ರೋಗಿಯೊಬ್ಬನನ್ನು ರೋಗ ಮುಕ್ತಗೊಳಿಸುವಲ್ಲಿ ದಾದಿಯರ ಪಾತ್ರ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ರೋಗಿಗೆ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಬೇಕು ಬೇಕಾದ ಆರೈಕೆ ಮಾಡಿ – ನಿರಂತರ ಸೇವೆಯ ಜೊತೆ ನಗುಮುಖದೊಂದಿಗೆ ವ್ಯವಹರಿಸುತ್ತಾ – ಕೆಲವೇ ಸಮಯಗಳಲ್ಲಿ ರೋಗಮುಕ್ತವಾಗುವ ಆಶಾಜ್ಯೋತಿಯನ್ನು ರೋಗಿಯಲ್ಲಿ ಬೆಳಗಿಸುವ ದಾದಿಯರ ಬದುಕು – ರೋಗಿಗೆ ಕಣ್ಣಿಗೆ ಕಾಣುವ ದೇವರೆಂದು ಭಾವನೆ ಮೂಡಿದರೆ ವೃತ್ತಿಗೆ ಸಂದ ನಿಜವಾದ ಗೌರವ ಎಂದು ಪರಿಗಣಿಸಬಹುದು. ಲೋಪಮುಕ್ತ – ವೃತ್ತಿ ಸಮಾಜ ಇತ್ಯಾದಿ ಇರಲು ಈ ಕಲಿಯುಗದಲ್ಲಿ ಸಾಧ್ಯವಿಲ್ಲ ಎಂಬ ವಿಷಯ ಅರಿತು – ನಾವು ಸದಾ ಪ್ರಗತಿಪರದತ್ತ ಮಾತ್ರ ಒಲವು ಹರಿಸೋಣ.
೧ . ನಮ್ಮನ್ನು ನಾವು ಜಗತ್ತಿಗೆ ಪರಿಚಯಿಸುವ ಏಕಮಾತ್ರ ವೇದಿಕೆ ಬಳಸೋಣ
೨. ಇದರಿಂದ ವೃತಿಯ ಸ್ಥಾನ ಮನ ಘನತೆ ಗೌರವ ಸಂಪತ್ತು ವೃದಿಸುತದೆ
೩. ಹುದ್ದೆಯ ವ್ಯಾಪ್ತಿ ಹೆಚ್ಚಾಗುತದೆ
೪. ಉದ್ಯೋಗ ಸ್ಟ್ರೆಸ್ಟ್ರಿಯಲ್ಲಿ ಈ ಬುಲೆಟಿನ್ ಗುರುತರ ಸಾಧನೆ ಮಾಡುವಸಾದ್ಯತೆ ಇದೆ
೫. ಮಾನವ ಮಾನವರ ಸಂಬಂಧಗಳ ಜೋಡಣೆ ವೃದ್ಧಿ
೬. ಕನಿಷ್ಠ ಸೇವಾ ಶುಲ್ಕದಿಂದ ಮಾತ್ರ ಪ್ರಕಟಣೆ ಸಾಧ್ಯತೆ
೭.ಮೊಬೈಲ್ ಬಳಕೆಯ ವ್ಯಾಪ್ತಿ ವಿಸ್ತರಣೆ
೮. ಸಾಧಕರಿಗೆ ಆವಿಸ್ಕಾರರಿಗೆ ಹೆಚ್ಚಿದ ಅವಕಾಶಗಳು
೯. ಈ ನಿಟ್ಟಿನಲ್ಲಿ ಉದ್ಯಮ ಉದ್ಯೋಗಗಳಿಗೆ ವಿಪುಲ ಅವಕಾಶ
ನಮ್ಮನ್ನು ನಾವು ಅಭಿವೃದ್ಧಿಯ ಶಿಖರಕೇರಿಸುವ ದ್ರದ ಸಂಕಲ್ಪದತ್ತ ಮುನ್ನುಗ್ಗೋಣ