ವಾಟ್ಸಪ್ಪ್ ಮತ್ತು ಫೇಸ್ಬುಕ್ ಪುಣ್ಯಾತ್ಮ ಪುಕ್ಕಟೆಯಾಗಿ ಜನಸಾಮಾನ್ಯರಾದ ನಮಗೆ ಕೊಟ್ಟಿದ್ದು ಅದನ್ನು ನಾವು ನಮ್ಮ ಸ್ವಾರ್ಥಕ್ಕೆ ಮಾತ್ರ ಬಳಸದೆ ಮಾನವ ಕುಲಕೋಟಿಯ ಅಭಿವೃದ್ಧಿಗೆ ಸದುಪಯೋಗ ಮಾಡಿದರೆ ಮಾತ್ರ ನಾವು ಗಿಟ್ಟಿಸಿದ ದಾನಧರ್ಮ ನಮಗೆ ಫಲಕೊಡಬಹುದು ಎಂಬುದನ್ನು ಅರಿತು ಬಾಳಿನ ಮುಂದಿನ ಹೆಜ್ಜೆ ಇಡೋಣ. ಒಂದು ರೂಪಾಯಿ ದಾನವಾಗಿ ನಾವು ಸ್ವೀಕರಿಸಿದರೆ ಅದಕ್ಕೆ ಕನಿಷ್ಠ ಒಂದು ರೂಪಾಯಿಯನ್ನಾದರೂ ಸೇರಿಸಿ ಅನ್ಯರಿಗೆ ದಾನ ಮಾಡಿದರೆ ಲೇಸೆಂಬ ನಾಣ್ಣುಡಿ ಮುಂದಿಟ್ಟು ಪ್ರಸ್ತುತ ವಾಟ್ಸಪ್ಪ್ ಮತ್ತು ಫಾಸಬುಕ್ನತ್ತ ದೃಷ್ಟಿ ಹಾಯಿಸಿದಾಗ – ನಮ್ಮ ಮುಂದಿರುವ ದಾರಿಗಳತ್ತ ಪಕ್ಷಿನೋಟ.
ನಿಮ್ಮನ್ನು ನೀವು ವಾಟ್ಸಪ್ಪ್ ಮತ್ತು ಫಾಸಬುಕ್ನಲ್ಲಿ ವಿವಿಧ ಬಂಗಿಗಳ ಫೋಟೋ ಹಾಕುವ ಬದಲು ಜಗತ್ತಿಗೆ ಪರಿಚಯಿಸಿ
ನಿಮ್ಮ ತಂದೆ ತಾಯಿ ಅಜ್ಜ ಅಜ್ಜಿ ಇನ್ನಿತರರನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿ
ನಿಮ್ಮ ವಂಶ ವೃಕ್ಷ ಪ್ರಪಂಚ ಕಾಣುವಂತೆ ಬೆಳೆಸಿ ತೋರಿಸಿ
ಪ್ರಪಂಚದ ಎಲ್ಲ ದೇವಾಲಯಗಳನ್ನು ಪ್ರತಿಯೊಬ್ಬರಿಗೂ ನೋಡುವ ಅವಕಾಶ ಕಲ್ಪಿಸಿ
ಪ್ರಪಂಚದ ಯಾವುದೇ ಮೂಲೆಯಿಂದ ಹೆಣ್ಣಿಗೆ ಗಂಡು , ಗಂಡಿಗೆ ಹೆಣ್ಣು ನೋಡಲು ಬೆರಳ ತುದಿಯಲ್ಲಿ ಅವಕಾಶ ಕಲ್ಪಿಸೋಣ
ನಮ್ಮ ಶಾಲೆ , ಸಂಘ ಸಂಸ್ಥೆ , ಇನ್ನಿತರ ಸಮುಸ್ತೆಗಳನ್ನು ವಿಶ್ವ ಮಟ್ಟಕ್ಕೆ ಬೆಳೆಸೋಣ
