ಬರ್ತ್ ಡೇ ಬುಲೆಟಿನ್
ಮ್ಯಾರೇಜ್ ಡೇ ಬುಲೆಟಿನ್
ಪ್ರೊಫ್ಫೆಷನ್ ಬುಲೆಟಿನ್
ಬಿಸಿನೆಸ್ ಬುಲೆಟಿನ್
ಕಂಡೊಲೆನ್ಸ ಬುಲೆಟಿನ್
ಜಾಗತಿಕ ಮಟ್ಟದ ಅತ್ಯಂತ ಪ್ರಭಾವಿ ಮತ್ತು ವೇಗದ ಮಾಧ್ಯಮ ಇಂದು ಮೊಬೈಲ್ ಆಗಿದೆ . ಇದು ವಿಬ್ಬಿಣ್ಣ ಕ್ಷೇತ್ರಗಳನ್ನು ಆಕ್ರಮಿಸಿ ತನ್ನ ಸ್ಥಾನವನ್ನೂ ಭದ್ರಪಡಿವಿಸುವಲ್ಲಿ ಮನೋವೇಗದಲ್ಲಿ ಮುನ್ನುಗುತಿದೆ. ತಾಯಿ ಹೊಟ್ಟೆಯಲ್ಲಿರುವ ಮಗುವಿನಿಂದ ಹಿಡಿದು ವಯೋವೃದ್ಧರನ್ನು ತನ್ನ ಬಳಿಗೆ ಸೆಳೆದು – ಅವರನ್ನು ಕೂಡ ಬಂದಿಯಾಗಿಸಿ – ದಾಸರನ್ನಾಗಿಸಿ – ಮುಂದೆ ಮುಂದೆ ಸಾಗುತಿದೆ.
ಬೆರಳೆನಿಕೆ ವ್ಯಕ್ತಿಗಳು ಮತ್ತು ದೇಶಗಳು ಈ ನಿಟ್ಟಿನಲ್ಲಿ ಹೊಸ ಹೊಸ ಆವಿಸ್ಕಾರಗಳನ್ನು ತನ್ನದಾಗಿಸಿಕೊಂಡು ತನ್ನ ಏಳಿಗೆಯೊಂದಿಗೆ ಸಮಾಜದ ದೇಶದ ಜೊತೆಗೆ ಜಾಗತಿಕ ಅಭಿವೃದ್ಧಿಗೆ ಬಳಸಿ ಸ್ಥಾನ ಮಾನ ಘನತೆ ಗೌರವಗಳ ಅತ್ಯುನ್ನತ ಪೀಠದಲ್ಲಿ ವಿರಾಜಮಾನರಾಗುತಾರೆ. ಹುಟ್ಟು ಸಾವು ಮದ್ಯೆ ಇರುವ ಬದುಕನ್ನು ಸದುಪಯೋಗ ಯಾ ದುರುಪಯೋಗ ನಮ್ಮ ಕೈಯಲ್ಲಿದೆ. ಕತ್ತಲೆಯಿಂದ ಬೆಳಕಿಗೆ ಬಂದು ಬದುಕಿನ ಮರ್ಮ ತಿಳಿದು ನಮ್ಮ ಏಳಿಗೆಯತ್ತ ನಾವು ಸಾಗಿಸೋಣ.
ಒಂದು ಕಾಲದಲ್ಲಿ ಎಲ್ಲವು ಸೇವೆ – ಇಂದು ಎಲ್ಲವು ವ್ಯಾಪಾರ , ಪ್ರತಿಯೊಬ್ಬರೂ ಸೇವಾ ಮುಖವಾಡ ಹಾಕಿಕೊಂಡು ವ್ಯಾಪಾರಿಗಳಾಗಿ ಯಾ ದರೋಡೆಕೋರರಾಗಿ ಬಾಳುವೆ ನಡೆಸುವ ಅತಿ ಕ್ಲಿಷ್ಟಕರ ಸ್ಥಿತಿ ಮಾನವರಿಗೆ ಬಂದು ಒದಗಿದೆ. ಇದರ ಬದಲಾಗಿ ಸೇವಾ ಮನೋಭಾವನೆಯೇ ಬದುಕಾಗಿ – ಸೇವೆಗೆ ದೊರಕುವ ಫಲದಿಂದ ಬದುಕುವ ಅಂದಿನ ಮಾನವ ಬದುಕು ನಮ್ಮದಾಗಿ – ನೆಮ್ಮದಿ ಸುಖ ಶಾಂತಿ ಪ್ರಪಂಚಕ್ಕೆ ಪ್ರಯಾಣ ಬೆಳೆಸೋಣ.
