ನಾವು ನಮ್ಮ , ನಮ್ಮ ತಂದೆ ತಾಯಿ, ಅಜ್ಜ ಅಜ್ಜಿ , ಬಂದು ಮಿತ್ರರು , ಹಿತೈಷಿಗಳು ……… ಇತ್ಯಾದಿ ಜನರ ಸಂಕ್ಷಿಪ್ತ ಸಮಗ್ರ ಜೀವನ ಚರಿತ್ರೆ ಪ್ರಕಟಿಸುವುದು ನಮ್ಮ ಆದ್ಯ ಕರ್ತವ್ಯ . ಈ ನಮ್ಮ ಪುಟ್ಟ ಕೆಲಸ – ನಮ್ಮ ಹಿರಿಯರು ನಮಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಎಲ್ಲ ರೀತಿಯ ತ್ಯಾಗ ಮಾಡಿದಕ್ಕೆ ನಮ್ಮ ಕಿರುಕಾಣಿಕೆ ಮತ್ತು ಇದು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪ. ನಮ್ಮ ಬದುಕಿನಲ್ಲಿ ನಾವು ಮದುವೆ ದಿನ ಹುಟ್ಟು ಹಬ್ಬ ಮಕ್ಕಳ ಹುಟ್ಟುಹಬ್ಬ ಇತ್ಯಾದಿ ಬೇರೆ ಬೇರೆ ರೀತಿಯಲ್ಲಿ ವೆಚ್ಚ ಮಾಡುವ ನಾವು ಇದರ ಕನಿಷ್ಠ ವಾರ್ಷಿಕ ವೆಚ್ಚದ ೧೦% ಜೀವನದಲ್ಲಿ ಒಮ್ಮೆ ವೆಚ್ಚಮಾಡಿ ಅವರ ಜೀವನ ಚರಿತ್ರೆ ಪ್ರಕಟಿಸಿದರೆ ಅಳಿಲ ಸೇವೆ ಮಡಿದ ತೃಪ್ತಿ ನಮಗಿರುತದೆ. ಪುಟಗಟ್ಟಲೆ ಪ್ರಬಂಧ ರೀತಿಯಲ್ಲಿ ಬರೆಯುವ ಅವಶ್ಯಕತೆ ಇರುವುದಿಲ್ಲ, ಕನಿಷ್ಠ ನೂರು ಪದಗಳಿಂದ ಆರಂಭಿಸಿ ಗರಿಷ್ಠ ಒಂದು ಸಾವಿರ ಪದಗಳಿಗೆ ಮಿತಿಗೊಳಿಸಿ, ಬೇಕು ಬೇಕಾದ ಭಾವಚಿತ್ರ ಪ್ರಕಟಿಸಿದರೆ ಸಾಕು. ಮೊಬೈಲ್ ಯುಗದಲ್ಲಿ ಬದುಕುತಿರುವ ನಾವು ನಮ್ಮ ಹಿರಿಯರನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಅರ್ಥಪೂರ್ಣ.
ಮಾದರಿ ಜೀವನ ಚರಿತ್ರೆ ಕೆಳಗಿದೆ
೧. ಸಂಸಾರ ಪರಿಚಯ
೨. ವೃತಿ ಮತ್ತು ಶಿಕ್ಸಣ
೩. ಧಾರ್ಮಿಕ ಸಾಮಾಜಿಕ ಸಾಂಸಾರಿಕ ಜೀವನದ ಕಿರು ಚಿತ್ರಣ
೪. ವ್ಯಕ್ತಿತ್ವ ಕುರಿತು ಮಾಹಿತಿ
೫. ಬದುಕಿನಲ್ಲಿ ಉಲ್ಲೇಖವಾಗಿರುವ ಚುಟುಕುಗಳು
೬.ಬಹು ಮುಖ್ಯವಾದ ಭಾವಚಿತ್ರಗಳು