ವಾಟ್ಸಪ್ಪ್ ಮತ್ತು ಫೇಸ್ಬುಕ್ ಗ್ರೂಪ್ ಮಾಡಿ ಹೊಸ ಹೊಸ ಆವಿಸ್ಕಾರಗಳ ಸರಮಾಲೆಯನ್ನು ಮುಂದಿಡೋಣ
ಒಂದು ದೇವಸ್ಥಾನದ ಭಕ್ತ ಸಮೂಹಕ್ಕೆ, ಇನ್ನಿತರ ಸಂಘ ಸಂಸ್ಥೆಗಳ ಸದಸ್ಯರಿಗೆ ಒಂದೇ ಸೆಕೆಂಡಿನಲ್ಲಿ ಸಂದೇಶಕ್ಕೆ ದಾರಿ ಕಲ್ಪಿಸಿ
ಒಂದು ಗ್ರೂಪಿನ ಸಹಾಯದಿಂದ ಹೆಸರು ಊರು ಭಾವಚಿತ್ರ ಸಹಿತ , ದೇವಸ್ಥಾನದ , ಒಂದು ಜಾತಿ ಪಂಗಡಗಳ ವಿವರ ಕಲ್ಪಿಸುವ ಜವಾಬ್ದಾರಿ ನಾವು ಹೊರೋಣ
ನಾವು ನೀವು ಸೇರಿ ಏನೇನು ಆವಿಸ್ಕಾರಗಳನ್ನು ಮಾಡಬಹುದು ಎನ್ನುವ ಚಿಂತನ ಮಂಥನ ಗ್ರೂಪುಗಳು ವೇದಿಕೆಯಾಗಲಿ
ಗ್ರೂಪುಗಳು ಕಸದ ತೊಟ್ಟಿಯಾಗುವುದನ್ನು ತಪ್ಪಿಸೋಣ
ಗ್ರೂಪಿನ ಅಡ್ಮಿನ್ಗೆ ಮಾತ್ರ ಪೋಸ್ಟ್ ಮಾಡುವತ್ತ ಚಿಂತಿಸೋಣ
ಗ್ರೂಪುಗಳು ಸಂತೆ ಮಾರ್ಕೆಟ್ ಆಗಿ ಕಿರಿ ಕಿರಿ ತಪ್ಪಿಸಲು ಗ್ರೂಪ್ ತೊರೆಯುವ ಹವ್ಯಾಸ ಕಡಿಮೆ ಮಾಡೋಣ
ಚಾಟಿಗಾಗಿ ಗ್ರೂಪ್ ಮತ್ತು ಸಂದೇಶಕ್ಕಾಗಿ ಗ್ರೂಪ್ ವಿಭಜನೆಯತ್ತ ಗಮನ ಹರಿಸೋಣ
ದೇವಸ್ಥಾನಗಳ, ಸಂಘ ಸಂಸ್ಥೆಗಳ, ಜಾತಿ ಸಂಘಟನೆಗಳ ಬೆಂಗಾವಲಾಗಿ ಗ್ರೂಪುಗಳು ನಿಂತಾಗ -ಅಭಿವೃದ್ಧಿಯ ಜೋಡೆತ್ತು ಮುನ್ನಡೆಯುತದೆ
ನಮ್ಮ ಈ ಅಭಿವೃದ್ಧಿ ಕೆಲಸಗಳಿಗೆ ಹೆಗಲು ಕೊಡುವ ಗೂಗಲ್ ಬ್ಲಾಗ್ ಇನ್ನಿತರ ಸಂಸ್ಥೆಗಳು ಸನ್ನದ್ಧವಾಗಿವೆ
ನಮ್ಮ ಚಟುವಟಿಕೆಯಿಂದ ತೃಪ್ತಿ ಪಡದಿದ್ದರು ಬೇಸತ್ತು ವಾಟ್ಸಪ್ಪ್ ಫೇಸ್ಬುಕ್ ಇಲ್ಲದ ದಿನ ಬಾರದಂತೆ ನೋಡಿಕೊಳೋಣ
ಒಳ್ಳೆಯ ಮಗು ಕೆಟ್ಟ ಮಗು ಹುಟ್ಟಿಲ್ಲ – ಬೆಳೆದಾಗ ಆಗಿದೆ – ಒಳ್ಳೆಯ ವ್ಯಕ್ತಿಯಾಗಿ ಬೆಳೆಸುವ ಸಂಕಲ್ಪ ಮಾಡೋಣ