ಮೊಬೈಲ್ ತೆರೆದಾಗ – ದೈವ ದೇವರು ಮತ್ತು ಬದುಕಿನ ಅರಿವು ಹುಟ್ಟಿಸುವ ಪುಟ್ಟ ಪ್ರಯತ್ನದ ಫಲವೇ – ಪಂಚ ಸೂತ್ರಗಳು.ನಡು ರಸ್ತೆಯಲ್ಲಿ ದೇವರಾನಿತ್ತು ಪೂಜಿಸಿ ಎಂಬ ನಡೆದಾಡುವ ದೇವರ ನುಡಿ ಮುತ್ತುಗಳ ಪ್ರರಣೆಯೇ ಈ ಪಂಚ ಸೂತ್ರ.
ಮೇಲಿನ ಐದು ಸೂತ್ರಗಳಿಂದ ಪ್ರತಿ ಮಾನವರನ್ನು ನಿಖರವಾಗಿ ಪರಿಚಯಿಸುವ ಕೆಲಸ ಆಗುವುದರೊಂದಿಗೆ ದೈವ ದೇವರ ಬಾಂದವ್ಯ ವೃದ್ಧಿಗೆ ಇದು ವೇದಿಕೆಯಾಗಲಿದೆ.
ಪ್ರತಿ ದೈವಾಲಯ ದೇವಾಲಯಗಳು ಸಂಪನ್ಮೂಲಗಳ ಕೊರತೆ ಅನುಭವಿಸುತಿದ್ದು – ಬೇರೆ ಬೇರೆ ಮಾರ್ಗಗಳಿಂದ ಕ್ರೂಡೀಕರಣಕ್ಕಾಗಿ ಹರಸಾಹಸ ಪಡುವವರಿಗೆ ಐದು ಸೂತ್ರಗಳ ಪೈಕಿ ಒಂದನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ – ಸ್ವಾವಲಂಬಿ ಸಂತುಷ್ಟ ದೇವಾಲಯಗಳು agalu ಕೆಲವೇ ದಿನಗಳು ಸಾಕು – ಇದಕ್ಕೆ ಸೂತ್ರಗಳ ಆಳಕ್ಕೆ ಹೋಗುವ ತಾಳ್ಮೆ ಸಹನೆ ಬೇಕು – ಭಾರತೀಯರ ಮನೋಭಾವನೆಗಳ ಬದಲಾಗಿ – ಕಾಲೆಳೆಯುವ ಪ್ರವೃತಿಗೆ ವಿದಾಯ ಹೇಳಿ – ಅಜ್ಜ ನಟ್ಟ ಆಲದ ಮರದ ಕೆಳಗೆ ಬದುಕುವ ಬದಲು – ಕುರಿಗಳಾಗಿಯೋ , ಜೀತದಾಳಾಗಿಯೋ, ದನಪಿಶಾಚಿಗಳಾಗಿಯೋ, ಪಾಪಿಗಳಾಗಿಯೋ, ಅಜ್ಞಾನಿಗಳಾಗಿಯೋ, ಮೂಢನಂಬಿಕೆಯವರಾಗಿಯೋ, ಅನ್ನದ ಋಣ ತೀರಿಸುವ ಕರ್ಣನಾಗಿಯೋ …………………………………………ಬದುಕುವ ಕತ್ತಲೆ ಬದುಕಿನಿಂದ ಹೊರಬಂದು ನಾವು ಬದುಕೋಣ.
ಪ್ರತಿ ಮಾನವರಲ್ಲಿ ಜೀವರಾಶಿಗಳಲ್ಲಿ ದೇವರನ್ನು ಕಾಣುವ ಸಂಸ್ಕಾರ ನಮ್ಮದಾಗಲಿ