,ಅಯೋಗ್ಯರ ಸಂಖ್ಯೆ ವಿರಳವಾಗಿ ಮಾಯಾ
ಮುಂದುವರಿದ ಪ್ರಜಾಪದ್ಧತಿ ದೇಶಗಳಲ್ಲಿ ತಪ್ಪು ಯಾರೇ ಎಲ್ಲಿಯೇ ಮಾಡಿದ್ದರು ಕಾನೂನಿನ ಕಪಿಮುಷ್ಠಿಯಿಂದ ನುಣುಚಿಕೊಳ್ಳಲಾಗದ ಸ್ಥಿತಿ ನಮ್ಮ ದೇಶದಲ್ಲಿ ಸಾಧ್ಯತೆ .
ಕೊರೊನದಿಂದ ದೂರವಾದ ದೇಹಗಳು ಮಾನಸಿಕವಾಗಿ ಒಂದಾಗಿ ಮಾನವಕುಲಕೋಟಿಯ ಅಭಿವೃದ್ದಿಗಾಗಿ ಮುನ್ನಡೆಯೋಣ